ಕುಶಾಲನಗರ, ಜೂ. ೨೭: ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಹಲವು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಡೆಂಗ್ಯೂ ಹರಡುವ ಸೊಳ್ಳೆಗಳ ನಾಶಕ್ಕಾಗಿ ಸರ್ಜಿಕಲ್ ಸ್ಟೆçöÊಕ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೀಗ ಕುಶಾಲನಗರ ವ್ಯಾಪ್ತಿಯ ನಾಗರಿಕರು ಜ್ವರ ಪೀಡಿತರಾಗಿ ಆತಂಕಕ್ಕೆ ಒಳಗಾಗಿರುವುದು ಕಂಡುಬAದಿದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹಲವರು ಜ್ವರ ಪೀಡಿತರಾಗಿ ಕುಶಾಲ ನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕೂಡ ಜ್ವರ ಪೀಡಿತರಾಗಿ ಕರ್ತವ್ಯಕ್ಕೆ ರಜೆ ಹಾಕಿರುವುದು ಕಂಡು ಬಂದಿದೆ. ಓರ್ವ ಸಿಬ್ಬಂದಿಗೆ ಡೆಂಗ್ಯೂ ಜ್ವರ ಖಚಿತಗೊಂಡಿದೆ. ಆಸ್ಪತ್ರೆಯಲ್ಲಿ ಹತ್ತಕ್ಕೂ ಅಧಿಕ ಮಂದಿ ಜ್ವರ ಪೀಡಿತರಾಗಿ ಒಳ ರೋಗಿಗಳಾಗಿ ದಾಖಲಾಗಿದ್ದಾರೆ.

ಕೂಡಿಗೆ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರ ತಂಡ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಡೆಂಗ್ಯೂಗೆ ಕಾರಣವಾದ ಸೊಳ್ಳೆಗಳ ನಾಶದ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುತ್ತಿದೆ.

ಕೂಡಿಗೆ ಆರೋಗ್ಯ ಕೇಂದ್ರದ ಡಾ.ತೇಜಶ್ರೀ ಅವರ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕರಾದ ಚಂದ್ರೇಶ್, ಮುಕೇಶ್ ಮತ್ತು ಸಿಬ್ಬಂದಿಗಳು ಕಳೆದ ಕೆಲವು ದಿನಗಳಿಂದ ಡೆಂಗ್ಯೂ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೆಯ ಸುತ್ತಮುತ್ತ ತೆಂಗಿನ ಚಿಪ್ಪು, ಟಯರ್ ಮತ್ತಿತರ ವಸ್ತುಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವ ಮೂಲಕ ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿ ತಪ್ಪಿಸಬಹುದು ಎಂದು ಕುಶಾಲನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಧುಸೂದನ್ ತಿಳಿಸಿದ್ದಾರೆ. ಹಗಲು ಸೊಳ್ಳೆಯಿಂದ ಕಚ್ಚಿಸಿಕೊಳ್ಳಬಾರದು. ಮನೆ ಕಟ್ಟಡಗಳು ಸುತ್ತಮುತ್ತ ಸ್ವಚ್ಛತೆ, ಎಚ್ಚರಿಕೆ ಮತ್ತು ಜಾಗೃತಿ ಮೂಲಕ ಡೆಂಗ್ಯೂ ಹಬ್ಬುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. - ಚಂದ್ರಮೋಹನ್