ವೀರಾಜಪೇಟೆ, ಜೂ. ೨೩: ಕರ್ನಾಟಕದ ಐದು ಕೋಟಿ ಜನರು ಮಾತನಾಡುವ ಕನ್ನಡ ಭಾಷೆ ಸೇರಿದಂತೆ ಉಳಿದ ಭಾಷೆಗಳು ಮುಂದಿನ ೬೦ ವರ್ಷದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವಾಗ ನಮ್ಮ ಕೊಡವ ಭಾಷೆಯ ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ಎಂದು ನಾವು ಆತ್ಮವಲೋಕನ ಮಾಡುವ ಪರಿಸ್ಥಿತಿ ಬರುತ್ತಿದೆ ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆಯ ಪಂಜರಪೇಟೆ ಕೊಡವಕೇರಿ ವತಿಯಿಂದ ಅಯೋಜಿಸಿದ್ದ ಸನ್ಮಾನ ಸಮಾರಂಭ ದಲ್ಲಿ ಮಾತನಾಡಿ, ಕೊಡವ ಸಮಾಜಗಳು ಕೇವಲ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭಗಳಿಗೆ ಸೀಮಿತವಾಗಿದೆ. ಬಾಳುಗೋಡುವಿನಲ್ಲಿರುವ ಫೆಡರೇಷನ್ ಆಫ್ ಕೊಡವ ಸಮಾಜ ದಲ್ಲಿ ಸಾಕಷ್ಟು ಸ್ಥಳಾವಕಾಶಗಳು ಇದ್ದು ಒಂದೇ ಸೂರಿನಡಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕ್ರೀಡೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆಯುವಂತಾಗ ಬೇಕು ಎಂದರು. ದ್ವೇಶದ ರಾಜಕಾರಣವನ್ನು ಬದಿಗೊತ್ತಿ ಎಲ್ಲರ ಜೊತೆ ಕೈಗೂಡಿಸಿ ಬದಲಾವಣೆ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಸಮಾಜದಲ್ಲಿ ನಮ್ಮ ಯುವಕರಿಗೆ ಉತ್ತಮ ಸ್ಥಾನಮಾನ ಸಿಗುವಂತಾಗ ಬೇಕು. ತಲಕಾವೇರಿ ತೀರ್ಥೋದ್ಭವ ವಿಚಾರದಲ್ಲಿ ಎಲ್ಲಾ ಸಂಘ-ಸAಸ್ಥೆಗಳ ಮುಖ್ಯಸ್ಥರು, ಹಿರಿಯರು ಸೇರಿ ಚರ್ಚೆ ನಡೆಸಿ ಒಂದು ತಿರ್ಮಾನ ತೆಗೆದುಕೊಳ್ಳುವುದು ಉತ್ತಮ.

ರಾಜಕೀಯ ಎಲ್ಲಾರನ್ನು ಬೆಸೆ ಯುವುದಿಲ್ಲ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಜನಾಂಗವನ್ನೆ ಒಡೆದು ಹಾಕುತ್ತದೆ. ನಮ್ಮ ವಿಶಿಷ್ಠ ಪರಂಪರೆಯ ಆಚಾರ ವಿಚಾರ ಸಂಸ್ಕೃತಿ, ಪದ್ದತ್ತಿ ಪರಂಪರೆಯನ್ನು ಯುವ ಜನತೆಗೆ ಪರಿಚಯಿಸಿ ಅದನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಪAಜರಪೇಟೆ ಕೊಡವ ಕೇರಿಯ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ನಾವು ಪರಕೀಯರಾಗಿದ್ದೇವೆ. ಎಲ್ಲಾ ಸ್ಥಾನಮಾನದಿಂದ ವಂಚಿತರಾಗಿದ್ದೇವೆ ಎಂದರು. ಕೊಡವ ಜನಾಂಗಕ್ಕೆ ಮಠಮಾನ್ಯ ಗುರುಗಳಿಲ್ಲ. ನಾವು ನಮ್ಮ ಸ್ವ ಸಾಮರ್ಥ್ಯದಿಂದ ಎಲ್ಲಾ ಕೇತ್ರದಲ್ಲಿ ಮುಂದಿದ್ದೇವೆ.

ಸಮಾರAಭದಲ್ಲಿ ಕಾರ್ಯದರ್ಶಿ ಚೇಂದAಡ ವಸಂತ್‌ಕುಮಾರ್, ಉಪಾಧ್ಯಕ್ಷ ಅಲ್ಲಪಂಡ ಚಿಣ್ಣಪ್ಪ, ಆಟೋಟ ಕಾರ್ಯದರ್ಶಿ ಕಾಂಡAಡ ರಶ್ಮಿ ಲಾಲಪ್ಪ, ಸಮಿತಿ ಸದಸ್ಯ ಕಲಿಯಂಡ ಜಿಮ್ಮಿ ಕಾಳಪ್ಪ, ಮಾದೆಯಂಡ ಸಂಪಿ ಪೂಣಚ್ಚ, ವಾಂಚಿರ ಅಶಿತ್ ಉತ್ತಯ್ಯ, ಕರೋಟಿರ ವಿನ್ನು ಕಾವೇರಪ್ಪ, ಚೇಂದAಡ ಗೌರಿ ವಸಂತ, ವಲ್ಲಂಡ ಅಯ್ಯಪ್ಪ, ಸೋಮೆಯಂಡ ಪ್ರಸಾದ್, ಕುಟ್ಟಂಡ ಕಾರ್ಯಪ್ಪ, ಮುದ್ದಿಯಡ ನಿದಿಶ್ ನಾಣಯ್ಯ, ಪೆಬ್ಬಾಟಂಡ ಹೇಮ ಚಂಗಪ್ಪ, ಮಳವಂಡ ಮೈನಾ ರಮೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪಂಜರುಪೇಟೆ ಕೊಡವ ಕೇರಿ ವತಿಯಿಂದ ಕೊಡವರ ಧಾರ್ಮಿಕ ಸಂಕೇತವಾದ ಗೆಜ್ಜೆ ತಂಡ್ ನೀಡಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು.