ಮಡಿಕೇರಿ, ಜೂ. ೨೪: ಕೊಡಗು ಜಿಲ್ಲೆಯಲ್ಲಿ ಸರ್ಕಾರದ ‘ಶಕ್ತಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಎರಡು ವಾರಗಳಲ್ಲಿ ಸರ್ಕಾರದ ಗ್ಯಾರಂಟಿ ಖಚಿತ ಎಂಬ ಶಕ್ತಿ ಯೋಜನೆಯಡಿ ಕೊಡಗಿನ ವಿವಿಧೆಡೆಗಳಿಂದ ೨ ಲಕ್ಷದ ೧ ಸಾವಿರ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಕೈಗೊಂಡಿದ್ದಾರೆ. ಯೋಜನೆ ಜಾರಿಯಾದ ಬಳಿಕ ನಿತ್ಯವೂ ಸರಾಸರಿ ೫ ಸಾವಿರದಷ್ಟು ಮಹಿಳೆಯರು ಪ್ರಯಾಣ ಕೈಗೊಳ್ಳುತ್ತಿದ್ದಾರೆ. ೧೫ ದಿನಗಳಲ್ಲಿ ಮಹಿಳೆಯರ ಪ್ರಯಾಣದ ಮೂಲಕ ಟಿಕೆಟ್ ಮೌಲ್ಯ ೬೧ ಲಕ್ಷದ ೬೧ ಸಾವಿರದಷ್ಟು ವೆಚ್ಚ ಸರ್ಕಾರಕ್ಕಾಗಿದೆ.
ಗುಡ್ಡಗಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಸರ್ಕಾರಿ ಬಸ್ಗಳಿಗಿಂತ ಖಾಸಗಿ ಬಸ್ ಸೇವೆಯೇ ಹೆಚ್ಚಾಗಿದೆ. ಜೊತೆಗೆ ಸ್ಥಳೀಯರು ಹೆಚ್ಚಾಗಿ ಕಾರ್, ಜೀಪ್, ವ್ಯಾನ್ನಂತ ಖಾಸಗಿ ವಾಹನಗಳಲ್ಲಿ ಹೆಚ್ಚು ಪ್ರಯಾಣ ಮಾಡುವುದು ಕಂಡುಬAದಿದೆ. ಸರ್ಕಾರಿ ಬಸ್ ಪ್ರಯಾಣವನ್ನೇ ನೆಚ್ಚಿಕೊಂಡು ಕೊಡಗಿನ ಹೆಚ್ಚಿನ ಪ್ರಯಾಣಿಕರಿಲ್ಲ. ಹೀಗಾಗಿ ಶಕ್ತಿ ಯೋಜನೆಗೆ ಬೇರೆ ಜಿಲ್ಲೆಗಳಲ್ಲಿ ಕಂಡುಬAದಷ್ಟು ಭಾರೀ ಸ್ಪಂದನ ಈ ಜಿಲ್ಲೆಯಲ್ಲಿ ದೊರಕದೆ ಸಾಮಾನ್ಯ ಎಂಬAತೆ ಸ್ಪಂದನ ದೊರಕಿದೆ.
ಮಡಿಕೇರಿ-ಕುಶಾಲನಗರ ನಡುವಿನ ಸರ್ಕಾರಿ ಬಸ್ಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಕಂಡುಬAದಿದ್ದಾರೆ. ದಿನನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಡಿಕೇರಿ-ಕುಶಾಲನಗರ ನಡುವಿನ ೩೦ ಕಿಮೀ. ಅಂತರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಚಿತವಾಗಿ ಪ್ರಯಾಣಿಸು ತ್ತಿದ್ದಾರೆ. ಕೊಡಗಿನ ಇತರ ಊರುಗಳಿಗೆ ಸರ್ಕಾರಿ ಬಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದೂ ಕೂಡ ಶಕ್ತಿ ಯೋಜನೆ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಂಖ್ಯೆಯಲ್ಲಿ ಕುಂಠಿತವಾಗಲು ಕಾರಣವಾಗಿದೆ.
ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿನಿತ್ಯ ಕೊಡಗು ಜಿಲ್ಲೆಯಲ್ಲಿ ೨೦ ಸಾವಿರದಷ್ಟು ಪ್ರಯಾಣಿಕರು ಪ್ರಯಾಣ ಕೈಗೊಳ್ಳುತ್ತಿದ್ದರು. ಆದರೆ ತಾ.೧೧ರ ನಂತರ ಯೋಜನೆ ಜಾರಿಯಾದ ಬಳಿಕ ಈ ಸಂಖ್ಯೆ ದಿನಕ್ಕೆ ಸರಾಸರಿ ೨೫ ಸಾವಿರದಿಂದ ೩೦ ಸಾವಿರಕ್ಕೇರಿದೆ. ಈ ಪೈಕಿ ಶೇ. ೬೦ರಷ್ಟು ಮಹಿಳಾ ಪ್ರಯಾಣಿಕರಿದ್ದಾರೆ. ಯೋಜನೆ ಜಾರಿಯಾದ ಬಳಿಕ ಕೊಡಗು ಜಿಲ್ಲೆಯಲ್ಲಿ ತಾ. ೨೦ ರಂದು ಮಂಗಳವಾರ ಅತ್ಯಧಿಕ ಸಂಖ್ಯೆಯಲ್ಲಿ ೧೬,೨೭೪ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ನಡೆಸಿದ್ದು ೫.೯೨ ಲಕ್ಷ ರೂ. ಟಿಕೆಟ್ ಮೌಲ್ಯ ಸರ್ಕಾರದಿಂದ ಭರಿಸಲ್ಪಟ್ಟಿದೆ. ತಾ.೧೯ ರಂದು ೧೫,೧೯೩ (೬.೪೩ ಲಕ್ಷ ರೂ.), ತಾ. ೨೨ ರಂದು ೧೪,೭೦೩ (೪.೮೦ ಲಕ್ಷ ರೂ.), ತಾ.೨೩ ರಂದು ಶುಕ್ರವಾರ ೧೪,೫೫೩ (೪.೯೫ ಲಕ್ಷ ರೂ.) ಮಹಿಳೆಯರು ಕೆಂಪು ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. -ಅನಿಲ್ ಎಚ್.ಟಿ.