ಗೋಣಿಕೊಪ್ಪ ವರದಿ, ಜೂ. ೨೬ : ಬಾಳೆಲೆ ನಿವಾಸಿ ಪಾಪು (೪೫) ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದು, ವಾರಸುದಾರರು ಇದ್ದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ.
ಅನಾರೋಗ್ಯದಿಂದ ಶುಕ್ರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದು, ವಾರಸುದಾರರಿಲ್ಲದ ಕಾರಣ ಮೃತದೇಹವನ್ನು ಜಿಲ್ಲಾಸ್ಪತ್ರೆ ಶೀಥಲೀಕರಣ ಘಟಕದಲ್ಲಿ ಇರಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಸ್ವತಃ ಅವರೇ ಬಾಳೆಲೆ ನಿವಾಸಿ, ತಂದೆಯ ಹೆಸರು ಚನ್ನ ಎಂದು ನೀಡಿದ್ದು, ಬಾಳೆಲೆಯಲ್ಲಿ ಇವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದ್ದರಿಂದ ವಾರಸುದಾರರು ಇದ್ದಲ್ಲಿ ೦೮೨೭೪೨೪೯೦೪೪ ಸಂಖ್ಯೆ ಸಂಪರ್ಕಿಸಲು ಪೊನ್ನಂಪೇಟೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.