ಕುಶಾಲನಗರ, ಜೂ. ೨೮: ಕುಶಾಲನಗರ ಸಮೀಪ ತಾವರೆಕೆರೆ ಬಳಿ ವಾಹನಗಳ ನಡುವೆ ಸರಣಿ ಅಪಘಾತ ನಡೆಯಿತು.

ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರೊಂದಕ್ಕೆ ಹಿಂದಿನಿAದ ವೇಗವಾಗಿ ಬಂದ ಲಾರಿ ಅಪ್ಪಳಿಸಿದ ಕಾರಣ ಎದುರುಗಡೆ ಹೋಗುತ್ತಿದ್ದ ಇನ್ನೊಂದು ಕಾರು ಕೂಡ ಜಖಂಗೊAಡಿದೆ.

ಹಿAದಿನಿAದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರುಗಳಿಗೆ ಅಪ್ಪಳಿಸಿದ ಕಾರಣ ಎರಡು ಕಾರುಗಳು ಜಖಂಗೊAಡವು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಕುಶಾಲನಗರ ಸಂಚಾರಿ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಲಾರಿ ಚಾಲಕನ ನಿರ್ಲಕ್ಷö್ಯ ಹಿನ್ನೆಲೆಯಲ್ಲಿ ಆತನಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು.