(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜೂ. ೨೬: ಕಡಿಮೆ ದರದಲ್ಲಿ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸ್ಥಾಪನೆಯಾದ ಇಂದಿರಾ ಕ್ಯಾಂಟಿನ್ ಮಡಿಕೇರಿಯಲ್ಲಿ ಕ್ಷೀಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿತ್ತಾದರೂ ಬಿ.ಜೆ.ಪಿ ಆಡಳಿತ ದಲ್ಲಿ ನಿರ್ಲಕ್ಷö್ಯ ಕ್ಕೊಳಗಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು, ಕ್ಯಾಂಟಿನ್‌ಗೆ ಮರುಜೀವ ತುಂಬಲು ನೂತನ ಆಹಾರ ಮೆನು ತಯಾರಿಸಿರುವ ಸರಕಾರ ಸದ್ಯದಲ್ಲಿಯೇ ಬಹು ಅಗ್ಗ ಪ್ರಮಾಣದಲ್ಲಿ ಇದನ್ನು ರಾಜ್ಯಾ ದ್ಯಂತ ಚಾಲನೆಗೆ ತರಲಾಗುವುದಾಗಿ ಇತ್ತೀಚೆಗಷ್ಟೆ ಘೋಷಿಸಿತ್ತು. ಆದರೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಕ್ಯಾಂಟೀನ್ ತೀವ್ರ ನಿರ್ಲಕ್ಷö್ಯಕ್ಕೆ ಒಳಗಾಗಿದ್ದು, ಇತ್ತ ಯಾರೂ ಗಮನಹರಿಸುವವರಿಲ್ಲ ದ್ದಾಗಿದೆ.

೨೦೧೮ರಲ್ಲಿ ಮಂಜಿನ ನಗರಿ ಮಡಿಕೇರಿಯ ಹೊಸ ಖಾಸಗಿ ಬಸ್ಸು ತಂಗುದಾಣದ ಬಳಿ ಪ್ರಾರಂಭ ಗೊಂಡ ಇಂದಿರ ಕ್ಯಾಂಟೀನ್‌ನಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಅಶುಚಿತ್ವದ ವಾತಾವರಣದಿಂದಾಗಿ ಗ್ರಾಹಕರ ಸಂಖ್ಯೆ ದಿನೇದಿನೆ ಕ್ಷೀಣಗೊಳ್ಳುತ್ತಿದೆ. ಪ್ರತಿನಿತ್ಯ ಸುಮಾರು ೧೩೦ ರಿಂದ ೧೫೦ ಗ್ರಾಹಕರು ಬರುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ ಇದೀಗ ಕೇವಲ ೪೦ ರಿಂದ ೫೦ ಜನರು ಮಾತ್ರ ಬರುತ್ತಿದ್ದಾರೆ. ನಗರಸಭಾ ಪೌರಕಾರ್ಮಿಕರು ಬೆಳಿಗ್ಗೆ ಇಲ್ಲಿಗೆ ಬಾರದೆ ಇದ್ದರೆ, ಬೆಳಗ್ಗಿನ ತಿಂಡಿಗೆ ಗ್ರಾಹಕರೇ ಇಲ್ಲದಂತಾಗುತ್ತದೆ. ಇನ್ನು ಮಧ್ಯಾಹ್ನದ ಊಟಕ್ಕೆ ೧೫೦ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಜನರು ಇದೀಗ ಕೇವಲ ೬೦ ರಿಂದ ೭೦ಕ್ಕಿಳಿದಿದೆ ಹಾಗೂ ಭಾನುವಾರ ದಂದು ಕೇವಲ ೨೦ ರಿಂದ ೩೦ ಮಂದಿ ಮಾತ್ರ ಕ್ಯಾಂಟೀನ್‌ಗೆ ಬರುತ್ತಿದ್ದಾರೆ.

ಮಡಿಕೇರಿಯಲ್ಲಿ ಪ್ರಾರಂಭದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಆಟೋ ಚಾಲಕರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಹಾರ ಪೌರಕಾರ್ಮಿಕರು ಬೆಳಿಗ್ಗೆ ಇಲ್ಲಿಗೆ ಬಾರದೆ ಇದ್ದರೆ, ಬೆಳಗ್ಗಿನ ತಿಂಡಿಗೆ ಗ್ರಾಹಕರೇ ಇಲ್ಲದಂತಾಗುತ್ತದೆ. ಇನ್ನು ಮಧ್ಯಾಹ್ನದ ಊಟಕ್ಕೆ ೧೫೦ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಜನರು ಇದೀಗ ಕೇವಲ ೬೦ ರಿಂದ ೭೦ಕ್ಕಿಳಿದಿದೆ ಹಾಗೂ ಭಾನುವಾರ ದಂದು ಕೇವಲ ೨೦ ರಿಂದ ೩೦ ಮಂದಿ ಮಾತ್ರ ಕ್ಯಾಂಟೀನ್‌ಗೆ ಬರುತ್ತಿದ್ದಾರೆ.

ಮಡಿಕೇರಿಯಲ್ಲಿ ಪ್ರಾರಂಭದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಆಟೋ ಚಾಲಕರು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಹಾರ ಒತ್ತಡದಿಂದ ಕೆಲಸ ನಿರ್ವಹಿಸುತ್ತಿ ದ್ದಾರೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಕೂಡ ಇವರೊಬ್ಬರೆ ಕಾರ್ಯನಿರ್ವ ಹಿಸುತ್ತಿದ್ದಾರೆ. ಸಹಾಯಕಿಯಾಗಿ ಮತ್ತೊಬ್ಬರು ಮಹಿಳೆ ಮಾತ್ರ ಇದ್ದು, ಅವರು ಪಾತ್ರೆ ತೊಳೆಯುವುದು, ಕ್ಯಾಂಟೀನ್ ಶುಚಿತ್ವಗೊಳಿಸುವ ಕೆಲಸದಲ್ಲಿ ಮಾತ್ರ ತೊಡಗಿಸಿ ಕೊಂಡಿದ್ದಾರೆ.

ಅಶುಚಿತ್ವದಿAದ ಕೂಡಿರುವ ಶೌಚಾಲಯ- ಸುತ್ತಲೂ ಕಸದ ರಾಶಿ

ಇಂದಿರಾ ಕ್ಯಾಂಟೀನ್‌ನಲ್ಲಿ ಒಟ್ಟು ಎರಡು

(ಮೊದಲ ಪುಟದಿಂದ) ಶೌಚಾಲಯಗಳಿದ್ದು, ಒಂದಕ್ಕೆ ಬೀಗವೇ ಇಲ್ಲದಾಗಿದ್ದು, ಇವೆರಡೂ ಅಶುಚಿತ್ವದಿಂದ ಕೂಡಿವೆ. ಮತ್ತೊಂದೆಡೆ ಇಂದಿರಾ ಕ್ಯಾಂಟೀನ್ ಸುತ್ತಲೂ ಕಸದ ರಾಶಿಯಿಂದ ಗಬ್ಬು ನಾರುತ್ತಿದೆ. ಮಳೆ ಬಂದರೆ, ನೀರು ಇಂದಿರಾ ಕ್ಯಾಂಟೀನ್ ಶೌಚಾಲಯದೊಳಗೆ ಬರುತ್ತದೆ. ಭಾರೀ ಮಳೆಯಾದರೆ ಇಂದಿರಾ ಕ್ಯಾಂಟೀನ್ ಶೌಚಾಲಯವು ಮಳೆಯ ನೀರಿನಿಂದ ತುಂಬುತ್ತದೆ. ಅಲ್ಲಿ ಕೆಲಸ ನಿರ್ವಹಿಸುವವರಿಗೂ ಶೌಚಾಲಯ ಬಳಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.

ಕೆಟ್ಟು ನಿಂತಿರುವ ನೀರಿನ ಫಿಲ್ಟರ್

ಕ್ಯಾಂಟೀನ್ ಒಳಗೆ ಹಾಗೂ ಹೊರಗಡೆ ಅಳವಡಿಸಿರುವ ಬಿಸಿ ಹಾಗೂ ತಂಪು ನೀರಿನ ಫಿಲ್ಟರ್ ಯಂತ್ರ ಕೆಟ್ಟು ನಿಂತಿದ್ದು, ಕ್ಯಾಂಟೀನ್ ಒಳಗಡೆ ಇರುವ ಫಿಲ್ಟರ್ ನೀರಿನ ಯಂತ್ರ ಕೆಟ್ಟು ನಿಂತು ಕೆಳಗೆ ಬಿದ್ದು ವರ್ಷ ಕಳೆದಿದೆ. ಆದರೂ ಕೂಡ ಸಂಬAಧಪಟ್ಟವರು ಇತ್ತ ತಿರುಗಿ ನೋಡಿಯೇ ಇಲ್ಲ.

ಸರ್ಕಾರ ಹಾಗೂ ಜಿಲ್ಲಾಡಳಿತ ಇಂದಿರಾ ಕ್ಯಾಂಟೀನ್ ಅನ್ನು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತ ಅಥವಾ, ಮಡಿಕೇರಿ ಜಿಲ್ಲಾಸ್ಪತ್ರೆ ಬಳಿಯಲ್ಲಿ ಪ್ರಾರಂಭಿಸಬೇಕಿತ್ತು ಎಂದು ಈ ಮೊದಲೇ ಅಭಿಪ್ರಾಯ ವ್ಯಕ್ತವಾಗಿತ್ತು. ಜಿಲ್ಲಾಸ್ಪತ್ರೆ ಬಳಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದರೆ ಇಂದಿರಾ ಕ್ಯಾಂಟೀನ್ ಯೋಜನೆಯ ಫಲವನ್ನು ಎಲ್ಲರೂ ಪಡೆಯಬಹುದಿತ್ತು. ಆದರೆ ಮಡಿಕೇರಿ ನಗರದಿಂದ ದೂರ ಇರುವ ಕಾರಣ ಗ್ರಾಹಕರು ಇಂದಿರಾ ಕ್ಯಾಂಟೀನ್ ಗೆ ಬರುತ್ತಿಲ್ಲ ಎಂಬ ಮಾತುಗಳು ಜನವಲಯದಲ್ಲಿದೆ.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಕಡಿಮೆ ದರದಲ್ಲಿ ತಿಂಡಿ ಹಾಗೂ ಊಟ ಸಿಗುವ ಇಂದಿರಾ ಕ್ಯಾಂಟೀನ್‌ಗೆ ಮರು ಜೀವ ತುಂಬಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದಾರೆ. ಅವ್ಯವಸ್ಥೆಗಳ ಆಗಾರವಾಗಿರುವ ಮಂಜಿನ ನಗರಿಯ ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಜೀವ ತುಂಬಿ, ಬಡ ಜನರಿಗೆ ಹಸಿವು ನೀಗಿಸಲು ಅನುವು ಮಾಡಿಕೊಡಬೇಕಾಗಿದೆ. ಈ ಬಗ್ಗೆ ಶಾಸಕರ ಗಮನ ಕೂಡ ಅಗತ್ಯವಿದೆ.