ಡಿ ಡಾ.ಬಿ.ಸಿ.ನವೀನ್ ಕುಮಾರ್ ಕರೆ ಡಿ ‘ಮನ ಮಾತಾದಾಗ’ ಕೃತಿ ಬಿಡುಗಡೆ
ಮಡಿಕೇರಿ, ಜೂ. ೨೮ : ಪುಸ್ತಕಗಳು ಸಂವಹನ ಶೀಲತೆ, ಸಾಮಾಜಿಕ ಕಳಕಳಿ, ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಬುದ್ದಿಯ ಮಟ್ಟವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಪುಸ್ತಕಗಳ ಮಹತ್ವದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಮನವರಿಕೆ ಮಾಡಿಕೊಡ ಬೇಕು. ಇದು ಮಕ್ಕಳಿಗೆ ಮಾತ್ರವಲ್ಲ ಸಮಾಜಕ್ಕೂ ಸಹಕಾರಿಯಾಗಲಿದೆ ಎಂದು ಮಕ್ಕಳ ತಜ್ಞ ವೈದ್ಯ ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯಪಟ್ಟರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನ ದಲ್ಲಿ ನಡೆದ ಕೊಡಗು ಪ್ರೆಸ್‌ಕ್ಲಬ್ ನಿರ್ದೇಶಕ ಕೆ.ಆರ್.ಪ್ರಸಿನ್ ಗೌಡ ರಚಿತ ಚೊಚ್ಚಲ ಕೃತಿ ‘ಮನ ಮಾತಾ ದಾಗ’ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡರೂ ಅಲ್ಲಿ ನಮ್ಮದೇ ಆದ ಹೆಜ್ಜೆಯನ್ನು ಮೂಡಿಸುವಂತಾ ಗಬೇಕು. ಇದಕ್ಕೆ ಪುಸ್ತಕಗಳು ಹೆಚ್ಚು ಸಹಕಾರಿಯಾಗಲಿವೆ. ಸಮಾಜಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ನೆನಪಿಸುವುದು ಪುಸ್ತಕಗಳು. ಹೊರ ಜಗತ್ತಿಗೆ ಪುಸ್ತಕಗಳೇ ಕಿಟಕಿಗಳು, ಆದ್ದರಿಂದ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬೇಕು, ಉಳಿಸಬೇಕು ಎಂದರು. ಪ್ರತಿ ವ್ಯಕ್ತಿಗೆ ಪುಸ್ತಕವೇ ಜೀವನದ ಅಂಗ, ಪುಸ್ತಕವೇ ಸ್ನೇಹಿತನಿದ್ದಂತೆ, ಪ್ರತಿ ಮನೆಯಲ್ಲಿ ಗ್ರಂಥಾಲಯ ಮೂಡಿಸುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಬೇಕು. ಪ್ರತಿಯೊ ಬ್ಬರು ಜೀವನದಲ್ಲಿ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕು. ಇಂದಿನ ಆಧುನಿ ಕತೆಯಲ್ಲಿ ಓದುವವರ ಸಂಖ್ಯೆ ಕಡಿಮೆಯಾ ಗುತ್ತಿದೆ, ಕಾರ್ಯಕ್ರಮ ಗಳಲ್ಲಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಓದುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ನವೀನ್ ಕುಮಾರ್ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜಯಂತಿ ಗಳನ್ನು ಸಾಂಕೇತಿಕವಾಗಿ ಆಚರಿಸಲಾ ಗುತ್ತಿದೆ ಹೊರತು ಮಹನೀಯರು ಮಾಡಿದ ಸಾಧನೆಯನ್ನು ಸ್ಫೂರ್ತಿ ಯಾಗಿಸುವ ಕೆಲಸ ನಡೆಯುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಪ್ರಾಚೀನ ಶಿಕ್ಷಣದಲ್ಲಿ ಮಗುವಿಗೆ ಭಾವಕೋಶ ಹಾಗೂ ಬುದ್ಧಿ ಕೋಶವನ್ನು ಬೆಳೆಸುವಂತಹ ಶಿಕ್ಷಣವಿತ್ತು. ಆದರೆ ಇಂದು ಬುದ್ಧಿ ಕೋಶವನ್ನು ಮಾತ್ರ ವಿಕಸನಗೊಳಿಸಿ ಭಾವಕೋಶವನ್ನು ಮರೆಯಲಾಗುತ್ತಿದೆ ಎಂದರು. ಪುಸ್ತಕಗಳು ಬರಹಗಾರರಿಗೆ ಬದ್ಧತೆಯನ್ನು ತಂದುಕೊಡುತ್ತವೆ. ಮೊದಲ ಹಾಗೂ ಕೊನೆಯ ಪುಸ್ತಕಕ್ಕೆ ಅಂತರ ಇರಬೇಕು. ಬರವಣಿಗೆಯ ದೃಷ್ಟಿಕೋನ ಸ್ಪಷ್ಟವಾಗಿರಬೇಕು, ಪುಸ್ತಕ ಭರವಸೆ ಮೂಡಿಸುವಂತಿರಬೇಕು, ಒಳ್ಳೆಯ ದೃಷ್ಟಿಕೋನವನ್ನು ಓದುಗರಲ್ಲಿ ಮೂಡಿಸುವಂತಿರಬೇಕು, ಬರಹಗಾರ ಬರೆಯುತ್ತ ತಾನು ದೊಡ್ಡವನಾಗಬೇಕು, ಓದುಗರನ್ನು ದೊಡ್ಡವರಾಗಿಸಬೇಕು, ತಾನು ಸ್ಪಷ್ಟವಾಗಬೇಕು, ಓದುಗರನ್ನು ಸ್ಪಷ್ಟಗೊಳಿಸಬೇಕು ಎಂದು ಹೇಳಿದರು. ಸುದೀರ್ಘ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ, ಈ ರೀತಿಯ ಬರವಣಿಗೆಗಳು ಪುಸ್ತಕದಲ್ಲಿ ಮೂಡಿಬಂದಿದ್ದು, ಮತ್ತಷ್ಟು ಪುಸ್ತಕಗಳು ಹೊರತರುವಂತಾಗಲಿ ಎಂದು ನಾರಾಯಣ ಶೇವಿರೆ ಆಶಿಸಿದರು.
