ಮಡಿಕೇರಿ, ಜೂ. ೨೨: ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಚೆಂಬು, ಪೆರಾಜೆ ಹಾಗೂ ಸಂಪಾಜೆ ಗ್ರಾಮಗಳಿಗೆ ಸಂಬAಧಿಸಿದ ಪೌತಿ/ವಾರಸುದಾರಿಕೆ ಖಾತೆ ಆಂದೋಲನ ತಹಶೀಲ್ದಾರ್ ಅವರ ಅಧ್ಯಕ್ಷತೆ ಯಲ್ಲಿ ತಾ.೨೭ ರಂದು ಬೆಳಗ್ಗೆ ೧೧ ಗಂಟೆಗೆ ಸಂಪಾಜೆ ನಾಡ ಕಚೇರಿಯಲ್ಲಿ ನಡೆಯಲಿದೆ.

ಪೌತಿ/ವಾರಿಸುದಾರಿಕೆ ಖಾತೆ ಸಂಬAಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್‌ಡಿ ಸಂಖ್ಯೆಯ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಜೊತೆಗೆ ಕಲಂ ೧೦ರಲ್ಲಿ ದಾಖಲಾಗಿರುವ ಮ್ಯೂಟೇಷನ್ ಪ್ರತಿ/ಜಮಾಬಂಧಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಹಾಜರುಪಡಿಸಲು ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ. ಚೆಂಬು ಪೆರಾಜೆ ಹಾಗೂ ಸಂಪಾಜೆ ವ್ಯಾಪ್ತಿಯ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಂದಾಯ ಪರಿವೀಕ್ಷಕರಾದ ವೆಂಕಟೇಶ್ ಕೋರಿದ್ದಾರೆ.