ಸೋಮವಾರಪೇಟೆ, ಜೂ. ೨೪: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ನೂತನ ಸಾಲಿನ ಅಧ್ಯಕ್ಷರಾಗಿ ಚಂದ್ರಕಲಾ ಗಿರೀಶ್ ಆಯ್ಕೆಯಾಗಿದ್ದಾರೆ.

ಪಟ್ಟಣದ ಕರ್ಕಳ್ಳಿಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆ ಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಚಂದ್ರಕಲಾ ಗಿರೀಶ್, ಉಪಾಧ್ಯಕ್ಷರಾಗಿ ಗೀತಾ ರಾಜು, ಕಾರ್ಯದರ್ಶಿಯಾಗಿ ಮಾಯಾ ಗಿರೀಶ್, ಸಹ ಕಾರ್ಯದರ್ಶಿಯಾಗಿ ದಿವ್ಯ ದಯಾಕರ್, ಖಜಾಂಚಿಯಾಗಿ ಸರಿತಾ ಮಲ್ಲಿಕಾರ್ಜುನ್, ನಿರ್ದೇಶಕರುಗಳಾಗಿ ಆಶಾ ಹೂವಯ್ಯ, ನಂದಿನಿ ಮಾಂತೇಶ್, ಸವಿತಾ ನೀಲಕಂಠ, ಜಗದಾಂಬ ಗುರುಪ್ರಸಾದ್, ಸವಿತಾ ಶಿವಕುಮಾರ್, ರಜಿನಿ ಯತೀಶ್, ಮಂಜುಳ ಬಸವರಾಜು, ಅನು ರಾಜು ಅವರುಗಳು ಅವಿರೋಧವಾಗಿ ಆಯ್ಕೆಯಾದರು.