ವೀರಾಜಪೇಟೆ: ವೀರಾಜಪೇಟೆ ರೋಟರಿ ಶಾಲೆ ವಿದ್ಯಾರ್ಥಿಗಳ ಮುಖ್ಯ ನಾಯಕನಾಗಿ ಎನ್.ಡಿ. ಎಬಿನ್, ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದರು.

ಉಪ ನಾಯಕಿಯಾಗಿ ಮುಫಿದಾ, ಕ್ರೀಡಾ ನಾಯಕನಾಗಿ ಮೊಹಮದ್ ಶಮಲ್, ಉಪನಾಯಕನಾಗಿ ಪುಗ್ಯಾನ್, ಶಿಸ್ತಿನ ನಾಯಕ ಮೊಹಮದ್ ಸಮನ್ಯ, ಉಪ ನಾಯಕಿ ಸೋನಿಕ್ಷಾ ದೇಚಮ್ಮ, ಸಾಂಸ್ಕೃತಿಕ ಚಟುವಟಿಕಾ ನಾಯಕಿಯಾಗಿ ಸಾಕ್ಷಿ, ಉಪ ನಾಯಕಿಯಾಗಿ ತಾಯ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮ ನಡೆಯಿತು.

ಶಿಕ್ಷಕ ಕೆ. ಮೂರ್ತಿ ಅವರು ಮಾತನಾಡಿ, ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಮತದಾನ ಎಂಬುದು ಪವಿತ್ರವಾದುದು. ಮತದಾನ ನಮ್ಮ ಹಕ್ಕಾಗಿದೆ. ಯೋಗ್ಯ ಜನಪ್ರತಿನಿಧಿ ಯನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಮತಕ್ಕಿರುತ್ತದೆ. ಯಾರಾದರೂ ಮತದಾನದ ಬಗ್ಗೆ ಅಸಡ್ಡೆ ಮಾಡಿದರೆ, ವಿದ್ಯಾರ್ಥಿಗಳು ತಿಳಿಹೇಳಬೇಕು ಎಂದರು.

೧೮ ವರ್ಷ ತುಂಬಿದ ಪ್ರತಿ ಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿ ಸಬೇಕು. ಯಾವುದೇ ಅಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಇ.ವಿ.ಎಂ. ಯಂತ್ರದ ಆ್ಯಪ್ ಸಹಾಯದಿಂದ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.

ಮತ ಎಣಿಕೆಯ ನಂತರ ಮುಖ್ಯ ಮಂತ್ರಿಯಾಗಿ ಪಿ.ಟಿ. ಹೇಮಂತ್, ಉಪ ಮುಖ್ಯಮಂತ್ರಿಯಾಗಿ ಸಂಪ್ರೀತಿ, ಗೃಹಮಂತ್ರಿಯಾಗಿ ಮಂಜುನಾಥ್ ಆಯ್ಕೆಯಾಗಿದ್ದು, ನಂತರ ಸಚಿವ ಸಂಪುಟವನ್ನು ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಕೆ.ಎನ್. ಬಸವರಾಜಪ್ಪ, ಹಿರಿಯ ಶಿಕ್ಷಕರಾದ ಕೆ.ವಿ. ಶಶಿಕಲಾ, ಎಸ್. ಹೇಮಲತಾ, ಕೆ.ಆರ್. ಧನ್ಯ, ಡಿ.ಎಸ್. ಮಧುಕುಮಾರ್, ಆರ್. ಶಶಿಧರ್, ರವಿಕುಮಾರ್ ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಮಕ್ಕಳಲ್ಲಿ ಸಾರ್ವತ್ರಿಕ ಮತದಾನ ಪ್ರಕ್ರಿಯೆಯ ಕುರಿತು ಮಾಹಿತಿ ಅರಿವು ಮೂಡಿಸುವ ದಿಸೆಯಲ್ಲಿ ಶಾಲಾವರಣದಲ್ಲಿ ಮತದಾನದ ಮಾಹಿತಿಯ ಇರುವ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತ ಕೇಂದ್ರ ಅಧಿಕಾರಿಗಳನ್ನು ನೇಮಕಗೊಳಿಸುವ ಮೂಲಕ ಮಕ್ಕಳ ಸಂಸತ್‌ಗೆ ಮತದಾನದಕ್ಕೆ ಅವಕಾಶ ಕಲ್ಪಿಸಿದರು. ಆಧಾರ್ ಕಾರ್ಡ್ಗಳನ್ನು ಹಿಡಿದು ಮಕ್ಕಳು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಚುನಾವಣಾ ಮೇಲ್ವಿಚಾರಣೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸಹಶಿಕ್ಷಕರುಗಳಾದ ಸಿ.ಟಿ. ಸೋಮಶೇಖರ್, ಎಸ್. ಪ್ರಕಾಶ್, ಲಿಯೋನ, ಆರ್. ಚಿತ್ರಾ, ಶಾಂತ ಹೆಗಡೆ, ಜಯಶ್ರೀ ಅವರುಗಳು ಸಲಹೆ ಪ್ರಕ್ರಿಯೆಯನ್ನು ನಿರ್ವಹಿಸಿದರು.ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮ ನಡೆಯಿತು.

ಶಿಕ್ಷಕ ಕೆ. ಮೂರ್ತಿ ಅವರು ಮಾತನಾಡಿ, ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಮತದಾನ ಎಂಬುದು ಪವಿತ್ರವಾದುದು. ಮತದಾನ ನಮ್ಮ ಹಕ್ಕಾಗಿದೆ. ಯೋಗ್ಯ ಜನಪ್ರತಿನಿಧಿ ಯನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಮತಕ್ಕಿರುತ್ತದೆ. ಯಾರಾದರೂ ಮತದಾನದ ಬಗ್ಗೆ ಅಸಡ್ಡೆ ಮಾಡಿದರೆ, ವಿದ್ಯಾರ್ಥಿಗಳು ತಿಳಿಹೇಳಬೇಕು ಎಂದರು.

೧೮ ವರ್ಷ ತುಂಬಿದ ಪ್ರತಿ ಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿ ಸಬೇಕು. ಯಾವುದೇ ಅಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಇ.ವಿ.ಎಂ. ಯಂತ್ರದ ಆ್ಯಪ್ ಸಹಾಯದಿಂದ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.

ಮತ ಎಣಿಕೆಯ ನಂತರ ಮುಖ್ಯ ಮಂತ್ರಿಯಾಗಿ ಪಿ.ಟಿ. ಹೇಮಂತ್, ಉಪ ಮುಖ್ಯಮಂತ್ರಿಯಾಗಿ ಸಂಪ್ರೀತಿ, ಗೃಹಮಂತ್ರಿಯಾಗಿ ಮಂಜುನಾಥ್ ಆಯ್ಕೆಯಾಗಿದ್ದು, ನಂತರ ಸಚಿವ ಸಂಪುಟವನ್ನು ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಕೆ.ಎನ್. ಬಸವರಾಜಪ್ಪ, ಹಿರಿಯ ಶಿಕ್ಷಕರಾದ ಕೆ.ವಿ. ಶಶಿಕಲಾ, ಎಸ್. ಹೇಮಲತಾ, ಕೆ.ಆರ್. ಧನ್ಯ, ಡಿ.ಎಸ್. ಮಧುಕುಮಾರ್, ಆರ್. ಶಶಿಧರ್, ರವಿಕುಮಾರ್ ಇದ್ದರು.