ಕೂಡಿಗೆ, ಜೂ. ೨೫: ಕರ್ನಾಟಕ ಸರಕಾರದಿಂದ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಯೋಜನೆಯಾಗಿ ರೂಪಿಸಿದ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಗೊAಡು ಏಳು ವರ್ಷಗಳು ಕಳೆದರೂ, ಇದುವರೆಗೆ ಪೂರ್ಣ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ೧.೧೨ ಎಕರೆ ಪ್ರದೇಶದಲ್ಲಿ ಹಿಂದೆ ಪಶು ಸಂಗೋ ಪನಾ ಸಚಿವರಾಗಿದ್ದ ಎ. ಮಂಜು ಅಧಿಕಾರ ಅವಧಿಯಲ್ಲಿ ಭೂಮಿ ಪೂಜೆಯೊಂದಿಗೆ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿತ್ತು.

ಆರಂಭಗೊAಡ ವರ್ಷಗಳಿಂದ ಮೇಕೆ ಹಾಲು ಉತ್ಪಾದನಾ ಘಟಕದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಮೂಲಕ ರೂ. ೧.೮೮ ಕೋಟಿ ವೆಚ್ಚದಲ್ಲಿ ಈಗಾಗಲೇ ಕಟ್ಟಡ ಮತ್ತು ಮೇಕೆಗಳ ಸಾಕಾಣಿಕೆಗೆ ಬೇಕಾಗುವ ಗ್ಯಾಲರಿ ಮತ್ತು ಅವುಗಳ ಕಸ ಸಂಗ್ರಹ ಕಟ್ಟಡಗಳ ಕಾಮಗಾರಿಯು ನಡೆದಿದೆ. ಆದರೆ ಮುಂದಿನ ಯೋಜನೆಯ ರೂಪರೇಷೆಗಳು ಮಾತ್ರ ನಡೆಯದೆ ಕಟ್ಟಡ ಮೂಲೆಗುಂಪಾಗಿ ಉಳಿದು ಕಾಡುಪಾಲಾಗುತ್ತದೆ.

ಮೇಕೆ ಹಾಲು ಉತ್ಪಾದನಾ ಮತ್ತು ಘಟಕದ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಘಟಕಕ್ಕೆ ಬೇಕಾಗುವ ಯಂತ್ರೋಪಕರಣ, ಮೇಕೆ ಮತ್ತು ಅವುಗಳ ಕಸ ಸಂಗ್ರಹ ಕಟ್ಟಡಗಳ ಕಾಮಗಾರಿಯು ನಡೆದಿದೆ. ಆದರೆ ಮುಂದಿನ ಯೋಜನೆಯ ರೂಪರೇಷೆಗಳು ಮಾತ್ರ ನಡೆಯದೆ ಕಟ್ಟಡ ಮೂಲೆಗುಂಪಾಗಿ ಉಳಿದು ಕಾಡುಪಾಲಾಗುತ್ತದೆ.

ಮೇಕೆ ಹಾಲು ಉತ್ಪಾದನಾ ಮತ್ತು ಘಟಕದ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ ಘಟಕಕ್ಕೆ ಬೇಕಾಗುವ ಯಂತ್ರೋಪಕರಣ, ಮೇಕೆ ರಾಜ್ಯ ಸರ್ಕಾರದ ಈ ಯೋಜನೆ ೫ ಕೋಟಿ ರೂ. ವೆಚ್ಚವಾಗಿದ್ದು, ಕಾಮಗಾರಿಗೆ ಪಶು ಸಂಗೋಪನ ಇಲಾಖೆಯ ವತಿಯಿಂದ ೩ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇದಕ್ಕೆ ತಕ್ಕ ಕೆಲಸಗಳು ನಡೆದಿದೆ. ಬಾಕಿ ಕೆಲಸಕ್ಕೆ ಅನುದಾನ ಇಲ್ಲದೆ ಯೋಜನೆ ಹಳ್ಳ ಹಿಡಿದಿದೆ.

