ನನ್ನ ಅದ್ಭುತ ಪ್ರಪಂಚ

ಪ್ರೀತಿಯ ಅಪ್ಪ, ತನ್ನೆಲ್ಲಾ ಆಸೆಗಳನ್ನು ಬದಿಗಿಟ್ಟು ತನ್ನವರಿಗೋಸ್ಕರ ಜೀವನವನ್ನೇ ತ್ಯಾಗ ಮಾಡಿ ಮನೆಯವರ ಸಂತೋಷಕ್ಕಾಗಿ ಇರುವ ಏಕೈಕ ಜೀವ ತನಗೂ ಆಸೆ ಇದೆ. ಆದರೆ ತನ್ನ ಆಸೆಗಿಂತ ನನ್ನ ಮಗಳ ಖುಷಿ, ಅವಳ ಅವಶ್ಯಕತೆಯನ್ನು ಪೂರೈಸುವುದೇ ತನ್ನ ನಿಜವಾದ ಸಂತೋಷ ಎಂದು ಮನಸಾರೆ ಪ್ರೀತಿಸುವವ ನನ್ನ ಅಪ್ಪ. ನನಗೆ ಕಾವಲುಗಾರ ಕೂಡ. ನನ್ನ ಹಠಮಾರಿ ತನವನ್ನು ಕೂಡ ಒಮ್ಮೊಮ್ಮೆ ಸಹಿಸುವ ಗುಣವಂತ. ಒಮ್ಮೆ ಗದರಿದರು ಕ್ಷಣದಲ್ಲೇ ಕ್ಷಮೆ ಕೇಳಿ ನನ್ನ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ದೈವ ಅಪ್ಪ. ನೀವು ನನ್ನ ಅದ್ಭುತ ಪ್ರಪಂಚ. ನಿಮಗೆ ಧನ್ಯವಾದ. ಹಾಗೇ ನನ್ನ ದೈವಕ್ಕೆ ತಂದೆಯರ ದಿನದ ಶುಭಾಶಯಗಳು ಅಪ್ಪ.

- ಬಿ.ಎಸ್. ಧೃತಿಕ, ೩ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ಕನಸಿನ ಅಪ್ಪ

ನನ್ನ ಅಪ್ಪ ನನಗೆ ಕನಸು ಮಾತ್ರ. ನನಸು ಮಾಡಿಕೊಂಡು ಬದುಕುತ್ತಿರುವೆನು. ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲಗುವವರೆಗೆ ತಂದೆ ಏನೇನು ಮಾಡುತ್ತಿದ್ದರು ಎಂದು ನೆನೆಸಿಕೊಳ್ಳುತ್ತೇನೆ. ಮುಂಜಾನೆ ಎದ್ದು ಅಮ್ಮ ಅವಳ ದಿನನಿತ್ಯದ ಕರ್ತವ್ಯ ಮಾಡಲು ತೊಡಗುವಾಗ ಪಕ್ಕದಲ್ಲಿ ಅಪ್ಪ ಮಲಗಿರುತ್ತಾರೆ. ಅವರ ತೋಳ ತೆಕ್ಕೆಯಲ್ಲಿ ಬೆಚ್ಚಗೆ ಮಲಗಿರುತ್ತಿದ್ದೆ. ಅಮ್ಮಳ ಬೆಡ್ ಕಾಫಿ ಬರುವಾಗ ನನ್ನ ಬಾಯಿಗೆ ಬೆರಳಿನಲ್ಲಿ ಕಾಫಿ ಅದ್ದಿ ಬಾಯಿಗೆ ಇಡುವಾಗ ಅದರ ರುಚಿನೇ ಬೇರೆ ಅಲ್ಲವೆ. ನಂತರ ತಾನು ಎದ್ದು ನನ್ನನ್ನು ಎಬ್ಬಿಸಿ ಕಾಯಿಸಿ (ಬಿಸಿಲು) ಒಳಗೆ ತರುವುದು ಅಪ್ಪನೇ ಅಲ್ಲವೇ. ಅಪ್ಪ ಡ್ಯೂಟಿ ಮುಗಿಸಿ ಬಂದು ಬೆನ್ನ ಮೇಲೆ ಕೂರಿಸಿಕೊಂಡು ಉಪ್ಪು ಮೂಟೆ, ಹಸು, ಕೂಸುಮರಿ ಮಾಡಿ ಆಡೊದು ಎಷ್ಟು ಚೆಂದವಿರುತ್ತಿತ್ತು. ಅಮ್ಮ ಕಂಕುಳಲ್ಲಿ ಇರಿಸಿಕೊಂಡು ತಿರುಗಿದರೆ ಅಪ್ಪ ಭುಜದಲ್ಲಿ ಕೂರಿಸಿ ತಾನು ಕಾಣದಿರುವುದನ್ನು ಮಗು ಕಾಣಲಿ ಎಂದು ತಿರುಗಾಡುವ ನನ್ನ ಮುದ್ದಿನ ಕನಸಿನ ಅಪ್ಪನಿಗೆ ನನ್ನ ಎದೆತುಂಬಿದ ಅಮೂಲ್ಯವಾದ ಪ್ರೀತಿಯ ನೆನಪು. ಐ ಲವ್ ಯೂ ಅಪ್ಪಾ.

- ಪಿ.ಬಿ. ದುಂದುಬಿ, ೮ನೇ ತರಗತಿ, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಷನ್, ಬೇತು, ನಾಪೋಕ್ಲು.ಅಮೂಲ್ಯ ಗಿಫ್ಟ್

ನೀನು ನಮಗಾಗಿ ಹರಿಸುವ ಒಂದೊAದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ. ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್. ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್.. ಅಪ್ಪಾ ನೀನು ಹೆಮ್ಮೆಪಡುವ ಮಗಳು ನಾನಾಗುವೆ. ಇದು ನನ್ನ ಪ್ರಾಮೀಸ್. ಹ್ಯಾಪಿ ಫಾದರ್ಸ್ ಡೇ...

- ಧನ್ವಿ, ಅಪ್ಪಂಗಳ.ದೇವರಿಗಿAತ ಮಿಗಿಲು

ಬೇಡಿದ್ದನ್ನೆಲ್ಲ ಕೊಡುವವನು ದೇವರಾದರೆ, ಬೇಡದೆನೇ ಬಯಸಿದ್ದನ್ನೆಲ್ಲ ನೀಡುವ ಅಪ್ಪ ಅವನಿಗಿಂತಲೂ ಮಿಗಿಲಾದವನು.

- ನತಾಶ್, ಸಂತ ಜೋಸೆಫರ ಕಾನ್ವೆಂಟ್ ಶಾಲೆ, ಮಡಿಕೇರಿ.ಎಲ್ಲರಂತಲ್ಲ ನನ್ನ ಅಪ್ಪ

ನನ್ನ ತಂದೆ ತುಂಬಾ ಶ್ರಮಜೀವಿ ಹಾಗೂ ಕರುಣಾಮಯಿ. ಮಾತಿನಲ್ಲೂ ಎಲ್ಲರನ್ನು ಗೌರವಿಸುವ ಸ್ವಭಾವ. ಮನಸ್ಸು ಮುಗ್ಧ. ಕೈಯಲ್ಲಿ ಪುಡಿಕಾಸು ಹಣವಿಲ್ಲದಿದ್ದರೂ ನಾನು ದುಡಿದು ತರುವೆ ಹೆದರಬೇಡಿ ಎಂಬ ಮಾತು. ಇಬ್ಬರು ಮಕ್ಕಳೊಂದಿಗೆ ಉತ್ತಮ ಮೌಲ್ಯ (ಜೀವನದ) ಕಲಿಸುತ್ತಾರೆ ನನ್ನ ಅಪ್ಪ. ಯಾವುದೇ ಕಷ್ಟದ ಪರಿಸ್ಥಿತಿ ಬಂದಾಗ ತಂದೆಯನ್ನು ನೆನಪಿಸಿಕೊಳ್ಳುವ ಮೊದಲ ವ್ಯಕ್ತಿ. ನನ್ನ ತಂದೆ ನಮ್ಮ ಸಂಸಾರದ ಕಣ್ಣು. ಆಟದೊಂದಿಗೆ ಶುರು ಮಾಡಿ ಪಾಠದೊಂದಿಗೆ ದಿನಚರಿ ನಡೆಸುವ ವ್ಯಕ್ತಿ ನನ್ನ ಅಪ್ಪ. ಎಲ್ಲರಂತಲ್ಲ ನನ್ನ ಅಪ್ಪ.

