ಕರಿಕೆ, ಜೂ. ೨೮ : ಮಡಿಕೇರಿ ತಾಲೂಕಿನ ಭಾಗಮಂಡಲ - ಹೋಬಳಿ ವ್ಯಾಪ್ತಿಯಲ್ಲಿ ಕರಿಕೆ, ಭಾಗಮಂಡಲ, ಸಣ್ಣಪುಲಿಕೋಟು, ಅಯ್ಯಂಗೇರಿ, ಕುಂದಚೇರಿ ಗ್ರಾಮಗಳಿಗೆ ಸಂಬAಧಿಸಿದ ಪೌತಿ, ವಾರಸುದಾರಿಕೆ ಖಾತೆ ಆಂದೋಲನ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾ ೩೦ ರಂದು ಬೆಳಿಗ್ಗೆ ೧೧ ಗಂಟೆಗೆ ಭಾಗಮಂಡಲ ನಾಡ ಕಚೇರಿಯಲ್ಲಿ ನಡೆಯಲಿದೆ.

ಪೌತಿ, ವಾರಿಸುದಾರಿಕೆ ಖಾತೆ ಸಂಬAಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್ಡಿ ಸಂಖ್ಯೆಯ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಜೊತೆಗೆ ಕಲಂ ೧೦ ರಲ್ಲಿ ದಾಖಲಾಗಿರುವ ಮ್ಯೂಟೇಷನ್ ಪ್ರತಿ, ಜಮಾಬಂಧಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಹಾಜರುಪಡಿಸಲು ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ.

ಕರಿಕೆ, ಭಾಗಮಂಡಲ, ಅಯ್ಯಂಗೇರಿ, ಸಣ್ಣಪುಲಿಕೋಟು ಹಾಗೂ ಕುಂದಚೇರಿ ಗ್ರಾಮ ವ್ಯಾಪ್ತಿಯ ಎಲ್ಲ ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಂದಾಯ ಪರಿವೀಕ್ಷಕ ಅನೂಪ್ ಅವರು ಕೋರಿದ್ದಾರೆ.