ಬೆAಗಳೂರು, ಜೂ. ೨೬: ಅರಣ್ಯ ಮತ್ತು ಮೃಗಪಕ್ಷಿಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಧರ್ಮದ ಭಾಗವಾಗಿದೆ. ಈ ಬ್ರಹ್ಮಾಂಡದಲ್ಲಿ ಎಲ್ಲ ಜೀವಿಗಳಿಗೂ ಬದುಕುವ ಸಮಾನ ಅವಕಾಶವಿದೆ, ಹಕ್ಕಿದೆ ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದರು.

ವಿಧಾನಸೌಧದಲ್ಲಿಂದು ಅರಣ್ಯ ಇಲಾಖೆಯ ಲಾಂಛನ (ಲೋಗೋ) ಬಿಡುಗಡೆ ಮಾಡಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಹೊಸ ಸರ್ಕಾರ ಬಂದಿದೆ. ರಾಜ್ಯದೆಲ್ಲೆಡೆ ಹೊಸ ಹುರುಪು ಮೂಡಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೂ ಹೊಸ ಹುರುಪು ನೀಡಲು ಲಾಂಛನ ಬಿಡುಗಡೆ ಮಾಡಲಾಗಿದೆ ಎಂದರು.

ಅರಣ್ಯ ಸಚಿವಾಲಯ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. ಆದರೆ ಈ ಇಲಾಖೆಗೆ ತನ್ನದೇ ಆದ ಸ್ವಂತ ಲಾಂಛನ ಇರಲಿಲ್ಲ. ಈಗ ಆ ಕಾಲ ಕೂಡಿ ಬಂದಿದೆ. ಇಲಾಖೆಯ ಉದ್ದೇಶ, ಮೌಲ್ಯಗಳು ಮತ್ತು ಕಾರ್ಯವನ್ನು ಪ್ರತಿನಿಧಿಸುವ ರೀತಿಯಲ್ಲಿ ಲಾಂಛನವನ್ನು ರೂಪಿಸಲಾಗಿದೆ.

ಇನ್ನು ಮುಂದೆ ಇಲಾಖೆಯ ಅಧಿಕೃತ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ತಾಣಗಳು, ಮತ್ತು ಪ್ರಚಾರ ಸಾಮಗ್ರಿಗಳಲ್ಲಿ ಈ ಲೋಗೋ ಬಳಸಲಾಗುವುದು ಎಂದರು.

ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯ, ಉದ್ದೇಶವನ್ನು ಬಿಂಬಿಸುವAತಹ ತನ್ನದೇ ಆದ ಲಾಂಛನ ಅಳವಡಿಸಿಕೊಳ್ಳಲು ನಿರ್ಧರಿಸಿ ಕಳೆದ ವರ್ಷ ವಿದ್ಯಾರ್ಥಿಗಳನ್ನು, ಕಲಾವಿದರು ಮತ್ತು ಸಾರ್ವಜನಿಕರಿಂದ ಲಾಂಛನ ರಚಿಸುವಂತೆ ಕೋರಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ರಾಜ್ಯಾದ್ಯಂತದಿAದ ಒಟ್ಟು ೩೦೯ ಲೋಗೋ ವಿನ್ಯಾಸಗಳು ಬಂದಿದ್ದವು. ಈ ಎಲ್ಲವನ್ನೂ ಪರಿಶೀಲಿಸಲು, ಒಂದು ಸಮಿತಿಯನ್ನು ರಚಿಸಿ, ೩ ಹಂತಗಳಲ್ಲಿ ಸ್ಪರ್ಧೆಯನ್ನು ನಡೆಸಿ, ಅಂತಿಮವಾಗಿ ಈ ಲೋಗೋ ಆಯ್ಕೆ ಮಾಡಲಾಗಿದೆ ಎಂದರು.

ಕರ್ನಾಟಕ ನಕ್ಷೆಯ ಆಕಾರದಲ್ಲಿರುವ ಲಾಂಛನದಲ್ಲಿ ರಾಷ್ಟಿçÃಯ ಪ್ರಾಣಿ ಹುಲಿ, ರಾಜ್ಯಪಕ್ಷಿ ನೀಲಕಂಠ, ರಾಜ್ಯ ಪ್ರಾಣಿ ಆನೆ, ರಾಜ್ಯದ ಹಿರಿಮೆ ಮತ್ತು ಗರಿಮೆಯಾದ ಶ್ರೀಗಂಧ, ರಾಜ್ಯ ಚಿಟ್ಟೆ ಸೌಥೆರ್ನ್ ಬರ್ಡ್ ವಿಂಗ್, ಮತ್ತು ಇವೆಲ್ಲಕ್ಕೂ ಮೂಲಾಧಾರವಾದ ಜಲಸಂಪನ್ಮೂಲವಿದ್ದು ಇಲಾಖೆಯನ್ನು ಸೂಕ್ತವಾಗಿ ಪ್ರತಿನಿಧಿಸುತ್ತದೆ ಎಂದರು.