ಸೋಮವಾರಪೇಟೆ, ಜೂ. ೩೦: ಹಳೆ ವೈಷಮ್ಯದ ಹಿನ್ನೆಲೆ ಯುವಕರ ತಂಡಗಳ ನಡುವೆ ಗಲಾಟೆ ನಡೆದಿದ್ದು, ಮಾದಾಪುರದಲ್ಲಿ ಹೊಡೆದಾಡಿ, ಕುಂಬೂರಿನಲ್ಲಿ ಬಂದೂಕಿನಿAದ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೊಕದ್ದಮೆ ದಾಖಲಾಗಿದೆ.
ಮಾದಾಪುರ ಸಮೀಪದ ಹಾಡಗೇರಿ ನಿವಾಸಿ ಸರ್ವಿನ್ ಮತ್ತು ಇತರರು ಹಾಗೂ ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವಾರೆ ಗ್ರಾಮದ ಅಶ್ವಥ್ ಹಾಗೂ ಇತರರ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಉಭಯ ಕಡೆಯಿಂದಲೂ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಡವಾರೆ ಗ್ರಾಮದ ಅಶ್ವಥ್, ತನ್ನ ಸ್ನೇಹಿತರಾದ ದಿಧನ್, ನಿತೀಶ್ ಅವರುಗಳೊಂದಿಗೆ ಮಾದಾಪುರ ಬಾಣೆಯಲ್ಲಿರುವ ಸ್ನೇಹಿತ ಸಜಿ ಅವರ ಮನೆಯಿಂದ ರಾತ್ರಿ ಐಗೂರಿಗೆ ಜೀಪಿನಲ್ಲಿ ಬರುತ್ತಿದ್ದ
(ಮೊದಲ ಪುಟದಿಂದ) ಸಂದರ್ಭ, ಕುಂಬೂರಿನ ಬಳಿ ಸರ್ವಿನ್, ಕಾರ್ತಿಕ್ ಸೇರಿದಂತೆ ಇತರರು ಪಿಕ್ಅಪ್ ಮತ್ತು ಎಸ್ಟಿಮಾ ಕಾರನ್ನು ಅಡ್ಡ ನಿಲ್ಲಿಸಿ, ಕೈಯಲ್ಲಿ ಬಂದೂಕು ಹಿಡಿದುಕೊಂಡು ನಿಂತಿದ್ದರು.
ಈ ಸಂದರ್ಭ ನಮ್ಮ ಜೀಪನ್ನು ಚರಂಡಿಗೆ ಇಳಿಸಿ ಅಲ್ಲಿಂದ ಮುಂದೆ ಬರುತ್ತಿದ್ದಂತೆ ಹಿಂಬದಿಯಿAದ ೨ ಬಾರಿ ಗುಂಡು ಹಾರಿಸಿದ್ದಾರೆ. ನಂತರ ನಮ್ಮನ್ನು ಹಿಂಬಾಲಿಸಿಕೊAಡು ಪಿಕ್ಅಪ್ ವಾಹನದಿಂದ ಜೀಪಿಗೆ ಡಿಕ್ಕಿಪಡಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಶ್ವಥ್, ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿಗೆ ಸಂಬAಧಿಸಿದAತೆ ಮಾದಾಪುರ ಹಾಡಗೇರಿಯ ಎಂ.ಕೆ. ಸೋಮಯ್ಯ ಅವರ ಪುತ್ರ ಸರ್ವಿನ್, ಕಾರ್ತಿಕ್ ಸೇರಿದಂತೆ ಇತರರ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಇದೇ ಘಟನೆಗೆ ಸಂಬAಧಿಸಿದAತೆ ಸರ್ವಿನ್ ಸಹ ದೂರು ನೀಡಿದ್ದು, ಮನೆಗೆ ಸಂಬAಧಿಕರು ಆಗಮಿಸಿದ್ದ ಸಂದರ್ಭ ಮದ್ಯ ತರಲೆಂದು ರಾತ್ರಿ ಮಾದಾಪುರಕ್ಕೆ ಆಗಮಿಸಿದ್ದು, ಈ ಸಂದರ್ಭ ಮಾರ್ಕೆಟ್ ಮತ್ತು ಪೆಟ್ರೋಲ್ ಬಂಕ್ ಬಳಿಯಲ್ಲಿ ಹಳೆ ವೈಷಮ್ಯಕ್ಕೆ ಸಂಬAಧಿಸಿದAತೆ ಮಾದಾಪುರದ ಜಯರಾಮ್, ನಿತೀಶ್ ಸೇರಿದಂತೆ ಇತರರು ಥಾರ್ ಜೀಪಿನಲ್ಲಿ, ಐಗೂರಿನ ಸಜಿ ಭರತ್, ದಿಧನ್, ಅಶ್ವಥ್ ಪೂಜಾರಿ ಸೇರಿದಂತೆ ಇತರರು ಬೊಲೆರೋ ವಾಹನದಲ್ಲಿ ಹಿಂಬಾಲಿಸಿ, ಅಡ್ಡಗಟ್ಟಿ ಪಿಕ್ಅಪ್ಗೆ ಡಿಕ್ಕಿಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರವೂ ರಾತ್ರಿ ೧೧.೪೫ರ ಸುಮಾರಿಗೆ ಅದೇ ವಾಹನದಲ್ಲಿ ಬಂದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಹುಡುಕಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸರ್ವಿನ್ ನೀಡಿದ ದೂರಿನ ಮೇರೆ, ಮಾದಾಪುರದ ಜಯರಾಮ್, ಜಂಬೂರಿನ ನಿತೀಶ್, ಐಗೂರಿನ ಭರತ್, ದಿಧನ್, ಯಡವಾರೆಯ ಅಶ್ವಥ್ ಸೇರಿದಂತೆ ಇತರರ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ತನಿಖೆ ಕೈಗೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಅವರು, ಪ್ರಕರಣದ ಆರೋಪಿಗಳಾದ ಜಯರಾಮ್, ನಿತೀಶ್, ಅಶ್ವಥ್, ದಿಧನ್, ಸರ್ವಿನ್ ಅವರುಗಳನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ.