ಮಡಿಕೇರಿ, ಜೂ. ೨೯: ಚಿತ್ರರಂಗದಲ್ಲಿ ಗುರುತಿಸಿಕೊಂಡಿ ರುವದರೊಂದಿಗೆ ಕೆಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕವೂ ಗುರುತಿಸಿಕೊಂಡಿರುವ ಕೊಡಗಿನ ನಟ - ನಟಿಯರಾದ ಉಳ್ಳಿಯಡ ಭುವನ್ ಪೊನ್ನಣ್ಣ ಹಾಗೂ ಉದ್ದಪಂಡ ಹರ್ಷಿಕಾ ಪೂಣಚ್ಚ ಸದ್ಯದಲ್ಲೇ ಸತಿ - ಪತಿಗಳಾಗಲಿದ್ದಾರೆ.

ಈ ಯುವ ಜೋಡಿ ಕೆಲವಾರು ಸಮಯದಿಂದ ಒಟ್ಟಿಗೇ ಹಲವು ಕಾರ್ಯಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಇವರು ಗಳು ವೈವಾಹಿಕ ಜೀವನದಲ್ಲಿ ಜೋಡಿಗಳಾಗಲಿದ್ದಾರೆ ಎಂಬ ಮಾತು ಚಿತ್ರರಂಗದಲ್ಲಿ ಮಾತ್ರವಲ್ಲ, ಜನವಲಯದಲ್ಲೂ ಕೇಳಿಬರುತಿತ್ತು. ಇದೀಗ ಇದು ನಿಜವಾಗಿದೆ. ಈಗಾಗಲೇ ಭುವನ್ ಹಾಗೂ ಹರ್ಷಿಕಾರ ಲಗ್ನಪತ್ರಿಕೆ ಕಾರ್ಯ ಕೊಡವ ಸಂಪ್ರದಾಯದAತೆ ಸರಳವಾಗಿ ನಡೆದಿದೆ. ಎರಡೂ ಕುಟುಂಬದ ಕೆಲವರು ಮಾತ್ರ ಇಗ್ಗುತಪ್ಪ ದೇವಾಲಯದಲ್ಲಿ ನಡೆದ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿವಾಹ ಆಗಸ್ಟ್ ೨೪ ರಂದು ಅಮ್ಮತ್ತಿ ಕೊಡವ

(ಮೊದಲ ಪುಟದಿಂದ) ಸಮಾಜದಲ್ಲಿ ನಿಗದಿಯಾಗಿದೆ. ರಿಯಾಲಿಟಿ ಶೋಗಳು ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಭುವನ್ ಪೊನ್ನಣ್ಣ ನಟಿಸಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಕನ್ನಡ, ಕೊಡವ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದು, ಬಹುಭಾಷಾ ತಾರೆಯಾಗಿ ಗುರುತಿಸಲ್ಪಟ್ಟಿದ್ದಾರೆ.

ಈ ಹಿಂದೆ ಕೊರೊನಾ ಸಂದರ್ಭದಲ್ಲಿ ಭುವನ್ ಹಾಗೂ ಹರ್ಷಿಕಾ ಭುವನಂ ಫೌಂಡೇಶನ್ ಮೂಲಕ ರಾಜ್ಯಾದ್ಯಂತ ಸಂತ್ರಸ್ತರಿಗೆ (ಮೊದಲ ಪುಟದಿಂದ) ಸಮಾಜದಲ್ಲಿ ನಿಗದಿಯಾಗಿದೆ. ರಿಯಾಲಿಟಿ ಶೋಗಳು ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಭುವನ್ ಪೊನ್ನಣ್ಣ ನಟಿಸಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಕನ್ನಡ, ಕೊಡವ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದು, ಬಹುಭಾಷಾ ತಾರೆಯಾಗಿ ಗುರುತಿಸಲ್ಪಟ್ಟಿದ್ದಾರೆ.

ಈ ಹಿಂದೆ ಕೊರೊನಾ ಸಂದರ್ಭದಲ್ಲಿ ಭುವನ್ ಹಾಗೂ ಹರ್ಷಿಕಾ ಭುವನಂ ಫೌಂಡೇಶನ್ ಮೂಲಕ ರಾಜ್ಯಾದ್ಯಂತ ಸಂತ್ರಸ್ತರಿಗೆ ಕೊಡವ ಸಂಪ್ರದಾಯಕ್ಕೆ ಒತ್ತು ನೀಡುತ್ತಿದ್ದಾರೆ.

ಹರಳು ಉರಿದಂತೆ ಪಟಪಟನೆ ತನ್ನ ಮಾತಿನಿಂದ ಎಲ್ಲರನ್ನೂ ಆಕರ್ಷಿಸುವ ಉದ್ದಪಂಡ ಶಾಂಭವಿ ಪೂಣಚ್ಚ ಅವರ ಪುತ್ರಿಯಾಗಿರುವ ಹರ್ಷಿಕಾ ಕೂಡ ಈ ಬಗ್ಗೆ ಒಲವು ಹೊಂದಿದ್ದಾರೆ. ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯ ಹಲವರ ಪೈಕಿ ಈ ಜೋಡಿ ವೈವಾಹಿಕ ಬದುಕಿಗೆ ಕಾಲಿಡುತ್ತಿರುವುದು ವಿಶೇಷವಾಗಿದೆ.

-ಶಶಿ