ಮಡಿಕೇರಿ, ಜೂ. ೨೬: ಇತ್ತೀಚೆಗೆ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು ಸಂಘದ ವೈದ್ಯರಿಗೆ ಮಡಿ ಕೇರಿಯಲ್ಲಿ ನಿರಂತರ ಶಿಕ್ಷಣ ಏರ್ಪ ಡಿಸಲಾಗಿತ್ತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೆ.ವಿ.ಜಿ. ಆಯುರ್ವೇದ ಕಾಲೇಜು, ಸುಳ್ಯದ ಹಿರಿಯ ಪ್ರಾಧ್ಯಾಪಕಿ ಡಾ.ರೋಹಿಣಿ ಭಾರದ್ವಾಜ್ ಆಯುರ್ವೇದದಲ್ಲಿ ಶೀಘ್ರವಾಗಿ ಕೆಲಸ ಮಾಡುವ ಮದ್ದು ಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದರು.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ವಿಶೇಷ ಆಯುರ್ವೇದ ಮದ್ದಿನ ಬಗ್ಗೆ ಡಾ.ಉದಯ ಕುಮಾರ್. ಎಸ್. ಮಾಹಿತಿ ನೀಡಿದರು. ನೀಮಾ ಕೊಡಗು ಅಧ್ಯಕ್ಷರಾದ ಡಾ.ರಾಜಾ ರಾಮ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಜನ ಕೊಡಗಿನ ಆಯುಷ್ ವೈದ್ಯರು ಈ ನಿರಂತರ ಶಿಕ್ಷಣದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಡಾ.ರೋಶನ್ ರವರು ಸ್ವಾಗತಿಸಿ, ಡಾ.ಅನುಷಾ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಪರಿ ಚಯ ಡಾ.ಹೀನಾ ಕೌಸರ್ ಮಾಡಿ ಕೊಟ್ಟು, ಡಾ.ಸೌಮ್ಯ ಗಣರಾಜ್ ಕಾರ್ಯ ಕ್ರಮ ನಿರೂಪಣೆ ಮಾಡಿದರು.
ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ, ಹಿರಿಯ ವೈದ್ಯರುಗಳಾದ ಡಾ.ಉದಯ ಶಂಕರ.ಎನ್., ಡಾ.ಶೈಲಜಾ ಮುರಳೀ ಧರ, ಡಾ.ರಾಜೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.