ಸೋಮವಾರಪೇಟೆ, ಜು. ೧: ರೋಟರಿ ಕ್ಲಬ್ ಆಫ್ ಸೋಮವಾರ ಪೇಟೆ ಹಿಲ್ಸ್ನ ನೂತನ ಸಾಲಿನ ಅಧ್ಯಕ್ಷರಾಗಿ ನಂಗಾರು ವಸಂತ್ ಆಯ್ಕೆ ಯಾಗಿದ್ದು, ಇಲ್ಲಿನ ಸಂಕಪ್ಪ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಕಾರ್ಯಕ್ರಮವನ್ನು ಪಿಡಿಜಿ ಎಂ. ಲಕ್ಷಿö್ಮÃನಾರಾಯಣ್ ನೆರವೇರಿಸಿ ಮಾತನಾಡಿ, ರೋಟರಿ ಸಂಸ್ಥೆ ಪ್ರಪಂಚದಲ್ಲಿ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲ ಜಾತಿ, ಮತ, ಸಮುದಾಯದವರಿಗೂ ಯಾವುದೇ ತಾರತಮ್ಯ ಮಾಡದೆ, ಸದಸ್ಯತ್ವ ನೀಡುತ್ತಾ ಸೇವೆಯಲ್ಲಿ ೧೧೮ ವರ್ಷಗಳನ್ನು ಸವೆಸಿದೆ ಎಂದರು.

ಯೋಜನೆಗಳನ್ನು ಸಿದ್ಧಪಡಿಸಿ ಕೊಂಡು, ಅದರ ಕಾರ್ಯಗತಕ್ಕಾಗಿ ಕರ್ತವ್ಯನಿಷ್ಠೆ, ಕ್ಷಮತೆಯಿಂದ ಕಾರ್ಯಸಿದ್ಧಿ ಮಾಡುತ್ತಿದೆ. ಸಮಾಜಕ್ಕೆ ಮಾಡಬಹುದಾದ ಸೇವೆಯ ಚಿಂತನೆಗಳನ್ನು ಬೆಳೆಸಿಕೊಂಡು ಕೆಲಸ ಮಾಡುತ್ತಿದೆ. ಎಲ್ಲ ಸದಸ್ಯರು ಒಂದೇ ಕುಟುಂಬದ ಸದಸ್ಯರಂತೆ ಕಾರ್ಯ ವೆಸಗುವುದರಿಂದ ಅಂದುಕೊAಡ ಯೋಜನೆಗಳು ಸಫಲವಾಗಲು ಸಾಧ್ಯವಾಗುತ್ತಿದೆ ಎಂದರು.

ರೋಟರಿ ಸದಸ್ಯತ್ವದಿಂದ ಸಂಬAಧಗಳ ಬೆಸುಗೆ ಬೆಳೆಯುತ್ತದೆ. ಸಂಸ್ಥೆಯ ಸಿದ್ಧಾಂತಗಳನ್ನು ಅರಿತುಕೊಂಡು ಮುನ್ನಡೆದಲ್ಲಿ ಯೋಜನೆ ಯಶಸ್ವಿಯಾಗಲು ಸಾಧ್ಯ. ಸಮಾಜದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಯೋಜನೆಗಳನ್ನು ಮಾಡಿಕೊಂಡು ಅವರ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯ ಸದಸ್ಯರು ಮುಂದಾಗಬೇಕು. ಎಲ್ಲ ಸದಸ್ಯರು ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ನೂತನ ಸಾಲಿನ ಅಧ್ಯಕ್ಷರಾದ ನಂಗಾರು ವಸಂತ್ ಮಾತನಾಡಿ, ಸಂಸ್ಥೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಲು ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ೨೦೨೩-೨೪ರ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಚೇತನ್ ಚಂದ್ರಾಜು, ಕಳೆದ ಸಾಲಿನ ಸಹಾಯಕ ಗವರ್ನರ್ ಎಸ್.ಕೆ. ಸತೀಶ್, ಅಧ್ಯಕ್ಷ ಹೆಚ್.ಸಿ. ಲೋಕೇಶ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಇದ್ದರು.ಸಂಸ್ಥೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಲು ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ೨೦೨೩-೨೪ರ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಚೇತನ್ ಚಂದ್ರಾಜು, ಕಳೆದ ಸಾಲಿನ ಸಹಾಯಕ ಗವರ್ನರ್ ಎಸ್.ಕೆ. ಸತೀಶ್, ಅಧ್ಯಕ್ಷ ಹೆಚ್.ಸಿ. ಲೋಕೇಶ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಇದ್ದರು.