*ಸಿದ್ದಾಪುರ, ಜೂ.೨೬ : ಕೊಡಗು ಜಿಲ್ಲೆಯ ಬೆಳೆಗಾರರ ಪರಿಸ್ಥಿತಿ ಪ್ರತಿರ‍್ಷ ಬಾಣಲೆಯಿಂದ ಬೆಂಕಿಗೆ ಬೀಳುವಂತಾಗುತ್ತಿದೆ. ಪ್ರತಿ ಬಾರಿ ಅತಿವೃಷ್ಟಿಯಿಂದ ಕಂಗೆಡುವ ಬೆಳೆಗಾರ ಪ್ರಸ್ತುತ ಮಳೆಯ ಕೊರತೆಯನ್ನು ಎದುರಿಸುತ್ತಿದ್ದಾನೆ. ಉತ್ತಮ ಮಳೆಯಾಗಬೇಕಾದ ಜೂನ್ ತಿಂಗಳಿನಲ್ಲೇ ಸ್ಪಿಂಕ್ಲರ್ ನೀರಿಗೆ ಮೊರೆ ಹೋಗಬೇಕಾದ ಅನಿವರ‍್ಯತೆ ಎದುರಾಗಿದೆ.
ಕಾವೇರಿನಾಡು ಕೊಡಗಿನ ಇತಿಹಾಸದಲ್ಲಿಯೇ ಕಾಫಿ ತೋಟಗಳಿಗೆ ಮಳೆಗಾಲದಲ್ಲಿ ಸ್ಪಿಂಕ್ಲರ್ ಮೂಲಕ ನೀರು ಹಾಯಿಸು ತ್ತಿರುವುದು ಇದೇ ಮೊದಲು ಎಂದು ಅಭ್ಯತ್‌ಮಂಗಲದ ಕಾಫಿ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ. ಅಲ್ಪಸ್ವಲ್ಪ ನೀರು ಇರುವ ಪ್ರದೇಶಗಳಲ್ಲಿ ಸ್ಪಿಂಕ್ಲರ್ ಬಳಸಬಹುದಾಗಿದೆ, ಆದರೆ ನದಿ ಬತ್ತಿ ಹೋಗಿರುವ ವ್ಯಾಪ್ತಿಯಲ್ಲಿ ನೀರು ಇಲ್ಲದೆ ಕಾಫಿ ಹಾಗೂ ಕಾಳು ಮೆಣಸು ಗಿಡಗಳು ಸೊರಗುತ್ತಿವೆ.
ಕಾಫಿಗೆ ಈಗ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇದೆ, ಆದರೆ ಉತ್ತಮ ಇಳುವರಿಯನ್ನು ತೆಗೆಯಬೇಕಾದ ಜವಾಬ್ದಾರಿ ಬೆಳೆಗಾರನ ಮೇಲಿದೆ. ಬೆಳೆಯ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಯನ್ನು ಎದುರು ನೋಡಬೇಕಾದರೆ ಸಕಾಲದಲ್ಲಿ ಹದವಾದ ಮಳೆಯಾಗಬೇಕಾಗುತ್ತದೆ. ಈ ಬಾರಿ ಜೂನ್ ಕೊನೆಯ ವಾರವಾದರೂ ನಿರೀಕ್ಷಿತ ಮಳೆಯಾಗದೆ ಇರುವುದರಿಂದ ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿದ್ದಾರೆ.
ಮಳೆಯಾದರೆ ಮಾತ್ರ ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಸಾಧ್ಯವಾಗುತ್ತದೆ, ಸರಿಯಾದ ಸಮಯದಲ್ಲಿ ಗೊಬ್ಬರ ದೊರೆತಾಗ ಬೆಳೆಯೂ ಉತ್ತಮ ರೀತಿಯಲ್ಲಿರುತ್ತದೆ. ಆದರೆ ಪ್ರಸ್ತುತ ಮಳೆಯೇ ಬಾರದಿರುವುದರಿಂದ ಕಾಫಿ ಇಳುವರಿ ಕೈಕೊಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.
ಕಪ್ಪು ಚಿನ್ನವೆಂದೇ ಕರೆಯಲ್ಪಡುವ ಕಾಳು ಮೆಣಸು ಕಾಫಿ ಬೆಳೆಗಾರನ ಕಷ್ಟದ ಕಾಲದಲ್ಲಿ ನೆರವಿಗೆ ಬರುವ ಪ್ರಮುಖ ವಾಣಿಜ್ಯ ಬೆಳೆ. ಆದರೆ ಈ ಮೆಣಸಿನ ಬಳ್ಳಿಗೂ ನೀರಿನ ಅವಶ್ಯಕತೆ ಇರುವುದರಿಂದ ಸ್ಪಿಂಕ್ಲರ್ (ಮೊದಲ ಪುಟದಿಂದ) ಮೂಲಕವೇ ನೀರು ಹಾಯಿಸಬೇಕಾಗಿದೆ. ಕಾಫಿ ಕೈಕೊಟ್ಟರೆ ಕಾಳು ಮೆಣಸು ಕೈಹಿಡಿಯುತ್ತದೆ ಎನ್ನುವ ಪರಿಸ್ಥಿತಿ ಈಗ ಇಲ್ಲ. ಮಳೆಯಿಲ್ಲದೆ ಹಲವು ತೋಟಗಳಲ್ಲಿ ಕಾಳು ಮೆಣಸು ಬಳ್ಳಿಗಳು ಒಣಗುತ್ತಿವೆ. ಕಳೆದ ಕೆಲವು ರ‍್ಷಗಳಿಂದ ಅತಿವೃಷ್ಟಿ ಮತ್ತು ಪ್ರವಾಹದಿಂದ ಅಪಾರ ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಈ ಬಾರಿ ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುವ ಜಿಲ್ಲೆಯ ಕೃಷಿಕ ರ‍್ಗ ಮಳೆಗಾಲದ ಮಳೆಯಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಬೇಕಾಗಿತ್ತು. ಆದರೆ ಮಳೆ ಬಾರದೆ ಇರುವುದರಿಂದ ಮತ್ತು ಬತ್ತಿ ಹೋದ ನದಿ, ಕೆರೆ, ಹೊಳೆಯಲ್ಲಿ ನೀರು ಸಿಗದೆ ಇರುವುದರಿಂದ ಒಣಗಿದ ಕೃಷಿ ಭೂಮಿಯನ್ನು ನೋಡುತ್ತಾ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ರ‍್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೂ ಕುಡಿಯಲು ಹಾಗೂ ಕೃಷಿ ಕರ‍್ಯಕ್ಕೆ ನೀರು ಒದಗಿಸುತ್ತಿದ್ದ ಕಾವೇರಿನಾಡು ಕೊಡಗು ಇಂದು ಹನಿ ನೀರಿಗಾಗಿ ಪರಿತಪಿಸಬೇಕಾದ ಅನಿವರ‍್ಯತೆಯನ್ನು ಎದುರಿಸುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆಯ ಕೊರತೆ ಎದುರಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಎದುರಾದರೆ ಕೃಷಿ ಕ್ಷೇತ್ರ ಸಂಪರ‍್ಣ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. -ಅಂಚೆಮನೆ ಸುಧಿ