ಹೆಲಿಕಾಪ್ಟರ್ನಲ್ಲಿ ನಿರಾಶ್ರಿತರ ಶಿಬಿರಕ್ಕೆ ತೆರಳಿದ ರಾಹುಲ್
ಇಂಫಾಲ್, ಜೂ. ೨೯: ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದ ಕಾರಣಗಳ ಗಂಟೆಗಳ ಕಾಲ ಬಿಷ್ಟುಪುರದಲ್ಲಿ ಸಿಲುಕಿದ ನಂತರ ರಾಹುಲ್ ಗಾಂಧಿ, ಹೆಲಿಕಾಪ್ಟರ್ನಲ್ಲಿ ಚುರಾಚಂದ್ಪುರದ ನಿರಾಶ್ರಿತರ ಶಿಬಿರಕ್ಕೆ ತೆರಳಿದರು. ಬೆಂಗಾವಲು ಪಡೆ ವಾಹನದ ಮೇಲೆ ದಾಳಿ ಭೀತಿಯಿಂದ ಇಂಫಾಲ್ ನಿಂದ ಸುಮಾರು ೨೦ ಕಿಲೋಮೀಟರ್ ದೂರದಲ್ಲಿರುವ ಬಿಷ್ಣುಪುರದಲ್ಲಿ ರಾಹುಲ್ ಗಾಂಧಿಯನ್ನು ಪೊಲೀಸರು ತಡೆದರು. ತದನಂತರ ರಾಜ್ಯಸರ್ಕಾರದ ಹೆಲಿಕಾಪ್ಟರ್ನಲ್ಲಿ ಚುರಚಂದಪುರಕ್ಕೆ ರಾಹುಲ್ ಗಾಂಧಿ ತೆರಳಿದರು. ಅವರೊಂದಿಗೆ ಪೊಲೀಸ್ ಮತ್ತು ಆಡಳಿತದ ಉನ್ನತಾಧಿಕಾರಿಗಳು ಕೂಡಾ ಹೆಲಿಕಾಪ್ಟರ್ನಲ್ಲಿದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಜನಾಂಗೀಯ ಕಲಹ ಪೀಡಿತ ಈಶಾನ್ಯ ರಾಜ್ಯಕ್ಕೆ ಎರಡು ದಿನ ಭೇಟಿ ಕೈಗೊಂಡಿರುವ ಕಾಂಗ್ರೆಸ್ ನಾಯಕ, ಬಿಷ್ಣುಪುರದಿಂದ ಇಂಫಾಲ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಹೆಲಿಕಾಪ್ಟರ್ ಹತ್ತಿದರು. ಕೆಲವರು ರಾಹುಲ್ ಗಾಂಧಿ ಚುರಚಂದಪುರಕ್ಕೆ ತೆರಳಬೇಕು ಎಂದು ಬಯಸಿದರೆ ಮತ್ತೆ ಕೆಲವರು ಅವರ ಭೇಟಿಯನ್ನು ವಿರೋಧಿಸಿದರು. ಇದರಿಂದಾಗಿ ಬಿಷ್ಣುಪುರದಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಿದರು.
ಕರಾವಳಿ ಭಾಗದಲ್ಲಿ ಮುಂದಿನ ೧೦ ದಿನ ಭಾರೀ ಮಳೆ ಮುನ್ಸೂಚನೆ
ಮಂಗಳೂರು, ಜೂ. ೨೯: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ ೧೦ ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಈ ಅವಧಿಯಲ್ಲಿ ಅಲಲ್ಲಿ ಅತಿ ಹೆಚ್ಚು ೨೪೪.೪ ಮಿಲಿ ಮೀಟರ್ ಮಳೆಯೊಂದಿಗೆ ಕರಾವಳಿ ಜಿಲ್ಲೆಯಲ್ಲಿ ೬೪ ಮಿ.ಮೀ.ನಿಂದ ೧೧೫ ಮಿ.ಮೀ. ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ರಾಜ್ಯದ ಕರಾವಳಿ ಎಲ್ಲಾ ಜಿಲ್ಲೆಗಳ ಅಲ್ಲಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯು ಹೆಚ್ಚಿನ ಉಬ್ಬರವಿಳಿತದೊಂದಿಗೆ ಹೊಂದಿಕೆಯಾಗಬಹುದು, ಇದರ ಪರಿಣಾಮವಾಗಿ ತಗ್ಗು ಪ್ರದೇಶಗಳು ಜಲಾವೃತ ಮತ್ತು ಪ್ರವಾಹಕ್ಕೆ ಕಾರಣವಾಗಬಹುದು. ಅಗತ್ಯ ಪರಿಸ್ಥಿತಿಯನ್ನು ನಿಭಾಯಿಸಲು ಅಂತಹ ಪ್ರದೇಶಗಳಲ್ಲಿ ಮುಂಚಿತವಾಗಿ ಡಿ-ವಾಟರಿಂಗ್ ಪಂಪ್ಗಳು ಮತ್ತು ಇತರ ಉಪಕರಣಗಳನ್ನು ನಿಯೋಜಿಸಲು ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ. ಯಾವುದೇ ಅನಾಹುತ ತಡೆಯಲು ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ಡಿಆರ್ಎಫ್ ಸಿಬ್ಬಂದಿಯನ್ನು ದುರ್ಬಲ ಪ್ರದೇಶಗಳಲ್ಲಿ ನಿಯೋಜಿಸಲು ಸಂಬAಧಿಸಿದ ಆಡಳಿತಕ್ಕೆ ಸೂಚಿಸಲಾಗಿದೆ.
ಹುಲಿ ದಾಳಿಗೆ ವ್ಯಕ್ತಿ ಬಲಿ; ಅರಣ್ಯ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರ ದಾಳಿ
ಬಾಂದ್ರಾ, ಜೂ. ೨೯: ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೆಂಡಾಮAಡಲಗೊAಡ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿರುವ ಘಟನೆಯೊಂದು ಮಹಾರಾಷ್ಟçದ ಬಾಂದ್ರಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಗ್ರಾಮಸ್ಥರ ದಾಳಿಗೆ ಇಬ್ಬರು ಅರಣ್ಯ ಸಿಬ್ಬಂದಿಗಳು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆAದು ತಿಳಿದುಬಂದಿದೆ. ಗಾಯಗೊಂಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಇಬ್ಬರು ಅರಣ್ಯ ಸಿಬ್ಬಂದಿಗಳು ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಂದ್ರಾದ ಪಯೋನಿ ತಹಸಿಲ್ನ ಖಟ್ಖೇಡಾ ಗ್ರಾಮದಲ್ಲಿ ಈಶ್ವರ್ ಮೋಟ್ಘರೆ (೫೨) ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದ ಹುಲಿ ಆತನನ್ನು ಕೊಂದು ಹಾಕಿತ್ತು. ಘಟನೆ ಬಳಿಕ ಅರಣ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಹುಲಿ ಹಿಡಿಯಲು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಘಟನೆ ಬಳಿಕ ಗಾಯಗೊಂಡ ಅರಣ್ಯ ಸಿಬ್ಬಂದಿಗಳನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಮಹಾರಾಷ್ಟç ಅರಣ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಹುಲಿಯನ್ನು ಸೆರೆಹಿಡಿದು, ನಾಗಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ರವಾನಿಸಿದರು.
ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಸಂದೇಶ
ಶಿಕ್ಷಕನ ವಿರುದ್ಧ ಪ್ರಕರಣ ದಾಖಲು
ತುಮಕೂರು, ಜೂ. ೨೯: ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಲ್ಲಾರಾಧ್ಯ ಅಶ್ಲೀಲ ಸಂದೇಶ ಕಳುಹಿಸಿದ ಆರೋಪಿ. ಈತ ಪ್ರಸಿದ್ಧ ಧಾರ್ಮಿಕ ಮಠವೊಂದು ನಡೆಸುತ್ತಿರುವ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಈ ಸಂಬAಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ೩೫೪ (ಎ) ಮತ್ತು ೫೦೬ ರ ಅಡಿಯಲ್ಲಿ ಕ್ಯಾತಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಮಗ ವಸತಿ ಹಾಸ್ಟೆಲ್ ಮತ್ತು ಶಾಲೆಯಲ್ಲಿ ಓದುತ್ತಿದ್ದಾನೆ. ಲೆಡ್ಜರ್ನಿಂದ ಸಂತ್ರಸ್ತೆಯ ಮೊಬೈಲ್ ನಂಬರ್ ಪಡೆದ ಆರೋಪಿ ಆಕೆಯೊಂದಿಗೆ ಸಂಭಾಷಣೆ ಪ್ರಾರಂಭಿಸಿದ್ದಾನೆ. ಆರಂಭದಲ್ಲಿ ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಚರ್ಚಿಸುತ್ತಿದ್ದ ಆತ ನಿಧಾನವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕ ತನಗೆ ಅಶ್ಲೀಲ ಮತ್ತು ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಸಹಕರಿಸದಿದ್ದರೆ ತನ್ನ ಮಗನನ್ನು ಫೇಲ್ ಮಾಡಿ, ಆತನ ಬದುಕನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ತನಿಖೆ ನಡೆಯುತ್ತಿದೆ.
