ಮಡಿಕೇರಿ, ಜೂ. ೨೯: ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನ ಸಂಶೋಧನಾ ವಿದ್ಯಾರ್ಥಿನಿ ಪ್ರಿಣಿತ್ ಸುಬ್ಬಯ್ಯ ಎನ್. ಅವರು ಮಂಡಿಸಿದ ‘ಎಲೆಕ್ಟೊçà ಅನಾಲಿಟಿಕಲ್ ಮೆಥಡಾಲಜಿ ಫಾರ್ ದಿ ಡಿಟರ್ಮಿನೇಶನ್ ಆಫ್ ಎಲೆಕ್ರೋಆಕ್ಟಿವ್ ಸ್ಪೀಸೀಸ್ ಯೂಸಿಂಗ್ ಕೆಮಿಕಲಿ ಮಾಡಿಫೈಡ್ ಕಾರ್ಬನ್ ಪೇಸ್ಟ್ ಎಲೆಕ್ಟೊçÃಡ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಇವರು ವೀರಾಜಪೇಟೆ ಬೇಟೋಳಿ ಗ್ರಾಮದ ನಂಬುಡುಮಾಡ ಟಿ. ಸುಬ್ಬಯ್ಯ ಹಾಗೂ ತಾರಾ ಸುಬ್ಬಯ್ಯ ದಂಪತಿ ಪುತ್ರಿ.
ಹಾಗೆಯೇ ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನ ಸಂಶೋಧನಾ ವಿದ್ಯಾರ್ಥಿ ಎನ್. ಹರೀಶ ಅವರು ಮಂಡಿಸಿದ ‘ಡೆವಲಪ್ಮೆಂಟ್ ಆಫ್ ಎಲೆಕ್ಟೊçÃಕೆಮಿಕಲ್ ಸೆನ್ಸಾರ್ ಫಾರ್ ದ ಎಲೆಕ್ಟೊçÃಕ್ಯಾಟಲೈಟಿಕ್ ಇನ್ವೆಸ್ಟಿಗೇಶನ್ ಆಫ್ ಬಯಲಾಜಿಕಲಿ ಆಕ್ಟಿವ್ ಮಾಲಿಕ್ಯೂಲ್ಸ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಳೆ ರಂಗಾಪುರ ಗ್ರಾಮದ ನಾಗರಾಜಪ್ಪ ಹಾಗೂ ರೇಣುಕಾ ದಂಪತಿ ಪುತ್ರ.
ಇವರು ರಸಾಯನ ಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಜೆ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದ್ದರು.