- ಕೆ.ಜಿ. ಉವೇಜ್, ೫ನೇ ತರಗತಿ, ಮರ್‌ಕಝ್ ಪಬ್ಲಿಕ್ ಶಾಲೆ, ಎಡಪಾಲ.ಮನೆಯ ಬೆಳಕು ನನ್ನಪ್ಪ

ಮನೆಯ ಬೆಳಕು ನನ್ನಪ್ಪ. ನನಗೆ ಜನ್ಮ ನೀಡಿದ ನನ್ನಪ್ಪನೆಂದರೆ ನನಗೆ ಬಲು ಪ್ರೀತಿ. ಮಲಗುವಾಗ ಕತೆ ಹೇಳಿ ನಿದ್ರೆ ಮಾಡಿಸುವ ನನ್ನಪ್ಪ. ನಮಗಾಗಿ ನಮ್ಮ ವಿದ್ಯಾಭ್ಯಾಸಕ್ಕಾಗಿ ಬಿಡುವಿಲ್ಲದೆ ದುಡಿದು ಹಣ ಹೊಂದಿಸುವನು ನನ್ನಪ್ಪ. ಅಪ್ಪ ನನ್ನ ಬಾಳಿನ ಆರದ ದೀಪ. ಅಪ್ಪನ ಪ್ರೀತಿ - ಮಮತೆ ಎಂದೂ ಮರೆಯಲಾಗದು. ಅವರೆಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳ ಏಳಿಗೆಗಾಗಿ ಹಿಂದೆ ಸರಿಯುವುದಿಲ್ಲ. ಒಂದೊತ್ತು ಉಪವಾಸವಿದ್ದರೂ ಮಕ್ಕಳ ಹೊಟ್ಟೆ ತುಂಬಿಸಲು ಬಯಸುವ ನನ್ನಪ್ಪ ನನಗೆ ದೇವರು. ಅವರಿಗೆ ಸಮನಾದ ಗುರುವಿಲ್ಲ. ನನ್ನ ಜೀವನವಿರುವವರೆಗೆ ನನ್ನಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನನ್ನ ಆಸೆ. ಪ್ರೀತಿಯಿಂದ ಅವರನ್ನು ಆರೈಕೆ ಮಾಡುವೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಅಪ್ಪಂದಿರ ದಿನದಂದು ನನ್ನ ಪ್ರೀತಿಯ ಹೂ ಮುತ್ತು ಅಪ್ಪನಿಗೆ ಕೊಡುವೆ. ಐ ಲವ್ ಯೂ ಅಪ್ಪ.

- ಅಜ್ಜಮಾಡ ಮಂತ್ರ ಮುತ್ತಮ್ಮ, ೧ನೇ ತರಗತಿ, ಲಯನ್ಸ್ ಶಾಲೆ, ಗೋಣಿಕೊಪ್ಪ.ತಂದೆಯೇ ನಿಜವಾದ ಹೀರೋ...

ಒಂದು ಮಗುವಿನ ಜೀವನದಲ್ಲಿ ತಂದೆಯ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಯಾವಾಗಲೂ ಸ್ಥಿರವಾಗಿರುವ ವ್ಯಕ್ತಿ. ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾಲದಲ್ಲಿ ನಮಗೆ ಬೆಂಬಲ ನೀಡುವ ಮತ್ತು ಸರಿಯಾದ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡುವವರೇ ನಮ್ಮ ತಂದೆ.

ನನ್ನ ತಂದೆ ನನ್ನ ಜೀವನದ ಅತ್ಯುತ್ತಮ ಸ್ನೇಹಿತ ಮತ್ತು ನಿಜವಾದ ನಾಯಕ. ನನ್ನ ತಂದೆ ನನ್ನ ಜೀವನದ ಅತ್ಯಂತ ವಿಶೇಷ ವ್ಯಕ್ತಿ. ಅಪ್ಪಂದಿರಲ್ಲಿ ಪ್ರೀತಿ ಇಲ್ಲ ಎಂದುಕೊAಡರೆ ಅದು ತಪ್ಪು. ಅವರಿಗೆ ನಮ್ಮ ಮೇಲೆ ಅತೀ ಪ್ರೀತಿ ಇರುತ್ತದೆ. ಆದರೆ ಅವರು ತಾಯಿಯ ಹಾಗೆ ಅದನ್ನು ತೋರಿಸಿಕೊಡುವುದಿಲ್ಲ. ಏಕೆಂದರೆ ಅಪ್ಪಂದಿರು ನಮ್ಮ ಮೇಲೆ ಅತಿಯಾದ ಪ್ರೀತಿ ತೋರಿಸಿದರೆ ನಮಗೆ ಅವರ ಮೇಲೆ ಇರುವ ಭಯ ಹೋಗುತ್ತೆ ಮತ್ತು ನಾವು ಅವರ ಮಾತುಗಳನ್ನು ಕೇಳುವುದಿಲ್ಲ ಎಂದು ಗೊತ್ತಿರೋದಿಕ್ಕೆ ಅಪ್ಪಂದಿರು ಅತಿಯಾದ ಪ್ರೀತಿಯನ್ನು ತೋರಿಸುವುದಿಲ್ಲ.

