ಮಡಿಕೇರಿ, ಜೂ. ೨೮: ವೈಭವದಿಂದ ಆಕಾಶವನ್ನು ಸ್ಪರ್ಶಿಸು (ಖಿouಛಿh ಣhe sಞಥಿ ತಿiಣh ಉಟoಡಿಥಿ) ಎಂಬ ಭಗವದ್ಗೀತೆಯ ೧೧ನೇ ಅಧ್ಯಾಯದ ಸೂಕ್ತಿಯಂತೆ ನಭಃ ಸ್ಪರ್ಶಃ ದೀಪ್ತಃ ಎಂಬ ಭಾರತೀಯ ವಾಯುಸೇನೆಯು ಧ್ಯೇಯ ವಾಕ್ಯವು ಯುವ ತಲೆಮಾರಿಗೆ ಪ್ರೇರಣಾದಾ ಯಕವಾಗಿದೆ. ಆ ಮೂಲಕ ಯುವ ತಲೆಮಾರು ಜೀವನಸ್ಪೂರ್ತಿಯ ರೆಕ್ಕೆ ಕಟ್ಟಿಕೊಂಡು ಆಕಾಶದೆತ್ತರಕ್ಕೆ ಹಾರುವ ಕನಸುಗಳನ್ನು ಕಾಣಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಅಭಿಪ್ರಾಯಪಟ್ಟರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಭಾರತೀಯ ವಾಯು ಸೇನೆಯಲ್ಲಿನ ವೃತ್ತಿ ಮಾರ್ಗ ದರ್ಶನವನ್ನು ಕುರಿತಾದ ಅಭಿಯಾನ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಗುರಿ ದೇಶಸೇವೆಯ ಕಡೆಗಿರಲಿ, ಭೂಸೇನೆಯಲ್ಲಿ ಕೊಡಗಿನ ವೀರರು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಅದೇ ರೀತಿಯಲ್ಲಿ ವಾಯು ಸೇನೆಯಲ್ಲಿಯೂ ಯುವ ತಲೆಮಾರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಮಾತ್ರವಲ್ಲ ಭಾರತೀಯ ವಾಯುಸೇನೆಯ ಅಧಿಕಾರಿ ವಿಂಗ್ ಕಮಾಂಡರ್ ಸಿ.ಎ. ಭಾನುಪ್ರಕಾಶ್ ಅವರ ಮಾರ್ಗ ದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಫ್ಲೆöÊಟ್ ಲೆಫ್ಟಿ ನೆಂಟಲ್ ಗೌರವ್ ಶರ್ಮ ವಾಯು ಸೇನೆಯಲ್ಲಿನ ಉದ್ಯೋಗ ಅವಕಾಶ ಗಳ ಕುರಿತ ಸಮಗ್ರ ಮಾಹಿತಿಗಳನ್ನು ನೀಡುವ ಮೂಲಕ ಭಾರತೀಯ ವಾಯು ಸೇನೆಯ ಇತಿಹಾಸ, ವಾಯು ಸೇನೆ ನಡೆಸಿದ ಯುದ್ಧಗಳ ಮಾಹಿತಿ, ವಿಶಿಷ್ಟ ಬಗೆಯ ಯುದ್ಧ ವಿಮಾನಗಳ ಕುರಿತ ಅಂಶಗಳನ್ನು ವಿಶಿಷ್ಟ ಸ್ಲೆöÊಡ್ ಮತ್ತು ದೃಶ್ಯಿಕೆಗಳ ಮೂಲಕ ವಿದ್ಯಾ ರ್ಥಿಗಳಿಗೆ ಮಾಹಿತಿಯನ್ನಿತ್ತರು.
ಜೊತೆಯಲ್ಲಿ ಭಾರತೀಯ ವಾಯು ಸೇನೆಯ ವಿಶಿಷ್ಟ ಬಸ್ಸಿನಲ್ಲಿ ವಿದ್ಯಾರ್ಥಿ ಗಳಿಗೆ ಪ್ರಾಯೋಗಿಕ ಎಲ್ಇಡಿಯ ಮೂಲಕ ವಿಮಾನ ಚಲಾವಣೆ ಮಾಡುವ ವಿಧಾನಗಳನ್ನು, ಯುದ್ಧ ವಿಮಾನಗಳಲ್ಲಿನ ತಂತ್ರಜ್ಞಾನಗಳ ಪರಿಚಯವನ್ನು ಮಾಡಿಕೊಡ ಲಾಯಿತು.
ಸ್ಕಾ÷್ವಡ್ರನ್ ಲೀಡರ್ ಹಾಗೂ ಸೈನಿಕ ಶಾಲೆಯ ಉಪಪ್ರಾಂಶುಪಾಲ ಮನ್ಪ್ರೀತ್ ಸಿಂಗ್ ಹಾಗೂ ಕೊಡಗು ೧೯ನೇ ಕರ್ನಾಟಕ ಬೆಟಾಲಿಯನ್ ಕರ್ನಲ್ ಗಿಲ್ಬರ್ಟ್ ಹಾಜರಿದ್ದರು. ಮಡಿಕೇರಿಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು, ಅಧ್ಯಾಪಕರು ಈ ಮಾರ್ಗದರ್ಶನ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಗಣಕವಿಜ್ಞಾನದ ಸಹ ಪ್ರಾಧ್ಯಾಪಕ ರವಿಶಂಕರ್ ನಿರೂಪಿಸಿದರು.