ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ: ಸಿಎಂ ಸಿದ್ದರಾಮಯ್ಯ

ಸಾಂಗ್ಲಿ, ಜೂ. ೨೫: ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟçದ ಸಾಂಗ್ಲಿ ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್‌ನಿAದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರವನ್ನು ಸೋಲಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದರು. ೨೦೧೪ ರಲ್ಲಿ ಮೋದಿ ಜನರ ಬ್ಯಾಂಕ್ ಖಾತೆಗಳಿಗೆ ರೂ. ೧೫ ಲಕ್ಷ ಜಮೆ, ಎರಡು ಕೋಟಿ ಉದ್ಯೋಗ ಸೃಷ್ಟಿ ಮತ್ತು ಅಚ್ಚೇ ದಿನ್ ತರುವ ಬಗ್ಗೆ ಮಾತನಾಡಿದ್ದರು. ಇದು ಆಗಿದೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ರಾಜ್ಯದ ಮೂಲೆ ಮೂಲೆಗಳಿಗೆ ಭೇಟಿ ನೀಡಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ವಿವರಿಸಿದ್ದೆವು. ವಿವಿಧ ಕೆಲಸಗಳಿಗಾಗಿ ೪೦ ಪರ್ಸೆಂಟ್ ಕಮಿಷನ್ ಬಗ್ಗೆ ಜನರಿಗೆ ಮನವರಿಕೆ ಮಾಡಲಾಯಿತು. ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಗೆದ್ದಿದ್ದು ಜನಾದೇಶದಿಂದಲ್ಲ, ಶಾಸಕರಿಗೆ ಹಣದ ಆಮಿಷ ಒಡ್ಡುವ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದಿತ್ತು ಎಂದು ತಿಳಿಸಿದ ಮುಖ್ಯಮಂತ್ರಿ, ಮಹಾರಾಷ್ಟçದಲ್ಲಿ ಏಕನಾಥ್ ಶಿಂಧೆ-ದೇವೇAದ್ರ ಫಡ್ನವೀಸ್ ಸರ್ಕಾರ ಕೂಡ ಭ್ರಷ್ಟವಾಗಿದೆ ಮತ್ತು ಅವರನ್ನು ಸೋಲಿಸುವುದು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಕೆಲಸವಾಗಿದೆ ಎಂದು ಹೇಳಿದರು.

ಜಗಳದಿಂದ ಬೇಸತ್ತು ಹೊಂಡಕ್ಕೆ ಹಾರಿದ್ದ ಪತ್ನಿ: ರಕ್ಷಿಸಲು ಹೋದ ಪತಿಯೂ ಸಾವು

ಉಡುಪಿ, ಜೂ. ೨೫: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಿಂದ ಬೇಸತ್ತು ಮಹಿಳೆಯೊಬ್ಬರು ಹೊಂಡಕ್ಕೆ ಹಾರಿದ್ದು ಆಕೆಯನ್ನು ರಕ್ಷಿಸಲು ಹೋಗಿ ಪತಿಯೂ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನ ತೋಟದಲ್ಲಿ ನಡೆದಿದೆ. ಮೃತರನ್ನು ಯಶೋಧ ಹಾಗೂ ಇಮ್ಯಾನುವಲ್ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಇದರಿಂದ ಮನನೊಂದ ಯಶೋಧ ತೋಟದಲ್ಲಿದ್ದ ಹೊಂಡಕ್ಕೆ ಹಾರಿದ್ದರು. ಈ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿದ್ದ ಇಮ್ಯಾನುವಲ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೋಷಕರ ಸಾವಿನಿಂದಾಗಿ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಮೃತ ದಂಪತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾಗಿದ್ದು, ತೋಟದ ಕೆಲಸಕ್ಕಾಗಿ ಕಾರ್ಕಳದ ನಲ್ಲೂರಿಗೆ ಬಂದು ವಾಸವಾಗಿದ್ದರು. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಧಾನಿ ಮೋದಿಗೆ ‘ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಪ್ರದಾನ

ಕೈರೋ, ಜೂ. ೨೫: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಈಜಿಪ್ಟ್ನ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ತಮ್ಮ ದ್ವಿಪಕ್ಷೀಯ ಸಭೆಯ ಮೊದಲು ಮೋದಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಉಭಯ ನಾಯಕರು ತಮ್ಮ ಸಭೆಯಲ್ಲಿ ಮಹತ್ವದ ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಿದರು. ೧೯೯೭ ರ ನಂತರ ಈಜಿಪ್ಟ್ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದೆ. ಶನಿವಾರ ಕೈರೋದಲ್ಲಿರುವ ದೇಶದ ೧೧ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಮೋದಿ ಭೇಟಿ ನೀಡಿದ್ದರು. ಇದನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ನೆರವಿನಿಂದ ಪುನರ್ ನಿರ್ಮಾಣ ಮಾಡಲಾಗಿದೆ. ಮೂರು ತಿಂಗಳ ಹಿಂದಷ್ಟೇ ಪೂರ್ಣಗೊಂಡ ಮಸೀದಿಯನ್ನು ಮೋದಿಗೆ ತೋರಿಸಲಾಯಿತು. ಅಲ್ ಹಕೀಮ್ ಕೈರೋದಲ್ಲಿನ ನಾಲ್ಕನೇ ಅತ್ಯಂತ ಹಳೆಯ ಮಸೀದಿ ಮತ್ತು ಈಜಿಪ್ಟ್ ರಾಜಧಾನಿಯಲ್ಲಿ ನಿರ್ಮಿಸಲಾದ ಎರಡನೇ ಫಾತಿಮಿಡ್ ಮಸೀದಿಯಾಗಿದೆ. ಇದು ೧೩,೫೬೦ ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧದ ಸ್ಮಶಾನಕ್ಕೂ ಭೇಟಿ ನೀಡಿದ ಪ್ರಧಾನ ಮಂತ್ರಿ, ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ವೀರಾವೇಶದಿಂದ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಈ ಸ್ಮಾರಕವನ್ನು ಮೊದಲ ವಿಶ್ವ ಸಮರದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ಮಡಿದ ಸುಮಾರು ೪,೦೦೦ ಭಾರತೀಯ ಸೈನಿಕರ ಸ್ಮರಣಾರ್ಥ ನಿರ್ಮಿಸಲಾಗಿದೆ.

