ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಜೂ. ೨೬: ಅದೊಂದು ಪುಟ್ಟ ಕುಟುಂಬ, ಅಪ್ಪ, ಅಮ್ಮ, ಇಬ್ಬರು ಮಕ್ಕಳು ಇರುವುದರಲ್ಲಿ ಸಂತೃಪ್ತಿಯಿAದ ಬದುಕು ಸಾಗಿಸು ತ್ತಿದ್ದರು. ಆಟೋ ಚಾಲನೆ ಮಾಡುತ್ತ ಬದುಕು ಕಟ್ಟಿಕೊಂಡು ಮುದ್ದಾದ ಮಕ್ಕಳೊಂದಿಗೆ ನೆಮ್ಮದಿಯಾಗಿ ಮುನ್ನಡೆಯುತ್ತಿದ್ದರು. ಆದರೆ, ಇಂದು ಈ ಸುಂದರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ವಿಧಿಯಾಟಕ್ಕೆ ಏನೂ ತಿಳಿಯದ ಮಕ್ಕಳು ಇದೀಗ ನೋವು ಅನುಭವಿಸುತ್ತಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಪೋಷಕರು ಪರದಾಡುತ್ತಿದ್ದಾರೆ. ನೆರವಿನ ನಿರೀಕ್ಷೆಯೊಂದಿಗೆ ೨ ಕಂದಮ್ಮಗಳು ಗೋಳಿಡುತ್ತಿವೆ. ಈ ಘಟನೆ ಕಟುಕರ ಕಣ್ಣಲ್ಲೂ ನೀರು ತರಿಸುತ್ತದೆ.
ಹೌದು.. ಗೋಣಿಕೊಪ್ಪ ನಗರದ ೬ನೇ ವಿಭಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ವೃತ್ತಿಯಲ್ಲಿ ಆಟೋಚಾಲಕನಾಗಿರುವ ಆದಿಲ್ ಅಹಮ್ಮದ್ ಹಾಗೂ ಮುನ್ಸಿರಾ ದಂಪತಿ ಪುತ್ರಿ ಆಲಿಯಾ ಫಾತಿಮ, ಮಗ ಸೈಯದ್ ಆಹಿಲ್ ಗಂಭೀರ ಕಾಯಿಲೆಯಿಂದ ನರಳಾಡುತ್ತಿದ್ದಾರೆ. ಅವರ ಪ್ರಾಣಭಿಕ್ಷೆಗೆ ಕುಟುಂಬ ಸಹಾಯಹಸ್ತ ಕೋರಿದೆ.
ಕಳೆದ ಹತ್ತು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಮೊದಲು ಹೆಣ್ಣು ಮಗು ಜನಿಸುತ್ತದೆ.
ಅದಾದ ಬಳಿಕ ಪುತ್ರ ಜನಿಸುತ್ತಾನೆ. ಪುಟ್ಟ ಮಗುವಿಗೆ ಮೂರು ತಿಂಗಳು ಕಳೆಯುತ್ತಿದ್ದಂತೆಯೇ ಮಗನಿಗೆ ಕಾಯಿಲೆವೊಂದು ಕಾಣಿಸಿಕೊಂಡಿತ್ತು. ನಂತರದ ದಿನದಲ್ಲಿ ಈ ಕುಟುಂಬವು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಇಂದಿಗೂ ಮುಂದುವರೆಯುತ್ತಿದೆ.
ಆದಿಲ್ ಅಹಮ್ಮದ್ ಮಗನಾದ ಸೈಯದ್ ಆಹಿಲ್ಗೆ ಇದೀಗ ೬ ವರ್ಷ ತುಂಬಿದೆ. ಈತನಿಗೆ ಮೂರು ತಿಂಗಳು ಇರುವಾಗಲಿಂದಲೂ ‘ತಲಸೀಮಿಯ’ ಎಂಬ ಕ್ಯಾನ್ಸರ್ ಮಾದರಿಯ ಕಾಯಿಲೆ ಬಾಧಿಸಿದೆ. ಪ್ರತಿ ತಿಂಗಳು ರೂ. ೩೦ ಸಾವಿರ ವೆಚ್ಚದಲ್ಲಿ ರಕ್ತವನ್ನು ನೀಡುತ್ತ ಸಂಕಷ್ಟದಲ್ಲಿ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗನ ಆರೋಗ್ಯ ಸುಧಾರಣೆಗಾಗಿ ಈ ಬಡ ಕುಟುಂಬವು ಈಗಾಗಲೇ ಚಿಕಿತ್ಸೆಗೆ
(ಮೊದಲ ಪುಟದಿಂದ) ಲಕ್ಷಾಂತರ ಹಣವನ್ನು ವೆಚ್ಚ ಮಾಡುತ್ತ ಬರುತಿತ್ತು. ‘ಬೋನ್ಮ್ಯಾರೊ’ ಚಿಕಿತ್ಸೆಯ ಅವಶ್ಯಕತೆ ಇದೆ. ಮುಂದೆ ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಈ ಹೊತ್ತಿನಲ್ಲಿಯೇ ನಡೆದ ಒಂದು ಅವಘಡ ಮತ್ತೊಂದು ಮಗುವಿನ ಪ್ರಾಣಕ್ಕೆ ಕುತ್ತು ತಂದಿದೆ. ತಾಯಿ ಮುನ್ಸಿರಾ ತನ್ನ ಮಗುವಿನ ಆರೈಕೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿ ಮತ್ತೊಂದು ಅನಾಹುತವು ನಡೆದು ಹೋಯಿತು. ಗ್ಯಾಸ್ ಸ್ಟೌ ಮೇಲೆ ಇಟ್ಟಿದ್ದ ಬಿಸಿ ನೀರಿನ ಪಾತ್ರೆಯನ್ನು ಇವರ ಮಗಳು ಆಲಿಯಾ ಫಾತಿಮ ಆಕಸ್ಮಿಕವಾಗಿ ಮೈಮೇಲೆ ಎಳೆದುಕೊಂಡಿದ್ದಾಳೆ. ಇದರಿಂದ ಕುದಿಯುವ ನೀರು ಮಗುವಿನ ಮೇಲೆ ಬಿದ್ದ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಸುಟ್ಟು ಹೋಗಿದೆ. ಇದರಿಂದ ಈ ಕುಟುಂಬವು ಮತ್ತಷ್ಟು ನೋವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಕೆಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇದೆ.
ಈಕೆಯ ಚಿಕಿತ್ಸೆಗಾಗಿ ಕುಟುಂಬವು ಪಡಬಾರದ ಕಷ್ಟವನ್ನು ಅನುಭವಿಸಿದೆ. ಎಲ್ಲವೂ ಆಟೋಚಾಲನೆಯಿಂದ ದುಡಿದ ಹಣದಲ್ಲಿಯೇ ಮನೆಯ ಖರ್ಚು ಹಾಗೂ ಮಕ್ಕಳಿಬ್ಬರ ಆಸ್ಪತ್ರೆಯ ಖರ್ಚು ನಿಭಾಯಿಸಲು ಸಾಧ್ಯವಾಗದ ಪರಿಸ್ಥಿತಿಗೆ ತಂದೊಡ್ಡಿದೆ. ಮಕ್ಕಳಿಬ್ಬರ ಶಸ್ತç ಚಿಕಿತ್ಸೆಗೆ ಹಾಗೂ ಪ್ಲಾಸ್ಟಿಕ್ ಸರ್ಜರಿಗೆ (ಮೊದಲ ಪುಟದಿಂದ) ಲಕ್ಷಾಂತರ ಹಣವನ್ನು ವೆಚ್ಚ ಮಾಡುತ್ತ ಬರುತಿತ್ತು. ‘ಬೋನ್ಮ್ಯಾರೊ’ ಚಿಕಿತ್ಸೆಯ ಅವಶ್ಯಕತೆ ಇದೆ. ಮುಂದೆ ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಈ ಹೊತ್ತಿನಲ್ಲಿಯೇ ನಡೆದ ಒಂದು ಅವಘಡ ಮತ್ತೊಂದು ಮಗುವಿನ ಪ್ರಾಣಕ್ಕೆ ಕುತ್ತು ತಂದಿದೆ. ತಾಯಿ ಮುನ್ಸಿರಾ ತನ್ನ ಮಗುವಿನ ಆರೈಕೆಯಲ್ಲಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿ ಮತ್ತೊಂದು ಅನಾಹುತವು ನಡೆದು ಹೋಯಿತು. ಗ್ಯಾಸ್ ಸ್ಟೌ ಮೇಲೆ ಇಟ್ಟಿದ್ದ ಬಿಸಿ ನೀರಿನ ಪಾತ್ರೆಯನ್ನು ಇವರ ಮಗಳು ಆಲಿಯಾ ಫಾತಿಮ ಆಕಸ್ಮಿಕವಾಗಿ ಮೈಮೇಲೆ ಎಳೆದುಕೊಂಡಿದ್ದಾಳೆ. ಇದರಿಂದ ಕುದಿಯುವ ನೀರು ಮಗುವಿನ ಮೇಲೆ ಬಿದ್ದ ಪರಿಣಾಮ ಪೂರ್ಣ ಪ್ರಮಾಣದಲ್ಲಿ ಸುಟ್ಟು ಹೋಗಿದೆ. ಇದರಿಂದ ಈ ಕುಟುಂಬವು ಮತ್ತಷ್ಟು ನೋವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಕೆಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇದೆ.