‘ವಿಕ್ರಮ’ ಸಂಪಾದಕ ವೃಶಾಂಕ್ ಭಟ್ ಮಾತನಾಡಿ, ಇಂದಿನ ಶಿಕ್ಷಣದಿಂದ ಸ್ಪರ್ಧಾತ್ಮಕ ಭಾವನೆ ಬೆಳೆಯುತ್ತಿದೆ, ಮತ್ತೊಬ್ಬರಿಗೋಸ್ಕರ ಮತ್ತು ದೇಶಕ್ಕಾಗಿ ಬದುಕುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು, ಪತ್ರಕರ್ತರು ಎದುರಿಸುವ ಸವಾಲು ಹಾಗೂ ಸದಾ ಚಟುವಟಿಕೆಯಲ್ಲಿರುವ ವ್ಯಕ್ತಿ ಏನೇನು ಆಲೋಚನೆ ಮಾಡಬಲ್ಲ ಎಂಬುವುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರು ಕಾರ್ಯದ ಒತ್ತಡದ ನಡುವೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಒಂದೇ ವಿಚಾರಕ್ಕೆ ಹಲವಾರು ಆಯಾಮಗಳಿರುತ್ತವೆ. ಸಮಾಜಮುಖಿಯಾಗಿ ಯೋಚಿಸು ವವರ ಸಂಖ್ಯೆ ಹೆಚ್ಚಾಗಬೇಕು. ದೇಶ, ರಾಷ್ಟಿçÃಯತೆಯೊಂದಿಗೆ ಮನುಷ್ಯತ್ವ ವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ, ಕೊಡಗಿನ ಪತ್ರಕರ್ತರು ಪ್ರತಿಕಾಲಘಟ್ಟದಲ್ಲೂ ಸಾಹಿತ್ಯ ರಚಿಸಿಕೊಂಡು ಬಂದಿದ್ದು, ಮುಂದೆಯೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದರು.
ಪುಸ್ತಕ ೨೩ ಅಧ್ಯಾಯಗಳ ಹೊಂದಿದ್ದು, ಪ್ರತಿ ಅಧ್ಯಾಯ ವಾಸ್ತವತೆಯಿಂದ ಕೂಡಿದೆ ಎಂದು ಹೇಳಿದರು.
‘ಮನ ಮಾತದಾಗ’ ಕೃತಿ ರಚನೆಕಾರ, ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ಕೆ.ಆರ್.ಪ್ರಸಿನ್ ಗೌಡ ಮಾತನಾಡಿ, ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುವುದೋ ಅದೇ ಕ್ಷೇತ್ರದಲ್ಲಿ ಸಾಗಿದರೆ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಕೆ.ಆರ್.ಪ್ರಸಿನ್ ಗೌಡರಿಗೆ ಪ್ರೋತ್ಸಾಹ ಧನ ನೀಡÀಲಾಯಿತು.
ಪತ್ರಕರ್ತ ವಿನುಕುಶಾಲಪ್ಪ ಪ್ರಾರ್ಥಿಸಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಕಿಶೋರ್ ರೈ ಕತ್ತಲೆಕಾಡು ನಿರೂಪಿ ಸಿದರು, ಪ್ರೆಸ್ ಕ್ಲಬ್ ನಿರ್ದೇಶಕ ಸುನಿಲ್ ಪೊನ್ನೆಟ್ಟಿ ಸ್ವಾಗತಿಸಿ, ಖಜಾಂಚಿ ಬೊಳ್ಳಜಿರ ಬಿ.ಅಯ್ಯಪ್ಪ ವಂದಿಸಿದರು.