ಗೋಣಿಕೊಪ್ಪ, ಜೂ. ೩೦: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆ ಆಚರಿಸಲಾಯಿತು. ಪ್ರಾಂಶುಪಾಲ ಡಾ. ಎಂ. ರಾಮಚಂದ್ರ ಮಾತನಾಡಿ, ಕೆಂಪೇಗೌಡರ ಸಾಧನೆಯನ್ನು ವರ್ಣಿಸಿದರು. ವಿಜಯನಗರ ಸಾಮ್ರಾಜ್ಯದ ಪಾಳೆಯಗಾರರಾಗಿದ್ದ ಕೆಂಪೇಗೌಡ ನಾಡಪ್ರಭು ಆಗಿ ಮೆರೆದ ವಿಚಾರ ಮನದಟ್ಟಾಗಿ ವರ್ಣಿಸಿದರು. ದೇಶದಲ್ಲೇ ಅಲ್ಲದೇ ಇಡೀ ವಿಶ್ವದಲ್ಲಿ ಮುಂಚೂಣಿ ನಗರಗಳಲ್ಲಿ ಒಂದಾದ ಬೆಂಗಳೂರು ನಗರವನ್ನು ನಿರ್ಮಿಸಿದ್ದು ಕೆಂಪೇಗೌಡರ ಹೆಗ್ಗಳಿಕೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೆಂಪೇಗೌಡರ ಸಾಧನೆಗಳ ಬಗ್ಗೆ ವಿವರಿಸಿದರು. ಕೆರೆ ಕಟ್ಟೆ ಸೇರಿದಂತೆ ಹಲವು ಜನೋಪಯೋಗಿ ಕಾರ್ಯ ನೆರವೇರಿಸಿದ ಕೆಂಪೇಗೌಡರ ನೆನಪಿಗಾಗಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ಇವರ ಹೆಸರಿಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರುಗಳಾದ ವಿಜಯಲಕ್ಷಿö್ಮ ಎಸ್., ವೇದ ಬೋಪಣ್ಣ ಮತ್ತು ಶೈಕ್ಷಣಿಕ ಸಂಯೋಜಕರಾದ ಸಾಂಚಿತ ಚೆಂಗಪ್ಪ ಭಾಗಿಯಾಗಿದ್ದರು. ವಿದ್ಯಾಸಂಸ್ಥೆಯ ಎಲ್ಲಾ ಬೋಧಕ - ಬೋಧಕೇತರ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.