ಈಕೆಯ ಚಿಕಿತ್ಸೆಗಾಗಿ ಕುಟುಂಬವು ಪಡಬಾರದ ಕಷ್ಟವನ್ನು ಅನುಭವಿಸಿದೆ. ಎಲ್ಲವೂ ಆಟೋಚಾಲನೆಯಿಂದ ದುಡಿದ ಹಣದಲ್ಲಿಯೇ ಮನೆಯ ಖರ್ಚು ಹಾಗೂ ಮಕ್ಕಳಿಬ್ಬರ ಆಸ್ಪತ್ರೆಯ ಖರ್ಚು ನಿಭಾಯಿಸಲು ಸಾಧ್ಯವಾಗದ ಪರಿಸ್ಥಿತಿಗೆ ತಂದೊಡ್ಡಿದೆ. ಮಕ್ಕಳಿಬ್ಬರ ಶಸ್ತç ಚಿಕಿತ್ಸೆಗೆ ಹಾಗೂ ಪ್ಲಾಸ್ಟಿಕ್ ಸರ್ಜರಿಗೆ ಸೇರಿ ಒಟ್ಟು ರೂ. ೬೦ ಲಕ್ಷ ಹಣವು ವೆಚ್ಚವಾಗುತ್ತಿದೆ. ಈ ಹಣವನ್ನು ಭರಿಸಲು ಈ ಬಡ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ತನ್ನ ಮಕ್ಕಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜ ಬಾಂಧವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ವೇಳೆ ‘ಸೇವ್ ದಿ ಡ್ರೀಮ್ಸ್’ ಸಂಸ್ಥೆಯು ಇವರ ಕಷ್ಟವನ್ನು ಆಲಿಸಿ ತಮ್ಮ ಕೈಲಾಗುವ ಸಹಕಾರಕ್ಕೆ ಮುಂದಾಗಿದೆ. ದಾನಿಗಳ ಮೂಲಕ ಹಣ ಸಂಗ್ರಹಿಸಿ ಮಗುವಿನ ಚಿಕಿತ್ಸೆಗೆ ಮುಂದೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಮಾಜ ಬಾಂಧವರ ಸಹಾಯವನ್ನು ಈ ಕುಟುಂಬಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಇದರಿಂದ ಈ ನಾಡಿನ ಜನತೆ ಕೈಲಾದ ಸಹಾಯ ಹಸ್ತ ನೀಡುತ್ತಿದ್ದಾರೆ. ಈ ಬಡ ಕುಟುಂಬದ ಎರಡು ಮಕ್ಕಳ ಚಿಕಿತ್ಸೆಗಾಗಿ ದಾನಿಗಳು ಮುಂದೆ ಬಂದಲ್ಲಿ ಅಮೂಲ್ಯ ಜೀವಗಳನ್ನು ರಕ್ಷಿಸಬಹುದಾಗಿದೆ. ಆ ನಿಟ್ಟಿನಲ್ಲಿ ಕೊಡಗಿನ ಜನರು ಮಾನವೀಯತೆ ಮೆರೆಯಬೇಕಾಗಿದೆ. ಏನು ತಿಳಿಯದ ಪುಟ್ಟ ಕಂದಮ್ಮಗಳ ಬಾಳಿಗೆ ಬೆಳಕಾಗಬೇಕಾಗಿದೆ.