ಮಡಿಕೇರಿ, ಜೂ. ೩೦: ಮಡಿಕೇರಿಯ ಹಿರಿಯ ಉಪ ನೋಂದಣಿ ಇಲಾಖಾ ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ಕೆಲಸ ಆಗುತ್ತಿಲ್ಲ; ಎಲ್ಲದಕ್ಕೂ ಸತಾಯಿಸ ಲಾಗುತ್ತದೆ. ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆAದು ಆರೋಪಿಸಿ ಸಾರ್ವಜನಿಕರು ಹಾಗೂ ವಕೀಲರು ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ಎದುರಾಯಿತು.
ಗೌಳಿಬೀದಿಯಲ್ಲಿರುವ ಉಪ ನೋಂದಣಿ ಕಚೇರಿಗೆ ಎಂದಿನAತೆ ಇಂದೂ ಕೂಡ ಸಾರ್ವಜನಿಕರು ತಮ್ಮ ಕೆಲಸ - ಕಾರ್ಯಗಳಿಗೆ ಆಗಮಿಸಿದ್ದರು. ಗಾಳಿಬೀಡು ಪಂಚಾಯಿತಿಯ ಹಮ್ಮಿಯಾಲ ಗ್ರಾಮಕ್ಕೆ ಸಂಬAಧಿಸಿದ ಜಾಗವೊಂದರ ನೋಂದಣಿ ಪ್ರಕ್ರಿಯೆ ಇಂದು ಆಗಬೇಕಾಗಿತ್ತು. ಈ ಸಂಬAಧ ಸಂಬAಧಿಸಿದ ಖಾತೆದಾರರು ಬಂದಿದ್ದರು. ಆದರೆ ಕಚೇರಿ ಅಧಿಕಾರಿ ಸೌಮ್ಯಲತಾ ರಜೆಯಲ್ಲಿದ್ದರು. ಬದಲಿಗೆ ಕುಶಾಲನಗರ ಸಚಿನ್ ಎಂಬವರನ್ನು ಪ್ರಬಾರವಾಗಿ ನಿಯೋಜಿಸಲಾಗಿತ್ತು. ನೋಂದಣಿ ಸಂಬAಧ ಆನ್‌ಲೈನ್ ಮೂಲಕ ಪ್ರಕ್ರಿಯೆ ನಡೆಯ ಬೇಕಿತ್ತಾದರೂ ಅಧಿಕಾರಿ ಸಂಬAಧಿಸಿದ ಆ್ಯಪ್ ಅನ್ನು ಲಾಕ್ ಮಾಡಿದ್ದರಿಂದ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ.
ಬೆಳಿಗ್ಗೆಯಿಂದ ಸಂಜೆವರೆಗೆ ಕಾದು ಕುಳಿತರೂ ಕಚೇರಿಯಲ್ಲಿದ್ದವರು ‘ಸರ್ವರ್ ಸರಿ ಇಲ್ಲ’ ಎಂಬ ನೆಪವನ್ನಷ್ಟೇ ಹೇಳುತ್ತಿದ್ದರು. ಇದರೊಂದಿಗೆ ಇನ್ನೂ ಹಲವು ಮಂದಿ ಸಾರ್ವಜನಿಕರು ಹಾಗೂ ವಕೀಲರುಗಳು ಕೂಡ ಕೆಲಸಕ್ಕೆಂದು ಬಂದಿದ್ದರು. ಎಲ್ಲರೂ ಕಾದು ಕುಳಿತು ಬಸವಳಿದ ಬಳಿಕ
(ಮೊದಲ ಪುಟದಿಂದ) ಸಂಜೆ ವೇಳೆಗೆ ತಾಳ್ಮೆ ಕಳೆದುಕೊಂಡು ಕಚೇರಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಕರೆಯಿAದ ‘ಓಪನ್!’
ವಾದ - ವಿವಾದ ಉಂಟಾಗುತ್ತಿದ್ದAತೆ ಕೆಲವರು ಶಾಸಕ ಡಾ. ಮಂಥರ್‌ಗೌಡ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಶಾಸಕರು ಅತ್ತಲಿಂದ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ ಕೂಡಲೇ ಇತ್ತ ಇಲ್ಲಿ ಕಚೇರಿಯಲ್ಲಿ ‘ಆ್ಯಪ್’ ತೆರೆದುಕೊಂಡಿತು. ಇದರಿಂದ ಇನ್ನಷ್ಟು ಕುಪಿತರಾದ ಸಾರ್ವಜನಿಕರು ಕಚೇರಿಯ ಅವ್ಯವಸ್ಥೆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿದರು. ಉಪನೋಂದಣಿ ಕಚೇರಿಯಲ್ಲಿ ಸರ್ವಾಧಿಕಾರ ನಡೆಯುತ್ತಿದ್ದು, ಭ್ರಷ್ಟಾಚಾರ ಹೆಚ್ಚಾಗಿದೆ. ಯಾವುದೇ ಕೆಲಸಗಳಾಗಬೇಕಿದ್ದರೂ ಲಂಚ ನೀಡಲೇಬೇಕು. ಸಾರ್ವಜನಿಕರ ಕೆಲಸ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಕುಶಾಲನಗರ ಸೇರಿದಂತೆ ರಾಜ್ಯದ ಬೇರೆ ಎಲ್ಲ ಕಡೆಗಳಲ್ಲಿಯೂ ೧೦ ರಿಂದ ೧೫ ನಿಮಿಷದಲ್ಲಿ ಕೆಲಸಗಳಾಗುತ್ತವೆ. ಆದರೆ, ಮಡಿಕೇರಿಯಲ್ಲಿ ಮಾತ್ರ ಹಣಕ್ಕಾಗಿ ಸತಾಯಿಸಲಾಗುತ್ತಿದೆ.
ಇಂತಹ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ದೂರದ ಊರುಗಳಿಂದ ಬರುವ ಜನರು ಒಂದು ಸಣ್ಣ ಕೆಲಸಕ್ಕೆ ವಾರ - ತಿಂಗಳುಗಟ್ಟಲೆ ಅಲೆದಾಡಬೇಕಾಗುತ್ತದೆ. ಹಣ ನೀಡಿದರೆ ಕೂಡಲೇ ಕೆಲಸ ಆಗುತ್ತದೆ ಎಂಬಿತ್ಯಾದಿ ಆರೋಪಗಳನ್ನು ಮಾಡಿದರು. ಕಚೇರಿಯಲ್ಲಿದ್ದ ವಕೀಲರುಗಳು ಕೂಡ ಕಚೇರಿ ಅಧಿಕಾರಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.