ಮೇಕೆ ಹಾಲು ಉತ್ಪಾದನೆಯು ರಾಜ್ಯದ ಬೀದರ್, ಮಂಗಳೂರು, ಕಡೆಗಳಲ್ಲಿ ಖಾಸಗಿ ನಡೆಯುತ್ತಿದ್ದು, ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಆ ಭಾಗದ ಜನರಿಗೆ ಪ್ರಯೋಜನ ವಾಗುವ ಹುಲಿಯಿಂದ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಅನುಷ್ಠಾನ ಮಾಡಿದೆ. ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ಮೂಲೆಗುಂಪಾಗಿರುವುದು ಅಸಮಾ ಧಾನಕ್ಕೆ ಕಾರಣವಾಗಿದೆ.

ಮೇಕೆಗಳಿಗೆ ಆಧುನಿಕ ರೀತಿಯ ಪಂಜರ, ಹಾಗೂ ಹುಲ್ಲುಗಾವಲು, ಈಗಾಗಲೇ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಗುರುತಿಸಲಾಗಿರುವ ಪ್ರದೇಶದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ, ಸ್ಥಳೀಯ ಜನರು ಆ ತಂತಿ ಬೇಲಿಯನ್ನು ತುಂಡು ಮಾಡಿ ತಮ್ಮ ಹಸುಗಳನ್ನು ಮೇಯಲು ಬಿಡುತ್ತಿದ್ದಾರೆ. ಇಲಾಖೆಯ ಯೋಜನೆಗಳು ಸಮರ್ಪಕವಾದ ರೀತಿಯಲ್ಲಿ ನಡೆಯದೆ ಇದೀಗ ಮೂಲೆ ಗುಂಪಾಗಿದೆ.

ಈ ಕೇಂದ್ರದ ಜವಾಬ್ದಾರಿಯನ್ನು ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರವು ವಹಿಸಿಕೊಂಡಿದೆ. ಆದರೆ ಇದುವರೆಗೂ ರಾಜ್ಯ ಮಟ್ಟದಲ್ಲಿ ಪ್ರಗತಿ ಪೂರಕವಾದ ಯಾವುದೆ ರೀತಿಯ ಪ್ರಕ್ರಿಯೆಗಳು ನಡೆಯದೆ ರೈತರಿಗೆ ಕೈಗೆಟುಕದ ಮೇಕೆ ಹಾಲು ಘಟಕವಾಗಿದೆ.

ಇದೀಗ ಪಶು ಸಂಗೋಪನೆ ಇಲಾಖೆ ವತಿಯಿಂದ ಯಾವುದೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕುರಿ ನಿಗಮದ ಮಂಡಳಿಗೆ ವಹಿಸುವ ಪ್ರಕ್ರಿಯೆಗಳು ರಾಜ್ಯಮಟ್ಟದಲ್ಲಿ ನಡೆಯುತ್ತಿದೆ. ಇದರ ಜೊತೆಯಲ್ಲಿ ಯೋಜನೆಗೆ ಸಂಬAಧಿಸಿದAತೆ ಎಲ್ಲಾ ಪ್ರಕ್ರಿಯೆಗಳನ್ನು ಆರಂಭಿಸುವAತೆ ಈ ವ್ಯಾಪ್ತಿಯ ರೈತರ ಒತ್ತಾಯವಾಗಿದೆ.

ಮುಂದಿನ ದಿನಗಳಲ್ಲಿ ಕುರಿ ಮಂಡಳಿಯ ನಿಗಮ ಸಂಪೂರ್ಣವಾಗಿ ವಹಿಸಿಕೊಂಡು ಯೋಜನೆ ಕಾರ್ಯಗತ ಮಾಡುವವರೇ ಎಂದು ನೋಡಬೇಕಾಗಿದೆ. -ಕೆ.ಕೆ. ನಾಗರಾಜಶೆಟ್ಟಿ