ಕುಶಾಲನಗರ, ಜೂ. ೩೦: ಕುಶಾಲ ನಗರ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷ ರಾಗಿ ಸುನೀತಾ ಮಹೇಶ್ ಕಾರ್ಯ ದರ್ಶಿಯಾಗಿ ಕೆ.ಎಸ್ ಶರ್ಲಿ, ಖಜಾಂಚಿಯಾಗಿ ರಿಚರ್ಡ್ ಡಿಸೋಜ ಅಧಿಕಾರ ಸ್ವೀಕರಿಸಿದರು.
ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಎಂ.ಎA. ಸುರೇಶ್ ಚಂಗಪ್ಪ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮಾತನಾಡಿದ ಅವರು ರೋಟರಿ ಕ್ಲಬ್ ಸಮಾಜ ಸೇವೆಗೆ ಮಾದರಿಯಾಗಿದೆ. ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳಿಗೆಗಾಗಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ ಎಂದರು. ಸಹಾಯಕ ರಾಜ್ಯಪಾಲ ಎಂ.ಡಿ ಲಿಖಿತ್ ಮಾತನಾಡಿ, ಅಂತರರಾಷ್ಟಿçÃಯ ಮಟ್ಟದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ಸದಸ್ಯರು ವೈಯಕ್ತಿಕವಾಗಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವAತಾಗಬೇಕು ಎಂದರು. ಇದೇ ಸಂದರ್ಭ ಅಂಗನವಾಡಿ ಮಕ್ಕಳಿಗೆ ಕುರ್ಚಿ ಹಾಗೂ ಚಾರ್ಟ್ಗಳನ್ನು ವಿತರಿಸ ಲಾಯಿತು. ಸ್ಥಳೀಯ ಸಾಧಕರಾದ ಪ್ರಗತಿ ಬಡಿಗೇರ್, ವಾಯು ಸೇನೆಯ ಫ್ಲೆöÊಯಿಂಗ್ ಆಫೀಸರ್ ಸಚಿನ್ ಬ್ಯಾಂಬೂರೆ, ಪಟ್ಟಣ ಪಂಚಾಯಿತಿ ಸದಸ್ಯ ವಿ.ಎಸ್. ಆನಂದ್ ಕುಮಾರ್ ಅವರುಗಳನ್ನು ಸನ್ಮಾನಿಸಿ ಗೌರವಿಸ ಲಾಯಿತು. ಈ ಸಂದರ್ಭ ಕ್ಲಬ್ ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿಬು ಥಾಮಸ್, ನಿಕಟಪೂರ್ವ ಸಹಾಯಕ ರಾಜ್ಯಪಾಲ ಮಹೇಶ್ ನಾಲ್ವಡೆ, ಕ್ಲಬ್ ಸಲಹೆಗಾರ ಎಂ.ಡಿ. ರಂಗಸ್ವಾಮಿ, ನಿರ್ದೇಶಕ ಡಾ. ಹರಿ ಶೆಟ್ಟಿ ಉಪಸ್ಥಿತರಿದ್ದರು. ನಿದೇರ್ಶಕರುಗಳಾಗಿ ರಾಣಿ ಉಲ್ಲಾಸ್, ಎಂ.ಎA. ಸಂತೋಷ್ ಪಿ. ನವೀನ್, ಉಮಾಶಂಕರ್, ಶೋಭಾ ಸತೀಶ್, ಡಾ. ಧರಣೇಂದ್ರ, ಕಿರಣ್ದೇವಯ್ಯ, ಜಾಕೋಬ್, ರಮೇಶ್ ಕುಮಾರ್, ಎನ್.ಜಿ. ಪ್ರಕಾಶ್, ಟಿ.ವಿ. ರವಿ, ಆರತಿ ಎಚ್. ಶೆಟ್ಟಿ ಆಯ್ಕೆಯಾಗಿದ್ದಾರೆ.