ಸೋಮವಾರಪೇಟೆ, ಜೂ. ೨೨: ಇಲ್ಲಿಗೆ ಸಮೀಪದ ಕೆಂಚಮ್ಮನ ಬಾಣೆಯಲ್ಲಿನ ಶ್ರೀ ಬಲಮುರಿ ಗಣಪತಿ ದೇವಾಲಯದ ೨೧ನೇ ವಾರ್ಷಿಕ ಪೂಜೋತ್ಸವವು ವಿವಿಧ ಹೋಮ, ಹವನಾದಿಗಳ ಮೂಲಕ ನಡೆಯಿತು.

ಪೂಜೋತ್ಸವದ ಅಂಗವಾಗಿ ದೇವಾಲಯದಲ್ಲಿ ಕಲಶಾರಾಧನೆ, ಪಂಚಾಮೃತಾಭಿಷೇಕ, ಗಣಹೋಮಗಳು ನಡೆದವು. ಉತ್ಸವದ ಪ್ರಯುಕ್ತ ಗ್ರಾಮದ ಪ್ರತಿ ಬೀದಿಯಲ್ಲಿ ಚಾಮರಾಜನಗರದ ವೀರಭದ್ರೇಶ್ವರ ಕಲಾ ತಂಡದಿAದ ವೀರಗಾಸೆ ಕಾಯಕ್ರಮ ನಡೆಯಿತು. ಈ ಸಂದರ್ಭ ಶಾಸಕ ಡಾ. ಮಂಥರ್‌ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ದಾನಿಗಳಾದ ಗುಡುಗೂರಿನ ವಿಜಯಕುಟಿರದ ಡಾ. ವೇಣುಗೋಪಾಲ್, ಮಧುವನ ಎಸ್ಟೇಟ್‌ನ ಮಧುಕರ್ ಭಟ್, ಪಾಲಿಗದ್ದೆ ಎಸ್ಟೇಟ್‌ನ ಹೆಚ್. ಪ್ರಸಾದ್, ಬೇಳೂರು ಎಸ್ಟೇಟ್‌ನ ರಾಣಿ ಪ್ರತಾಪ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು.

ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ಸೋಮಶೇಖರ್, ಪದಾಧಿಕಾರಿಗಳಾದ ಕೆ.ಎಸ್. ಪ್ರತಾಪ್, ಪಿ.ಈ. ಸುರೇಶ್, ಕೆ.ಬಿ. ರಮೇಶ್, ಬಿ.ಆರ್. ರವಿ., ಎಂ.ಆರ್. ವಿಶ್ವನಾಥ್, ಕೆ.ಆರ್ ಶಿವಕುಮಾರ್ ಹಾಗೂ ಸದಸ್ಯರುಗಳು ಇದ್ದರು.