ಮಡಿಕೇರಿ, ಜೂ. ೨೭: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಕನ್ನಡದ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಸಂಸ್ಥೆಯಲ್ಲಿ ಅಧಿಕಾರಕ್ಕೆ ಬಂದವರು ಕೆಲಸ ಮಾಡಬೇಕು; ಕೆಲಸ ಮಾಡದವರನ್ನು ಬದಲಾವಣೆ ಮಾಡಿ ನೂತನ ಸಮಿತಿ ರಚನೆ ಮಾಡುವ ತೀರ್ಮಾನ ವನ್ನು ಪರಿಷತ್ತು ತೆಗೆದುಕೊಂಡಿರು ವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸ್ಪಷ್ಟಪಡಿಸಿದ್ದಾರೆ.

‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಹೊರಹೋಗುತ್ತಿರುವ ಕನ್ನಡದ ಕಟ್ಟಾಳುಗಳು’ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪರಿಷತ್ತಿನ ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ೫ ತಾಲೂಕು ಘಟಕಗಳು, ೧೨ ಹೋಬಳಿ ಘಟಕಗಳ ಸ್ಥಾಪನೆ, ೨೩ ದತ್ತಿ ನಿಧಿ ಕಾರ್ಯಕ್ರಮಗಳು, ೫೦ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಾಲ್ಕು ತಾಲೂಕು ಸಮ್ಮೇಳನಗಳು, ಒಂದು ಜಿಲ್ಲಾ ಸಮ್ಮೇಳನ ನಡೆಸಲಾಗಿದೆ.

ಕೆಲಸ ಮಾಡದ ಪದಾಧಿಕಾರಿ ಗಳನ್ನು ಪರಿಷತ್ತಿನಲ್ಲಿ ಉಳಿಸಿ ಕೊಂಡು ಆ ಭಾಗದಲ್ಲಿ ಪರಿಷತ್ತಿನ ಚಟುವಟಿಕೆಗಳು ನಿಷ್ಕಿçÃಯಗೊಳ್ಳುವಂತಹ ಸಂದರ್ಭದಲ್ಲಿ ಅವರನ್ನು ಖಂಡಿತ ವಾಗಿ ಬದಲಾಯಿಸಿ ನೂತನ ಸಮಿತಿ ಯನ್ನು ರಚಿಸುವ ತೀರ್ಮಾನವನ್ನು ಪರಿಷತ್ತು ತನ್ನ ಮೊದಲನೆಯ ಸಭೆಯಲ್ಲಿಯೇ ತೆಗೆದುಕೊಂಡಿದೆ.

ಅಧಿಕಾರಕ್ಕೆ ಬಂದವರು ೫ ವರ್ಷಗಳ ಕಾಲ ಅಧಿಕಾರದಲ್ಲಿರಬೇಕು, ಕೆಲಸ ಮಾಡದಿದ್ದರೂ ಅವರು ಸ್ಥಾನದಲ್ಲಿ ಮುಂದುವರಿಯಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡಿದರೆ ಸಾಹಿತ್ಯ ಪರಿಷತ್ತು ಬೆಳೆಯಲು ಹೇಗೆ ಸಾಧ್ಯ? ಕೆಲಸ ಮಾಡಲು ಸಾಧ್ಯವಿಲ್ಲದವರನ್ನು ಬದಲಾಯಿಸಿ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳನ್ನು ಮುಂದುವರಿಸಿ ಕೊಂಡು ಹೋಗುವ ತೀರ್ಮಾನವನ್ನು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಮಂಡಳಿ ಈ ಹಿಂದೆಯೇ ತೆಗೆದುಕೊಂಡಿರು ವುದರಿಂದ ಮತ್ತು ಎಲ್ಲಾ ಚಟುವಟಿಕೆಗಳಿಗೆ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಮಾರ್ಗದರ್ಶನ ತೆಗೆದುಕೊಂಡು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ಅವರು, ವಿವಿಧ ಸಂಘಟನೆಗಳಲ್ಲಿ ಇರುವುದರಿಂದ ಪರಿಷತ್ತಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲವೆಂದು ರಾಜೀನಾಮೆ ನೀಡಿದ್ದಾರೆ. ಗೌರವ ಕಾರ್ಯದರ್ಶಿಯಾಗಿದ್ದ ಪ್ರತಿಮಾ ರೈ ಅವರೂ ಕೂಡ ಸಮಯ ನೀಡಲಾಗುವುದಿಲ್ಲವೆಂದು ರಾಜೀ ನಾಮೆ ನೀಡಿದ್ದಾರೆ. ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಅವರ ವಿರುದ್ಧ ದೂರುಗಳಿದ್ದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಅವರನ್ನು ಪದಚ್ಯುತಿಗೊಳಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.