ಸಿಖ್ ಸೈನಿಕನನ್ನು ಗೌರವಿಸಿದ ಯುಕೆ ಪ್ರಧಾನಿ
ಲಂಡನ್, ಜೂ. ೨೯: ಎರಡನೇ ವಿಶ್ವ ಯುದ್ಧದಲ್ಲಿ ಹೋರಾಡಿ ಬದುಕುಳಿದವರಲ್ಲಿ ಕೊನೆಯ ಸಿಖ್ ಸೈನಿಕ ರಾಜೀಂದರ್ ಸಿಂಗ್ ದತ್ತ್ರನ್ನು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಲಂಡನ್ನಲ್ಲಿರುವ ತಮ್ಮ ಅಧಿಕೃತ ನಿವಾಸ ೧೦ ಡೌನಿಂಗ್ ಸ್ಟಿçÃಟ್ನಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಸಮಾರಂಭದಲ್ಲಿ ಪಾಯಿಂಟ್ಸ್ ಆಫ್ ಲೈಟ್ ಪದವಿ ಗೌರವದೊಂದಿಗೆ ಸನ್ಮಾನಿಸಿದ್ದಾರೆ. ೧೦೧ ವರ್ಷದ ದತ್ತ್ ಅವರು ಸೇನೆಗೆ ನೀಡಿರುವ ಸೇವೆ "ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ"ದಲ್ಲಿ ಮಾಡಿರುವ ಕೆಲಸವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ದತ್ತ್ ಅವರು ಬ್ರಿಟನ್ ಮತ್ತು ಭಾರತೀಯ ಮಾಜಿ ಸೈನಿಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ೧೯೬೩ನೇ ಇಸವಿಯಿಂದ ನೈಋತ್ಯ ಲಂಡನ್ನ ಹೌನ್ಸ್ಲೋದಲ್ಲಿ ನೆಲೆಸಿರುವ ದತ್ತ್, ೧೯೨೧ ರಲ್ಲಿ ವಿಭಜನೆ ಪೂರ್ವ ಭಾರತದಲ್ಲಿ ಜನಿಸಿದ್ದರು. ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಮಿತ್ರ ಸೇನೆಗಳೊಂದಿಗೆ ಹೋರಾಡಿದ್ದರು. "ಬ್ರಿಟನ್ ಪ್ರಧಾನಿ ಅವರಿಂದ ಈ ಮನ್ನಣೆಯನ್ನು ಪಡೆಯುತ್ತಿರುವುದು ಅಪಾರ ಗೌರವವಾಗಿದ್ದು ಸಂತೋಷವಾಗುತ್ತಿದೆ. ‘ಅವಿಭಜಿತ ಭಾರತೀಯ ಮಾಜಿ ಸೈನಿಕರ ಸಂಘ'ದ ಪ್ರಾಮುಖ್ಯತೆ ಮತ್ತು ಪ್ರಭಾವವನ್ನು ಮನಗಂಡಿದ್ದಕ್ಕಾಗಿ ಅವರಿಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ'' ಎಂದು ದತ್ತ್ ಹೇಳಿದರು. ಈ ಪ್ರಶಸ್ತಿಯು ಹಲವಾರು ವರ್ಷಗಳಿಂದ ಸಂಘದ ಯಶಸ್ಸು ಮತ್ತು ಬೆಳವಣಿಗೆಗೆ ಕಾರಣರಾದ ಅಸಂಖ್ಯಾತ ವ್ಯಕ್ತಿಗಳ ಅವಿರತ ಶ್ರಮಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.