ಸಿಗರೇಟ್ ಹೊಗೆ ಉಸಿರಾಡುವಂತೆ ಹೇಸರಗತ್ತೆಗೆ ಒತ್ತಾಯ; ವ್ಯಕ್ತಿ ಬಂಧನ

ಡೆಹ್ರಾಡೂನ್, ಜೂ. ೨೫: ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಹೇಸರಗತ್ತೆಗೆ ಸಿಗರೇಟಿನಿಂದ ಬರುವ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬAಧಿಸಿದAತೆ, ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ. ಓರ್ವ ಹೇಸರಗತ್ತೆಯ ಬಾಯಿ ಮತ್ತು ಒಂದು ಮೂಗನ್ನು ಬಿಗಿಯಾಗಿ ಹಿಡಿದಿರುವಾಗ, ಮತ್ತೋರ್ವ ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ರುದ್ರಪ್ರಯಾಗದ ಪೊಲೀಸರು ವೀಡಿಯೋವನ್ನು ಪರಿಶೀಲಿಸಿದ್ದು, ಹೇಸರಗತ್ತೆ ಮಾಲೀಕ ರಾಕೇಶ್ ಸಿಂಗ್ ರಾವತ್‌ನನ್ನು ಬಂಧಿಸಲಾಗಿದೆ.

ಹಿಮಾಚಲ ಪ್ರದೇಶದ: ಮಂಡಿಯಲ್ಲಿ ಪ್ರವಾಹ: ಕೊಚ್ಚಿ ಹೋದ ವಾಹನಗಳು!

ಮಂಡಿ, ಜೂ. ೨೫: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಹಲವೆಡೆ ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ. ಜಿಲ್ಲೆಯ ಜಾಂಜೆಹ್ಲಿ ಎಂಬಲ್ಲಿನ ಹಳ್ಳದಲ್ಲಿ ಹಠಾತ್ ಪ್ರವಾಹದಿಂದಾಗಿ ಹಲವಾರು ವಾಹನಗಳು ಕೊಚ್ಚಿಹೋಗಿವೆ. ನದಿಯ ಕೆಳಭಾಗದಲ್ಲಿರುವ ಅನೇಕ ಮನೆಗಳು ಅಪಾಯವನ್ನು ಎದುರಿಸುತ್ತಿವೆ, ಜಿಲ್ಲೆಯಾದ್ಯಂತ ಅನೇಕ ಸ್ಥಳಗಳಲ್ಲಿ ಭೂಕುಸಿತದ ಘಟನೆಗಳು ವರದಿಯಾಗಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮಂಡಿ ಮೂಲಕ ಹರಿಯುವ ಬಿಯಾಸ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಂತ್ಲಾದಲ್ಲಿ ಮಳೆಯಿಂದಾಗಿ ಭಾರೀ ಹಾನಿಯಾಗಿದೆ. ಮಂಠಾಳ ಪಂಚಾಯಿತಿ ಸಮುದಾಯ ಭವನ ಹಾನಿಯಾಗಿದೆ. ಸದರ್ ಶಾಸಕ ಅನಿಲ್ ಶರ್ಮಾ ಘಟನಾ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಿ ಪರಿಹಾರ ಹಾಗೂ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ವ್ಯಕ್ತಿ

ಕೋಲಾರ, ಜೂ. ೨೫: ಪತ್ನಿಯೊಂದಿಗೆ ಅಕ್ರಮ ಸಂಬAಧ ಹೊಂದಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಭೀಭತ್ಸ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಚಿಂತಾಮಣಿಯ ಗಾಂಧಿನಗರದ ವಿಜಯ್ ಎಂಬಾತ ಚೇಳೂರು ತಾಲೂಕಿನ ಮಂಡಪಲ್ಲಿಯ ಮಾರೇಶ್ ಎಂಬವರ ಕತ್ತನ್ನು ಕೊಯ್ದು ರಕ್ತ ಕುಡಿದಿದ್ದಾನೆ. ಕೃತ್ಯವನ್ನು ವಿಜಯ್ ವೀಡಿಯೋ ಮಾಡಿಸಿದ್ದಾನೆ. ವಿಜಯ್ ಮತ್ತು ಮಾರೇಶ್ ಸ್ನೇಹಿತರಾಗಿದ್ದು ಬಟ್ಟೆ ವ್ಯಾಪಾರ ಮಾಡುತಿದ್ದರು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬAಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ವಿಜಯ್ ಮಾರೇಶ್‌ನನ್ನು ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಈ ಕೃತ್ಯವೆಸಗಿದ್ದಾನೆ.