ಡಾ. ಜೆ. ಸೋಮಣ್ಣ
ಪೊನ್ನಂಪೇಟೆ, ಜೂ. ೨೯: ವೈಚಾರಿಕ ಪ್ರಜ್ಞೆಯಿಂದ ಮನುಷ್ಯನ ಬುದ್ಧಿ ವಿಕಸಿತಗೊಳ್ಳುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳ ಬೇಕು ಎಂದು ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣ ಹೇಳಿದರು.
ಗೋಣಿಕೊಪ್ಪಲು ಸಂತ ಥಾಮಸ್ ಶಾಲೆಯಲ್ಲಿ ನಡೆದ ‘ಶಾಲಾ ಸಂಸತ್ತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದು. ಶಾಲಾ ಪಠ್ಯ ಚಟುವಟಿಕೆಗಳ ಬೋಧನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮೂಡಿಸಲು ಶಿಕ್ಷಕರು ಶ್ರಮಿಸಬೇಕು. ಈ ಕಾರಣದಿಂದ ವಿದ್ಯಾರ್ಥಿಗಳಿಗಿಂತ ಅಧ್ಯಾಪಕರು ಹೆಚ್ಚು ಅಧ್ಯಯನ ಮಾಡಬೇಕು. ಅಧ್ಯಾಪಕರು ಮೊದಲು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳಿಗೆ ನೆಚ್ಚಿನ ಅಧ್ಯಾಪಕರಾಗಬೇಕು ಎಂದು ಕಿವಿಮಾತು ಹೇಳಿದರು.
ದೇಶದ ಬಹುತ್ವದ ಸಂಸ್ಕೃತಿ ನಮ್ಮ ರಾಷ್ಟçದ ಹೆಮ್ಮೆಯ ಪ್ರತೀಕವಾಗಿದ್ದು, ಇದು ಉಳಿಯಬೇಕಾದರೆ ಮುಂದಿನ ಜನಾಂಗವನ್ನು ತಳಮಟ್ಟದಿಂದಲೇ ರೂಪಿಸುವ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಮನುಷ್ಯ ಪ್ರೀತಿ ಮೂಡಿಸಬೇಕು. ಯಾವುದೇ ಒಂದು ಜಾತಿ- ಧರ್ಮಕ್ಕೆ ಅಂಟಿಕೊಳ್ಳದೆ ಎಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿತ್ವವನ್ನು ಮಕ್ಕಳಲ್ಲಿ ರೂಪಿಸಬೇಕು. ಆಗ ಮಾತ್ರ ಶಾಂತಿ- ಸಾಮರಸ್ಯದ ಮತ್ತು ಸಹೋದರತೆಯ ಸಮಾಜವನ್ನು ಕಟ್ಟಬಹುದು ಎಂದು ಡಾ. ಸೋಮಣ್ಣ ನುಡಿದರು.
ಪ್ರಾಂಶುಪಾಲರಾದ ಫಾದರ್ ಪಿ.ಒ. ಆಂಟೋನಿ ಮಾತನಾಡಿ, ವಿದ್ಯಾರ್ಥಿಗಳು ವಿಕಸಿತ ಮತ್ತು ಪ್ರಬುದ್ಧ ನಾಯಕತ್ವ ಗುಣ ಬೆಳೆಸಿಕೊಳ್ಳಲು ಶಾಲಾ ಸಂಸತ್ ಸಹಕಾರಿಯಾಗಲಿದೆ. ಪ್ರೀತಿ, ಸಾಮರಸ್ಯ ಕಾಪಾಡಿದ ನಮ್ಮ ದೇಶದ ಸಂತರ, ಧಾರ್ಮಿಕ ವ್ಯಕ್ತಿಗಳ ಮತ್ತು ಸಮಾಜ ಸುಧಾರಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿ ನಾಯಕರು ಇತರರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು. ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ನಾಯಕ ಸಿ.ಜೆ. ಶರತ್ ಹಾಗೂ ಪದಾಧಿಕಾರಿಗಳಾದ ಐ. ಎಂ. ಮಮಿತಾ, ಸಂಪ್ರೀತ್, ಟಿ.ಎಸ್. ಪ್ರೀತಲ್, ಎ. ಜೇವನ್, ಕೆ.ಎಸ್. ಸಾನಿಯಾ, ಎಂ.ಎ. ಅಫ್ಸೀನಾ, ಕೆ. ನಿಹಾರ ಮೊದಲಾದವರು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನಿಂದ ಗೋಣಿಕೊಪ್ಪಲಿನ ಸಂತ ಥಾಮಸ್ ವಿದ್ಯಾಸಂಸ್ಥೆಗೆ ಕಳೆದ ೧೫ ದಿನಗಳ ಹಿಂದೆ ವರ್ಗಾವಣೆಗೊಂಡು ಬಂದ ಶಾಲೆಯ ನೂತನ ಪ್ರಾಂಶುಪಾಲ ಫಾದರ್ ಪಿ.ಒ. ಆಂಟೊನಿ, ಆಡಳಿತಾಧಿಕಾರಿ ಫಾದರ್ ನೋಬಲ್ ಜೋಸ್, ವ್ಯವಸ್ಥಾಪಕ ಫಾದರ್ ಕೆ.ವಿ. ಥಾಮಸ್, ಸಂತ ಥಾಮಸ್ ಚರ್ಚಿನ ಧರ್ಮಗುರು ಫಾದರ್ ವರ್ಗೀಸ್ ಪೌಲ್ ಅವರನ್ನು ಮುಖ್ಯ ಅತಿಥಿಯಾಗಿದ್ದ ಡಾ. ಜೆ. ಸೋಮಣ್ಣ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬಂತು.ಎA. ಮಮಿತಾ, ಸಂಪ್ರೀತ್, ಟಿ.ಎಸ್. ಪ್ರೀತಲ್, ಎ. ಜೇವನ್, ಕೆ.ಎಸ್. ಸಾನಿಯಾ, ಎಂ.ಎ. ಅಫ್ಸೀನಾ, ಕೆ. ನಿಹಾರ ಮೊದಲಾದವರು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನಿಂದ ಗೋಣಿಕೊಪ್ಪಲಿನ ಸಂತ ಥಾಮಸ್ ವಿದ್ಯಾಸಂಸ್ಥೆಗೆ ಕಳೆದ ೧೫ ದಿನಗಳ ಹಿಂದೆ ವರ್ಗಾವಣೆಗೊಂಡು ಬಂದ ಶಾಲೆಯ ನೂತನ ಪ್ರಾಂಶುಪಾಲ ಫಾದರ್ ಪಿ.ಒ. ಆಂಟೊನಿ, ಆಡಳಿತಾಧಿಕಾರಿ ಫಾದರ್ ನೋಬಲ್ ಜೋಸ್, ವ್ಯವಸ್ಥಾಪಕ ಫಾದರ್ ಕೆ.ವಿ. ಥಾಮಸ್, ಸಂತ ಥಾಮಸ್ ಚರ್ಚಿನ ಧರ್ಮಗುರು ಫಾದರ್ ವರ್ಗೀಸ್ ಪೌಲ್ ಅವರನ್ನು ಮುಖ್ಯ ಅತಿಥಿಯಾಗಿದ್ದ ಡಾ. ಜೆ. ಸೋಮಣ್ಣ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿ ಮೂಡಿ ಬಂತು.