ಸುಂಟಿಕೊಪ್ಪ, ಜೂ. ೨೫: ೭ನೇ ಹೊಸಕೋಟೆ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ತಾ. ೨೭ ರಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

ತಾ. ೨೭ ರಂದು ಬೆಳಿಗ್ಗೆ ೮ ಗಂಟೆಗೆ ಸ್ವಸ್ತಿ ಶ್ರೀಪುಣ್ಯಾಹವಾಚನ, ೪೮ ತೆಂಗಿನಕಾಯಿ ಗಣಹೋಮ, ೨೮ ಕಲಶ ಪೂಜೆ, ಶ್ರೀ ಗಣಪತಿಗೆ ಕಲಷಾಭಿಷೇಕ ದುರ್ಗಾಹೋಮ, ಶ್ರೀ ಕೃಷ್ಣ ಮಂತ್ರ ಹೋಮ, ಮಹಾಪೂಜೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ೬.೩೦ ರಿಂದ ದುರ್ಗಾಪೂಜೆ, ರಂಗಪೂಜೆ, ಮಹಾಪೂಜೆಯೊಂದಿಗೆ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಲಿದೆ.