ಮಡಿಕೇರಿ, ಜೂ. ೨೨: ಪ್ರವಾಸಿ ತಾಣವಾಗಿರುವ ಮಡಿಕೇರಿ ಸನಿಹದ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯಲು ಜೀಪುಗಳು ಮತ್ತೆ ಸಂಚಾರ ಆರಂಭಿಸಿವೆ. ಜಿಲ್ಲಾಡಳಿತ ಹೇರಿದ್ದ ನಿಷೇಧ ನಡುವೆ ಮಾತುಕತೆಯ ಒಪ್ಪಂದವನ್ನು ಮುಂದಿಟ್ಟುಕೊAಡು ಸದ್ದಿಲ್ಲದೆ ಸಂಚಾರ ಆರಂಭ ಮಾಡಿವೆ.

ಪ್ರವಾಸಿ ತಾಣವಾಗಿರುವ ಮಾಂದಲಪಟ್ಟಿಗೆ ಪ್ರವೇಶ ದ್ವಾರದಿಂದ ರಸ್ತೆ ಚೆನ್ನಾಗಿಲ್ಲವೆಂಬ ಕಾರಣದಿಂದ ಜೀಪುಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಅನುಮತಿ ನೀಡಲಾಗಿತ್ತು. ಬರಬರುತ್ತಾ ಜೀಪುಗಳ ಸಂಚಾರ ಮಡಿಕೇರಿಯಿಂದ ಆರಂಭವಾಗತೊಡಗಿತು. ಜೊತೆಯಲ್ಲಿ ಬಾಡಿಗೆ ಹಾಗೂ ದರಗಳಲ್ಲಿನ ಪೈಪೋಟಿಯಿಂದಾಗಿ ಆಗಾಗ್ಗೆ ಪ್ರವಾಸಿಗರು ಹಾಗೂ ಪರಸ್ಪರ ಚಾಲಕರ ನಡುವೆಯೂ ಘರ್ಷಣೆಗಳು ಆರಂಭವಾದವು. ಇದು ತಾರಕಕ್ಕೇರಿ ಕೆಲವು ಚಾಲಕರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಕೆ. ನಿಡುಗಣೆ ಪಂಚಾಯ್ತಿ ಸದಸ್ಯರ ಮೇಲೆಯೇ ಹಲ್ಲ್ಲೆಗೆ ಮುಂದಾದ ಘಟನೆಯೂ ನಡೆಯಿತಲ್ಲದೆ, ಜೀಪು ಚಾಲಕನೋರ್ವನ ಮೇಲೆ ಹಲ್ಲೆ ಕೂಡ ನಡೆಸಲಾಯಿತು. ಇದರಿಂದಾಗಿ ಜನಪ್ರತಿನಿಧಿ ವಕೀಲರ ಮೂಲಕ ಅನಧಿಕೃತ (ಬಿಳಿ ಫಲಕ) ಜೀಪುಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತಕ್ಕೆ ನೋಟೀಸ್ ಜಾರಿ ಮಾಡಿದರು. ಇದರೊಂದಿಗೆ ಕೆಲವರು ಅಬ್ಬಿ ಜಲಪಾತದ ಬಳಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಎರಡೂ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಖಾಸಗಿ ಜೀಪುಗಳ (ಬಿಳಿ ಫಲಕ) ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿತು. ಅಲ್ಲದೆ, ಹಳದಿ ಫಲಕವನ್ನಾಗಿ ಮಾರ್ಪಡಿಸಿ ಅಧಿಕೃತವಾಗಿ ಚಾಲನೆ ಮಾಡಬೇಕೆಂಬ ಸೂಚನೆ ಕೂಡ ನೀಡಿತ್ತು.

ಸದ್ದಿಲ್ಲದೆ ಆರಂಭ..!