ತಂದೆ ತನ್ನ ಕಷ್ಟಗಳನ್ನು ಮಕ್ಕಳಿಗೆ ತಿಳಿಸುವುದಿಲ್ಲ. ಏಕೆಂದರೆ ತನ್ನ ಕಷ್ಟ ತನ್ನ ಮಕ್ಕಳಿಗೆ ಗೊತ್ತಾಗಬಾರದೆಂದು ಅಂದುಕೊಳ್ಳುತ್ತಾರೆ. ತಾನು ಯಾವುದೇ ರೀತಿಯ ಕಷ್ಟವನ್ನು ಅನುಭವಿಸಿದರು ಸಹ ತನ್ನ ಮಕ್ಕಳಿಗೋಸ್ಕರ ಆ ಕಷ್ಟವನ್ನು ಸಹಿಸಿಕೊಂಡು ಮಾಡುತ್ತಾನೆ. ಎಲ್ಲ್ಲಿ ತಂದೆಯರು ತನ್ನ ಮಕ್ಕಳು ತನ್ನ ಹಾಗೆ ಆಗಬಾರದೆಂದು ಭಯಸುತ್ತಾರೆ. ಅದಕ್ಕೋಸ್ಕರ ಅವರು ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುವುದು ತಾನು ಅನುಭವಿಸುವ ಕಷ್ಟಗಳನ್ನು ತನ್ನ ಮಕ್ಕಳು ಅನುಭವಿಸಲು ಸಾಧ್ಯವಿಲ್ಲ ಎಂದು ತಂದೆಯಾದವರಿಗೆ ಗೊತ್ತು. ತುಂಬಾ ಮಕ್ಕಳು ಅಪ್ಪನ ಮೇಲು ಸಿಟ್ಟು ಮಾಡುವುದು ಎಲ್ಲಾ ಇದೆ. ನನ್ನ ಜೀವನದಲ್ಲಿ ನನ್ನ ತಂದೆಯೇ ನಿಜವಾದ ಹೀರೋ.

- ಹೆಚ್.ಕೆ. ಹಝ್‌ಬ್ರಿನ್, ಆಂಜಿಲಾ ವಿದ್ಯಾನಿಕೇತನ, ಕೂಡಿಗೆ.ನನ್ನ ಮೊದಲ ಹೀರೋ...

ಅಪ್ಪ ನನ್ನ ಅಪ್ಪ. ಅಪ್ಪ ಎಂದರೆ ನನಗೆ ಧೈರ್ಯ, ಶಿಸ್ತು, ಕಾಳಜಿ ನಮ್ಮ ಮನೆಯ ಆಧಾರ ಸ್ತಂಭ. ಅಪ್ಪ ಎಂದರೆ ನಮ್ಮೆಲ್ಲರ ಕೋರಿಕೆಗಳ ಮ್ಯಾಜಿಕ್ ಬಾಕ್ಸ್ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ನಮ್ಮೊಂದಿಗೆ ಹೇಳಿಕೊಳ್ಳದೆ, ತೋರಿಸಿಕೊಳ್ಳದೆ ನನ್ನ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾರೆ. ನನ್ನ ಅಪ್ಪ ನನ್ನ ಮೊದಲ ಹೀರೋ. ನನ್ನ ಅಪ್ಪ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನಾನು ತಪ್ಪು ಮಾಡಿದಾಗ ನನ್ನನ್ನು ಗದರಿ ಶಿಕ್ಷಿಸುತ್ತಾರೆ. ಸ್ವಲ್ಪ ಸಮಯದ ನಂತರ ತಾವೆ ನೊಂದುಕೊAಡು ನನ್ನ ಬಳಿ ಬಂದು ಮುದ್ದಿಸುತ್ತಾರೆ. ಸಮಯ ಸಿಕ್ಕಾಗ ನನ್ನ ಜೊತೆ ಆಟವಾಡಿ ಕುಷಿಪಡಿಸುತ್ತಾರೆ.

- ಹೆಚ್.ಆರ್. ಗ್ರೀಷ್ಮಾ, ೭ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು.ದೇವರು ಕೊಟ್ಟ ದೊಡ್ಡ ವರ

ಅಪ್ಪನ ಕುರಿತು ಹೇಳಲು ಮಾತುಗಳೇ ಸಾಲದು. ನಮ್ಮ ಅಪ್ಪ ನಮ್ಮ ಜೊತೆ ಒಂದು ಗೆಳೆಯನ ತರಹ ನಡೆದುಕೊಳ್ಳುತ್ತಾರೆ. ನನ್ನ ಅಪ್ಪ ನನಗೆ ಎಲ್ಲಾನೂ, ನನಗೆ ಅಣ್ಣ-ತಮ್ಮ ಯಾರು ಇಲ್ಲ. ನನ್ನ ಗೆಳೆಯ, ಅಣ್ಣ, ತಮ್ಮ ಎಲ್ಲಾನು ಅಪ್ಪನೇ. ನನ್ನ ಅಪ್ಪ ಯಾವುದರಲ್ಲೂ ನನಗೆ ನೋವು ಕೊಡಲಿಲ್ಲ. ನಮಗೆ ಆಸ್ತಿ, ಅಂತಸ್ತು, ಮನೆ ಯಾವುದೂ ಇಲ್ಲ. ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದೇವೆ. ನನ್ನ ಅಪ್ಪ ಕೂಲಿ ಕೆಲಸ ಮಾಡಿ ನಮಗೆ ಯಾವ ನೋವು ತಿಳಿಸದೆ ನಮ್ಮನ್ನ ಸಾಕುತ್ತಿದ್ದಾರೆ. ನನ್ನ ಅಪ್ಪ ನನಗೆ ದೇವರು ಕೊಟ್ಟ ಒಂದು ದೊಡ್ಡ ವರ. ನನ್ನ ಅಪ್ಪನಿಗೆ ಕೋಟಿ ಕೋಟಿ ನಮನಗಳು. ಐ ಲವ್ ಯೂ ಅಪ್ಪ.

- ರೀಯಾ ಜೋಸೆಫ್, ೬ನೇ ತರಗತಿ, ಸ.ಹಿ.ಪ್ರಾ. ಶಾಲೆ, ಚೇರಂಬಾಣೆ.ನನ್ನ ಮೊದಲ ಹೀರೋ...

ಅಪ್ಪ ನನ್ನ ಅಪ್ಪ. ಅಪ್ಪ ಎಂದರೆ ನನಗೆ ಧೈರ್ಯ, ಶಿಸ್ತು, ಕಾಳಜಿ ನಮ್ಮ ಮನೆಯ ಆಧಾರ ಸ್ತಂಭ. ಅಪ್ಪ ಎಂದರೆ ನಮ್ಮೆಲ್ಲರ ಕೋರಿಕೆಗಳ ಮ್ಯಾಜಿಕ್ ಬಾಕ್ಸ್ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ನಮ್ಮೊಂದಿಗೆ ಹೇಳಿಕೊಳ್ಳದೆ, ತೋರಿಸಿಕೊಳ್ಳದೆ ನನ್ನ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾರೆ. ನನ್ನ ಅಪ್ಪ ನನ್ನ ಮೊದಲ ಹೀರೋ. ನನ್ನ ಅಪ್ಪ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನಾನು ತಪ್ಪು ಮಾಡಿದಾಗ ನನ್ನನ್ನು ಗದರಿ ಶಿಕ್ಷಿಸುತ್ತಾರೆ. ಸ್ವಲ್ಪ ಸಮಯದ ನಂತರ ತಾವೆ ನೊಂದುಕೊAಡು ನನ್ನ ಬಳಿ ಬಂದು ಮುದ್ದಿಸುತ್ತಾರೆ. ಸಮಯ ಸಿಕ್ಕಾಗ ನನ್ನ ಜೊತೆ ಆಟವಾಡಿ ಕುಷಿಪಡಿಸುತ್ತಾರೆ.

- ಹೆಚ್.ಆರ್. ಗ್ರೀಷ್ಮಾ, ೭ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು.ನಮ್ಮ ಬೆಳವಣಿಗೆಯ ಆಶಾಕಿರಣ

ಮುಂದೆ ಎಷ್ಟೇ ಕೋಪ ತೋರಿಸಿದರೂ ಮನಸ್ಸಲ್ಲಿ ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವವೇ ತಂದೆ. ತಂದೆ ನಮ್ಮ ಬೆಳವಣಿಗೆಯ ಸ್ಫೂರ್ತಿ, ಆಶಾಕಿರಣ. ನನ್ನ ತಂದೆ ಯಾವಾಗಲೂ ಶ್ರಮಪಡುತ್ತಾರೆ. ಹಾಗೆಯೇ ನಮ್ಮೊಂದಿಗೆ ಸ್ನೇಹಜೀವಿಯಾಗಿರುತ್ತಾರೆ. ವರ್ಷಂಪ್ರತಿ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ದೇಶ ಕಾಯುವ ಯೋಧನಂತೆ ನಮ್ಮನ್ನು ನಮ್ಮ ತಂದೆ ಕಾಯುತ್ತಾರೆ. ಹಾಗಾಗಿ ನಾನು ನನ್ನ ಅಪ್ಪನನ್ನು ತುಂಬಾ ಗೌರವಿಸುತ್ತೇನೆ.

- ಅಜ್ಜಿಕುಟ್ಟಿರ ತಮನ್ ತಿಮ್ಮಯ್ಯ, ೯ನೇ ತರಗತಿ, ಲಯನ್ ಪ್ರೌಢಶಾಲೆ, ಕಳತ್ಮಾಡು.ಜಗಳದಲ್ಲೂ ಪ್ರೀತಿ ತೋರುವ ಅಪ್ಪ

ಅಪ್ಪ ಎಂದರೆ ನನಗೆ ಮೊದಲು ನೆನಪಾಗುವುದು ಪ್ರೀತಿ, ಕಾಳಜಿ, ಶಿಸ್ತಿನ ಗುರು ಹಾಗೂ ಒಂದು ಒಳ್ಳೆಯ ಸ್ನೇಹಿತ. ನನ್ನ ಅಪ್ಪ ಎದುರಿಗೆ ಸ್ವಲ್ಪ ಗಂಭೀರತೆ ತೋರಿದರೂ ಮನಸ್ಸಿನ ಒಳಗೆ ತುಂಬಾ ಮುದ್ದು. ಎಲ್ಲಾ ಅಮ್ಮಂದಿರೂ ತಾನು ನೋಡುವುದನ್ನು ತನ್ನ ಮಕ್ಕಳೂ ನೋಡಲಿ ಎಂದು ಸೊಂಟದಲ್ಲಿ ಕೂರಿಸಿಕೊಂಡರೆ ಎಲ್ಲಾ ಅಪ್ಪಂದಿರೂ ತನಗೆ ಕಾಣದಿರುವುದು ತನ್ನ ಮಕ್ಕಳಿಗೆ ಕಾಣಲಿ ಎಂದು ಹೆಗಲ ಮೇಲೆ ಕೂರಿಸಿಕೊಳ್ಳುತ್ತಾರೆ. ನನ್ನ ಅಪ್ಪ ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಎಂದು ಹೇಳಲು ನಾನು ಹಮ್ಮೆಪಡುತ್ತೇನೆ. ನನ್ನ ಅಪ್ಪ ನನಗಷ್ಟೇ ಅಲ್ಲ ಎಲ್ಲರಿಗೂ ಬೇಕಾದವರು. ನನ್ನ ಅಪ್ಪ ನನ್ನೊಂದಿಗೆ ತನ್ನ ಯಾವ ನೋವುಗಳನ್ನು ಹಂಚಿ ಕೊಳ್ಳುವುದಿಲ್ಲ. ತಾನೇ ಆ ನೋವುಗಳನ್ನು ಅನುಭವಿಸು ತ್ತಾರೆ. ಆದರೂ ನನಗೆ ಅಪ್ಪನ ನೋವುಗಳು ಅರ್ಥವಾಗುತ್ತದೆ. ನಾನು ನನ್ನ ಅಪ್ಪನೊಂದಿಗೆ ಜಗಳವಾಡದ ದಿನವೇ ಇಲ್ಲ. ಆ ಜಗಳದಲ್ಲಿ ಯಾವಾಗಲೂ ಪ್ರೀತಿ ಇದ್ದೇ ಇರುತ್ತಿತ್ತು. ನನ್ನ ಅಪ್ಪನ ಮುಖವು ಯಾವಾಗಲೂ ಅರಳಿದ ಹೂವಿನಂತಿರಲಿ ಎಂದು ಭಾವಿಸುತ್ತಾ ನಿಮಗೆ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು. ಅಪ್ಪಾ ಐ ಲವ್ ಯೂ ಅಪ್ಪಾ.

- ಕೆ.ಎಂ. ರುಷಿಕ, ೭ನೇ ತರಗತಿ, ಜವಾಹರ್ ನವೋದಯ ವಿದ್ಯಾಲಯ, ಗಾಳಿಬೀಡು.ಅಪ್ಪನೇ ಸರ್ವಸ್ವ...

ನನಗೆ ಅಪ್ಪ ಎಂದರೆ ತುಂಬಾ ಇಷ್ಟ. ಏಕೆಂದರೆ ನನಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಾದರೆ ಅಪ್ಪನನ್ನೇ ಕೇಳುತ್ತೇನೆ. ಅವರು ಸವಿಸ್ತಾರವಾಗಿ ಮಾಹಿತಿ ಮಾಡಿಕೊಡುತ್ತಾರೆ. ನನ್ನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದರಿಂದ ನನಗೆ ಹೆಚ್ಚು ಅಂಕಗಳು ಬಂದಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ನನಗೆ ಸೈಕಲ್ ಕೊಡಿಸಿದ್ದರಿಂದ ರಜೆಯ ಸಮಯದಲ್ಲಿ ಪಕ್ಕದ ಮನೆಯ ಸಾನ್ವಿ ಬೇಬಿಯ ಜೊತೆಗೆ ಆಟ ಆಡುತ್ತೇನೆ.

ರಜೆಯಲ್ಲಿ ದೇವಸ್ಥಾನ ಮತ್ತು ಪ್ರವಾಸಿ ತಾಣಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಇದರಿಂದ ನನ್ನ ಸಾಮಾನ್ಯ ಜ್ಞಾನ ಹೆಚ್ಚಾಗಿದೆ. ನಾನು ನನ್ನ ತಂದೆಯಿAದ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನನ್ನನ್ನು ಸಂಸ್ಕಾರವAತನನ್ನಾಗಿ ಮಾಡಿದ್ದಾರೆ. ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ನನ್ನ ತಂದೆ ನನಗೆ ದೇವರ ಸಮಾನ. ಅವರೇ ನನ್ನ ಸರ್ವಸ್ವ. ಅಪ್ಪಂದಿರ ದಿನಕ್ಕೆ ನಿಮಗಿದೋ ಶುಭಾಶಯ ಮತ್ತು ನಮಸ್ಕಾರಗಳು.

- ಎಂ.ಹೆಚ್. ಆದರ್ಶ್, ೯ನೇ ತರಗತಿ, ಗಾಂಧಿನಗರ, ವೀರಾಜಪೇಟೆ.ಸದಾ ಜೊತೆಗಿರುವ ಬೆಳಕು

ಅಪ್ಪ ಅನ್ನುವ ಸಂಬAಧ ಅನ್ನೋದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ. ಮಗಳ ಮೊದಲ ಹೀರೋ ಅಪ್ಪ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರು ಮುಟ್ಟಿಸುವ ಹೊಣೆ. ಸದಾ ಜೊತೆಗಿರುವ ಬೆಳಕು. ಬದುಕಿನ ಎಲ್ಲವೂ ಅಪ್ಪ. ಹೆಣ್ಣು ಮಕ್ಕಳಿಗೆ ಅಮ್ಮನಿಗಿಂತ ಅಪ್ಪನೆಂದರೆ ಬಲು ಪ್ರೀತಿ. ಐ ಲವ್ ಯೂ ಅಪ್ಪ.

