ಮಡಿಕೇರಿ, ಜೂ. ೨೨: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ನ ನಿರ್ದೇಶಕ ದೇವಣಿರ ತಿಲಕ್ ರೋಟರಿ ವಲಯ ೬ರ ಸಹಾಯಕ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.

ದೇವಣಿರ ತಿಲಕ್, ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್, ವೀರಾಜಪೇಟೆ ರೋಟರಿ, ಗೋಣಿಕೊಪ್ಪ ರೋಟರಿ ಕ್ಲಬ್ ಮತ್ತು ಪಿರಿಯಾಪಟ್ಟಣ ರೋಟರಿ ಸಂಸ್ಥೆಗಳ ಸಹಾಯಕ ಗವರ್ನರ್ ಆಗಿ ೨೦೨೩-೨೪ನೇ ರೋಟರಿ ವರ್ಷದಲ್ಲಿ ಜು.೧ ನಿಂದ ಕಾರ್ಯನಿರ್ವಹಿಸಲಿದ್ದಾರೆ.

ಡಿ.ಎಂ. ತಿಲಕ್ ೨೦೧೭-೧೮ನೇ ಸಾಲಿನಲ್ಲಿ ರೋಟರಿ ಜಿಲ್ಲೆಯ ಸಾರ್ಜೆಂಟ್ ಎಟ್ ಆರ್ಮ್ಸ್ ಆಗಿ ಕಾರ್ಯನಿರ್ವಹಿಸಿದ್ದು, ಈವರೆಗೂ ರೋಟರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರೋಟರಿ ಮಿಸ್ಟಿ ಹಿಲ್ಸ್ನ ೧೮ ವರ್ಷಗಳ ಅವಧಿಯಲ್ಲಿ ಬಿ.ಕೆ. ರವೀಂದ್ರರೈ, ಡಾ. ಸಿ.ಆರ್. ಪ್ರಶಾಂತ್, ಅನಿಲ್ ಎಚ್.ಟಿ. ಸಹಾಯಕ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದರು.