ಸುಂಟಿಕೊಪ್ಪ, ಜೂ. ೨೪: ಹಾರಂಗಿ ಮೀನುಗಾರಿಕೆ ಇಲಾಖೆಯಿಂದ ನೀಡಲಾದ ೧ ಕೋಟಿ ಮೀನು ಮರಿಗಳನ್ನು ನಾಕೂರು-ಶಿರಂಗಾಲ ಗ್ರಾಮದ ಕಾವೇರಿ ಸಹಕಾರ ಸಂಘದವರು ನಾಕೂರು-ಶಿರಂಗಾಲ ಹಾರಂಗಿ ಹಿನ್ನೀರಿನ ಪ್ರದೇಶದ ನೀಲಿ ಕ್ರಾಂತಿ ಕೆರೆಗೆ ಬಿಟ್ಟರು. ಮೀನು ಸಂತಾನಾಭಿವೃದ್ಧಿಪಡಿಸುವ ಸಲುವಾಗಿ ಇಲಾಖೆ ವತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾವೇರಿ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ತಿಳಿಸಿದ್ದಾರೆ. ಈ ಸಂದರ್ಭ ಸಂಘದ ಕಾರ್ಯದರ್ಶಿ ಧರ್ಮೇಂದ್ರ, ಸದಸ್ಯ ವಿಜಯ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶಂಕರ ನಾರಾಯಣ ಇತರರು ಹಾಜರಿದ್ದರು.