ಮಡಿಕೇರಿ, ಜೂ. ೨೬: ಹಾಕಿ ಇಂಡಿಯಾ ವತಿಯಿಂದ ಒಡಿಶಾದ ರೂರ್ಕೆಲಾದಲ್ಲಿ ತಾ.೨೭ರಿಂದ (ಇಂದಿನಿAದ) ೧೩ನೇ ಹಾಕಿ ಇಂಡಿಯಾ ಜೂನಿಯರ್ ವುಮೆನ್ ನ್ಯಾಷನಲ್ ಚಾಂಪಿಯನ್ಶಿಪ್-೨೦೨೩ ಪಂದ್ಯಾವಳಿ ಆರಂಭ ಗೊಳ್ಳಲಿದೆ.
ಈ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡ ಪಾಲ್ಗೊಳ್ಳುತ್ತಿದ್ದು ತಂಡದಲ್ಲಿ ಕೊಡಗಿನ ಆರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಜಿಲ್ಲೆಯವರಾದ ಶ್ರಾವ್ಯ ಪಿ.ಡಿ, ಜೀವಿತಾ ಬಿ.ಜಿ, ದೀಪಿಕಾ ಬಿ, ಸೀಮಾ ಎ.ಪಿ, ದೇಚಮ್ಮ ಗಣಪತಿ ಹಾಗೂ ರಕ್ಷಿತಾ ಜೆ. ತಂಡದ ಆಟಗಾರ್ತಿಯರಾಗಿದ್ದಾರೆ. ತಾ.೨೭ ರಿಂದ ಜುಲೈ ೭ರ ತನಕ ಪಂದ್ಯಾವಳಿ ಜರುಗಲಿವೆ.