- ಕೆ.ಎಲ್. ಮಿಂಚು, ೧೦ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಹೃದಯ ಶ್ರೀಮಂತ ವ್ಯಕ್ತಿ

ನನ್ನ ಅಪ್ಪ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನಾನು ಕೂಡ ನನ್ನ ಅಪ್ಪನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಅಪ್ಪ ಹೃದಯದಲ್ಲಿ ಶ್ರೀಮಂತ ವ್ಯಕ್ತಿ. ನನ್ನ ಅಪ್ಪನ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನ ಅಪ್ಪ ಕಷ್ಟಪಟ್ಟು ದುಡಿದು ಶಾಲೆಗೆ ಕಳುಹಿಸುತ್ತಾರೆ. ನನ್ನ ಅಪ್ಪ ನನ್ನನ್ನು ದೊಡ್ಡ ವ್ಯಕ್ತಿಯಾಗಬೇಕೆಂದು ಮತ್ತು ಒಳ್ಳೆಯ ಪ್ರಜೆಯಾಗಿರಬೇಕೆಂದು ಹರುಸುತ್ತಾರೆ. ನಾನು ತಪ್ಪು ಮಾಡಿದಾಗ ನನ್ನನ್ನು ತಿದ್ದಿ ಬುದ್ಧಿ ಹೇಳುತ್ತಾರೆ ಮತ್ತೆ ಆ ತಪ್ಪನ್ನು ಮತ್ತೆ ಮಾಡಬೇಡ ಎಂದು ಹೇಳುತ್ತಾರೆ. ನನ್ನ ಅಪ್ಪ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ. ನಾನು ನನ್ನ ಅಪ್ಪನಿಗೆ ಏನಾದರೂ ತಂದುಕೊಡಲು ಹೇಳಿದರೆ ಅದು ಎಷ್ಟೇ ಕಷ್ಟವಾಗಲಿ ಅದನ್ನು ನನಗೆ ತಂದುಕೊಡುತ್ತಾರೆ. ನನ್ನ ಅಪ್ಪ ನನಗೆ ಒಬ್ಬ ಆದರ್ಶ ವ್ಯಕ್ತಿ. ನನ್ನ ಅಮ್ಮ ನನಗೆ ಬೈದರೆ ನನ್ನ ಅಪ್ಪ ಅಮ್ಮನಿಗೆ ಮಗುವನ್ನು ಅಷ್ಟು ಬೈಯಬೇಡ ಎಂದು ಹೇಳುತ್ತಾರೆ. ನನಗೆ ಒಳ್ಳೆಯ ವಿಷಯದ ಬಗ್ಗೆ ತಿಳಿಸಿಕೊಡುತ್ತಾರೆ. ನನ್ನ ಅಪ್ಪನ ಬಗ್ಗೆ ನಾನು ಎಷ್ಟು ಹೇಳಿದರೂ ಸಾಲದು. ಅಪ್ಪ ನಿಮಗೆ ದೇವರು ಒಳ್ಳೆಯ ಆಯಸ್ಸು, ಆರೋಗ್ಯ ನೀಡಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು ಪ್ರೀತಿಯ ಅಪ್ಪ. ಐ ಲವ್ ಯೂ ಅಪ್ಪ.

- ಪಿ. ಅಖಿಲ್, ೬ನೇ ತರಗತಿ, ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ.ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವ

ಮುಂದೆ ಎಷ್ಟೇ ಕೋಪ ತೋರಿಸಿದರು, ಮನಸ್ಸಲ್ಲಿ ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವವೇ ತಂದೆ... ನಮ್ಮ ಜೀವನದಲ್ಲಿ ನಮ್ಮ ತಂದೆಯನ್ನು ಬೇರೆಯವರಿಗೆ ಹೋಲಿಸಲಾಗುವುದಿಲ್ಲ. ಅಪ್ಪ ಮಗುವಿನ ಬೆಂಬಲವಾಗಿ ಸದಾ ಯಾವಾಗಲೂ ಜೊತೆಯಾಗಿ ಇರುತ್ತಾನೆ. ಪ್ರತಿಯೊಂದು ರೀತಿಯ ಸಮಸ್ಯೆಗೆ ಪರಿಹಾರದೊಂದಿಗೆ ಸಿದ್ಧವಾಗಿರುತ್ತಾನೆ. ಅವರು ನಮ್ಮ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ ಮತ್ತು ನಮ್ಮ ಜೀವನದುದ್ದಕ್ಕೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. - ಹೆಚ್.ಎಲ್. ಮಂಜುಳ, ಅಪ್ಪಂಗಳ.