ನಾಪೋಕ್ಲು, ಜೂ. ೨೧: ಹದಗೆಟ್ಟ ರಸ್ತೆಯ ಗುಂಡಿಮುಚ್ಚಿ ವಾಹನ ಚಾಲಕರಿಗೆ ನೆರವಾಗುವ ಕೆಲಸವನ್ನು ಸ್ಥಳೀಯ ಶೌರ್ಯ ತಂಡದ ಸದಸ್ಯರು ಶನಿವಾರ ಮಾಡಿದರು.
ಪಟ್ಟಣಕ್ಕೆ ಹೊಂದಿಕೊAಡAತಿರುವ ಚೆರಿಯಪರಂಬು ಊರಿನ ಜನರೆಲ್ಲರೂ ಉಪಯೋಗಿಸುವ ರಸ್ತೆಯ ದುಸ್ಥಿತಿಯನ್ನು ಸಂಬAಧಪಟ್ಟವರು ಗಮನಹರಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಸಂಕಷ್ಟವಾಗಿತ್ತು. ರಸ್ತೆಯು ಗುಂಡಿಮಯವಾಗಿ ತೊಂದರೆಯಾಗುತ್ತಿದ್ದು ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವುದನ್ನು ಗಮನಿಸಿದ ಶೌರ್ಯ ಸದಸ್ಯರುಗಳು ಹೊಳೆಯಿಂದ ಕಲ್ಲುಗಳನ್ನು ಶೇಖರಿಸಿ ಪಿಕಪ್ ವಾಹನದಲ್ಲಿ ತಂದು ರಸ್ತೆಗೆ ಹಾಕಿ ಸೇವಾ ಕಾರ್ಯವನ್ನು ಮಾಡಿ ರಸ್ತೆಗೊಂದು ಕಾಯಕಲ್ಪ ನೀಡಿದರು. ಶೌರ್ಯ ಸದಸ್ಯರು ಊರಿನವರ ಪ್ರಶಂಸೆಗೆ ಭಾಜನರಾದರು.
ಈ ಸೇವಾ ಕಾರ್ಯದಲ್ಲಿ ದಿಲೀಶ್ ಎನ್.ಬಿ., ಶಂಕರ್ ಬಿ.ಹೆಚ್., ಸೀನಾ ಮಾಧವನ್, ಮಾಯಿಲಪ್ಪ ಪಿ.ಎಂ., ಗಣೇಶ್ ಎಂ., ಅಪ್ಪಣ್ಣ ವೈ.ಆರ್., ಪ್ರವೀಣ ಕೆ.ಹೆಚ್. ಹಾಜರಿದ್ದರು. - ದುಗ್ಗಳ