ಜೀಪುಗಳ ಸಂಚಾರ ಸ್ಥಗಿತಗೊಂಡು ಒಂದು ತಿಂಗಳು ಕಳೆದಿದೆ. ಜೀಪು ಬಾಡಿಗೆಯನ್ನೇ ನಂಬಿಕೊAಡು ಜೀವನ ಸಾಗಿಸುತ್ತಿರುವ ಕೆಲವರು, ಕ್ಷೇತ್ರದ ಶಾಸಕರು, ಸ್ಥಳೀಯ ಪಂಚಾಯ್ತಿ ಪ್ರಮುಖರನ್ನು ಭೇಟಿ ಮಾಡಿ ಜೀಪು ಚಾಲನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಶಾಸಕರನ್ನು ಭೇಟಿಯಾದ ಸಂದರ್ಭ ದಲ್ಲಿ ಶಾಸಕರು ಹಳದಿ ಫಲಕ ಮಾಡಿಸಿಕೊಂಡು ನ್ಯಾಯಯುತವಾಗಿ ವ್ಯವಹರಿಸುವಂತೆ ಸೂಚನೆ ನೀಡಿರು ವದಾಗಿ ತಿಳಿದು ಬಂದಿದೆ. ಯಾರೂ ಕೂಡ ಜೀಪು ಚಾಲಿಸುವಂತೆ ಸೂಚನೆ ನೀಡಿರುವದಿಲ್ಲ. ಈಗ ಕೆಲವರು ಜನಪ್ರತಿನಿಧಿಗಳು ಹೇಳಿದ್ದಾರೆ ಎಂದು ಹೇಳಿಕೊಂಡು ಸದ್ದಿಲ್ಲದೆ ಸಂಚಾರ ಆರಂಭಿಸಿದ್ದಾರೆ. ನಂದಿಮೊಟ್ಟೆಯ ಲ್ಲಿರುವ ಜೀಪ್ ನಿಲ್ದಾಣದಲ್ಲಿ ನಿಲುಗಡೆಗೊಳಿಸದೆ ಮಾರ್ಗದ ಬದಿಯಲ್ಲಿ ನಿಲ್ಲಿಸಿ ಕೊಂಡು ಅಲ್ಲಿಂದ ಪ್ರವಾಸಿಗರನ್ನು ಹತ್ತಿಸಿಕೊಂಡು ಹೊಸ ವ್ಯವಸ್ಥೆ ಮೂಲಕ ಕರೆದೊಯ್ಯಲಾ ಗುತ್ತಿರುವುದು ಕಂಡು ಬರುತ್ತಿದೆ..!

ಗೇಟ್‌ನಿಂದ ದುಬಾರಿ ಶುಲ್ಕ..!

ಮಡಿಕೇರಿ ಕಡೆಯಿಂದ ಹಾಗೂ ಇತರ ಕಡೆಗಳಿಂದ ಜೀಪು ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಪ್ರವಾಸಿ ಗರು ತಮ್ಮ ಸ್ವಂತ ವಾಹನಗಳಲ್ಲಿ ಮಾಂದಲಪಟ್ಟಿ ಪ್ರವೇಶ ದ್ವಾರದವರೆಗೆ ತೆರಳಿ ಅಲ್ಲಿಂದ ನಡೆದುಕೊಂಡು ಹೋಗಿ ವೀಕ್ಷಣೆ ಮಾಡಿ ಬರುತ್ತಿದ್ದರು. ಇದೀಗ ಅಲ್ಲಿಯೂ ಕೆಲವು ಚಾಲಕರು ಸದ್ದಿಲ್ಲದೆ ಗೇಟ್ ಬಳಿಯಿಂದ ಒಳ ಗಡೆಗೆ ಕರೆದುಕೊಂಡು ಹೋಗುತ್ತಿದ್ದು, ಅಂದಾಜು ಮೂರು ಕಿ.ಮೀ. ದೂರದ ಸಂಚಾರಕ್ಕೆ ಮೂರು ಸಾವಿರದವರೆಗೆ ಹಣ ವಸೂಲಿ ಮಾಡುತ್ತಿರುವದಾಗಿ ಪ್ರವಾಸಿಗರು ಆಡಳಿತಕ್ಕೆ ಲಿಖಿತ ದೂರು ನೀಡಿದ್ದಾರೆ. ಇದು ಇತರ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಹಾಗಾಗಿ ಇತರ ಚಾಲಕರು ಕೂಡ ಮಡಿಕೇರಿ ಕಡೆಯಿಂದ ಸಂಚಾರ ಆರಂಭ ಮಾಡಿರುವುದಾಗಿ ಹೇಳಲಾಗುತ್ತಿದೆ. ಗೇಟಿನೊಳಗಡೆ ಆಗಮಿಸುವ ವಾಹನಗಳಿಗೆ ಅರಣ್ಯ ಇಲಾಖೆ ವತಿಯಿಂದ ನಿಗದಿತ ಶುಲ್ಕ ವಿಧಿಸಿ ಒಳಬಿಡಲಾಗುತ್ತಿದೆ.

ಗ್ರಾಮಸ್ಥರ ಆಕ್ಷೇಪ

ಜೀಪುಗಳ ಅನಾರೋಗ್ಯಕರ ಪೈಪೋಟಿಯಿಂದಾಗಿ ಗ್ರಾಮಸ್ಥರಿಗೆ ಕಿರಿಕಿರಿಯುಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀಪುಗಳ ವೇಗದ ಸಂಚಾರ ಹಾಗೂ ಕರ್ಕಶ ಶಬ್ದದ ಹಾರನ್ ಮಾಡುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಂಬAಧಿಸಿದವರು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.