ಮಡಿಕೇರಿ, ಜೂ. ೨೪: ನಗರದ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಸ್ವಾಮಿ ವಿವೇಕಾನಂದ ವೃತ್ತ ಎಂಬ ನಾಮಕರಣಕ್ಕೆ ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ವಿರೋಧ ವ್ಯಕ್ತಪಡಿಸಿದ್ದು, ಬದಲಾಗಿ ‘ಪಂದ್ಯAಡ ಬೆಳ್ಯಪ್ಪ’ ಅವರ ಹೆಸರನ್ನು ಇಡ ಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತದ ಹೆಸರಿಗೆ ಸಂಬAಧಿಸಿ ದಂತೆ ನಗರಸಭೆ ಜೂನ್ ಅಂತ್ಯದ ಒಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಹಿನ್ನೆಲೆ ಸಾರ್ವ ಜನಿಕರ ಪರವಾಗಿ ವೃತ್ತಕ್ಕೆ ಪಂದ್ಯAಡ ಬೆಳ್ಯಪ್ಪ ಅವರ ಹೆಸರನ್ನು ಇಡುವಂತೆ ಸೂಚಿಸಿ ಆಕ್ಷೇಪಣೆ ಸಲ್ಲಿಸಲಾಗಿದೆ. ಇದು ಯಾವುದೇ ಕಾರಣಕ್ಕೂ ಸ್ವಾಮಿ ವಿವೇಕಾನಂದರನ್ನು ಇಡೀ ಜಗತ್ತೆ ಮಾನ್ಯ ಮಾಡಿರುವ ತತ್ತ÷್ವ ಸಿದ್ಧಾಂತಗಳ ವಿರುದ್ಧವಾಗಿ ಅಲ್ಲ ವೆಂದು ಸ್ಪಷ್ಟಪಡಿಸಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ ಮಹನೀಯರನ್ನು ಸ್ಮರಿಸುವುದು, ಅವರ ಚಿಂತನೆಗಳನ್ನು ಜನರಿಗೆ ಮುಟ್ಟಿಸುವುದು ಮತ್ತು ಆ ಮೂಲಕ ಯುವ ಸಮೂಹಕ್ಕೆ ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾ ಗಿದೆ. ಈ ಹಿನ್ನೆಲೆ ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರರಾದ ಪಂದ್ಯAಡ ಬೆಳ್ಯಪ್ಪ ಅವರ ಹೆಸರನ್ನು ನೂತನ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಇರಿಸಬೇಕು ಮತ್ತು ಅಲ್ಲಿ ಸ್ಥಾಪಿಸುವ ಅವರ ಪುತ್ತಳಿಯ ಬಳಿ ಅವರ ಹೋರಾಟದ ಬದುಕು, ಸಾಧನೆಯ ಮಾಹಿತಿ ದೊರಕುವಂತೆ ಮಾಡ ಬೇಕೆಂದು ಒತ್ತಾಯಿಸಿದರು.
ಸ್ವಾತಂತ್ರ‍್ಯ ಚಳುವಳಿ ಸಂದರ್ಭ ರಾಷ್ಟç ನಾಯಕರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಪಂದ್ಯAಡ ಬೆಳ್ಯಪ್ಪ ಅವರು, ಹಲವಾರು ಬಾರಿ ಕಾರಾಗೃಹ ವಾಸವನ್ನು ಅನುಭವಿಸಿ ದವರು, ೧೯೩೪ರಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿಗೆ ಆಗಮಿಸಲು ಕಾರಣರಾದ ಮಹನೀ ಯರು. ಜಿಲ್ಲೆಯಲ್ಲಿ ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಶ್ರಮಿಸಿದ ಪಂದ್ಯAಡ ಬೆಳ್ಯಪ್ಪ ಅವರು, ಆ ದಿನಗಳಲ್ಲೆ ಶಿಕ್ಷಣದ ಮಹತ್ವವನ್ನು ಅರಿತು ಮಡಿಕೇರಿಯಲ್ಲಿ ಈಗಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸ್ಥಾಪನೆಗೆ ಕಾರಣರಾದ ಮಹಾನ್ ವ್ಯಕ್ತಿ. ಅವರ ಹೆಸರಿನ ವೃತ್ತ ಸ್ಥಾಪನೆಯಾಗಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆ ಎಂದರು.
ಕಾವೇರಿ ಕಲಾಕ್ಷೇತ್ರವನ್ನು ‘ಪಂದ್ಯAಡ ಬೆಳ್ಯಪ್ಪ ಸ್ವಾತಂತ್ರö್ಯ ಹೋರಾಟಗಾರರ ಭವನ’ವನ್ನಾಗಿ ರೂಪಿಸಿ, ಅಲ್ಲಿ, ಜಿಲ್ಲೆಯ ಎಲ್ಲಾ ಸ್ವಾತಂತ್ರö್ಯ ಹೋರಾಟಗಾರರ ಮಾಹಿತಿ ಲಭಿಸುವಂತೆ ಮಾಡಬೇ ಕೆಂದು ಮನವಿ ಮಾಡಿದರು.
ರಂಗ ಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ, ನೂತನ ಖಾಸಗಿ ಬಸ್ ನಿಲ್ದಾಣದ ವೃತ್ತಕ್ಕೆ ಪಂದ್ಯAಡ ಬೆಳ್ಯಪ್ಪ ಅವರ ಹೆಸರನ್ನಿಡುವ ಮೂಲಕ, ಅವರ ಮಾಹಿತಿ ಅದೇ ಹಾದಿಯಲ್ಲಿ ಸಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕರುಗಳಾದ ಅಯ್ಯಲಪಂಡ ಪುಷ್ಪಾ ಪೂಣಚ್ಚ, ಸದಾ ಮುದ್ದಪ್ಪ ಉಪಸ್ಥಿತರಿದ್ದರು.