ಸುಂಟಿಕೊಪ್ಪ, ಜೂ. ೨೩: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಪರಿಹಾರ ಕಾಣದ ಡೆಂಗ್ಯೂ ಜ್ವರ ನಿವಾರಣೆಗಾಗಿ ಟೊಂಕಕಟ್ಟಿ ನಿಂತಿರುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸೊಳ್ಳೆಗಳನ್ನು ಹಿಡಿದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ತಿಳಿಯಲು ಮುಂದಾಗಿದ್ದಾರೆ.
ಹಾಸನ ಮತ್ತು ಮೈಸೂರಿನಿಂದ ಕೀಟಾಣು ಶಾಸ್ತçಜ್ಞನರ ತಂಡ ಡಾ. ರಾಜೇಶ್ ಕುಲಕರ್ಣಿಯವರ ನೇತೃತ್ವದದಲ್ಲಿ ಬಂದಿದ್ದು, ಸುಂಟಿಕೊಪ್ಪದ ಮೊದಲನೇ ವಿಭಾಗ, ೨ನೇ ವಿಭಾಗದ ಅಪ್ಪಾರಂಡ ಬಡಾವಣೆ ಮತ್ತಿತರ ಭಾಗಗಳಲ್ಲಿ ಮುಂದಿನ ೪-೫ ದಿನಗಳ ಕಾಲ ಸೊಳ್ಳೆಗಳನ್ನು ಹಿಡಿದು ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಯಾವ ರೀತಿಯ ಸೊಳ್ಳೆ ಮತ್ತು ಇದು ಹರಡುವ ಖಾಯಿಲೆ ಯಾವುದು? ಈ ಸೊಳ್ಳೆಗಳ ಕಡಿತದಿಂದಲೇ ಜ್ವರ ಬಾಧಿಸುತ್ತಿರುವುದು ನಿಜವೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮುಂದಾಗಿದೆ.
ಸುAಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಂಪ್ರತಿ ಭೇಟಿ ನೀಡುತ್ತಿದ್ದು ಪ್ರತಿನಿತ್ಯದ ರೋಗಿಗಳ ವಿವರವನ್ನು ಪಡೆದು ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಜವಬ್ದಾರಿ ನೀಡಲಾಗಿದ್ದು, ಈ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ.
ದುರಾದೃಷ್ಟವೆಂದರೆ ಕೆಲವು ಭಾಗಗಳಲ್ಲಿ ಪರಿಸರವನ್ನು, ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕಾರ ನೀಡುತ್ತಿಲ್ಲ. ಹೆಸರು ಹೇಳಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತೀವ್ರÀ ಆಕ್ರೋಶ ವ್ಯಕ್ತಪಡಿಸಿದರು. ಬಲವಂತವಾಗಿ ಸಂಗ್ರಹಿಸಿ ಇಟ್ಟ ನೀರನ್ನು ಖಾಲಿ ಮಾಡಿಸಲು ಮುಂದಾದರೆ ಜನಪ್ರತಿನಿಧಿಗಳ ಮಧ್ಯಪ್ರವೇಶ ಜೋತೆಗೆ ಮಾತಿನ ಚಕಮಕಿ ನಡೆದು ನಾವು ಅಸಹಾಯಕರಾಗಿ ವಾಪಾಸು ಬರಬೇಕಾದ ಪ್ರಮೆಯ ಎದುರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಎದುರಾದಾಗ ನಾವು ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆ ಹೊರತು ಅಸಹಕಾರ ತೋರುವುದು ಜವಬ್ದಾರಿಯುತ ನಾಗರಿಕ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಅಥವಾ ಇನ್ಯಾವುದೇ ಜ್ವರ ಎಂದು ನಿರ್ಧಾರವಾಗುವವರೆಗೆ ನಾವು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವುದು ಮಾತ್ರವಲ್ಲ ಆರೋಗ್ಯ ಕಾಪಾಡಿಕೊಳ್ಳುವ ನಿಯಮಗಳನ್ನು ಹಾಗೂ ಅವರ ಸಲಹೆ, ಸೂಚನೆಗಳನ್ನು ಪಾಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.