ಮಡಿಕೇರಿ, ಜೂ. ೨೨: ಅಕ್ರಮವಾಗಿ ನಡೆದಿದ್ದ ಮರ ಕಡಿತಲೆ ಪ್ರಕರಣವೊಂದಕ್ಕೆ ಸಹಕರಿಸಿದ್ದ ಆರೋಪದಂತೆ ಈ ಹಿಂದೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ವೈ. ಚಕ್ರಪಾಣಿ ಅವರನ್ನು ಇದೀಗ ಅಮಾನತುಗೊಳಿಸಲಾಗಿದೆ. ಇದು ೨೦೨೨ರಲ್ಲಿ ನಡೆದಿರುವ ಪ್ರಕರಣವಾಗಿದ್ದು, ಅರಣ್ಯ ಇಲಾಖೆಯ ಜಾಗೃತ ದಳದ ಮೂಲಕ ತನಿಖೆ ಮುಂದುವರೆದಿತ್ತು. ತನಿಖೆಯಲ್ಲಿ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದು, ಪ್ರಸ್ತುತ ಬೆಂಗಳೂರು ನಗರ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಡಿಸಿಎಫ್ ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಪ್ರಕರಣವೇನು? : ವೀರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಈ ಹಿಂದೆ ಎಂ.ಎನ್. ರಮೇಶ್ ಅವರ ಜಮೀನಿನಲ್ಲಿದ್ದ ಸುಮಾರು ೬ ತೇಗದ ಮರಗಳನ್ನು ಕಡಿಯಲು ಅನುಮತಿ ಕೋರಲಾಗಿತ್ತು. ಆದರೆ ಬಳಿಕ ಎಸ್ಟೇಟ್ ಮಾಲೀಕರ ನಕಲಿ ಸಹಿ ಮಾಡಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯದಿಂದ ಸುಮಾರು ೧೦ ಮೀಟರ್ ದೂರದಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ೬ ಮರಗಳ ಬದಲಾಗಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ೬೬ ಮರಗಳನ್ನು ಕಡಿಯಲು ಷಡ್ಯಂತ್ರ ನಡೆದಿತ್ತಲ್ಲದೆ ಹಲವು ಮರಗಳನ್ನು ಕಡಿಯಲಾಗಿತ್ತು. ಈ ವೇಳೆ ಅಕ್ರಮವಾಗಿ ಮರ ಕಡಿತಲೆ ಬಗ್ಗೆ ದೂರು ಕೇಳಿಬಂದಿದ್ದು, ಪ್ರಕರಣವೂ ದಾಖಲಾಗಿ ಅರಣ್ಯ ಇಲಾಖೆಯ ಜಾಗೃತ ದಳದ ಮೂಲಕ ತನಿಖೆ ಆರಂಭಿಸಲಾಗಿತ್ತು. ಪ್ರಾಥಮಿಕ ಹಂತದಲ್ಲಿ ಈ ಬಗ್ಗೆ ವ್ಯಕ್ತವಾದ ಆರೋ ಪದಂತೆ ಅರಣ್ಯ ಇಲಾಖಾ ಸಿಬ್ಬಂದಿ ಗಳಾದ ಬೋಪಣ್ಣ, ರಾಕೇಶ್, ಹೇಮಾ ವತಿ ಎಂಬ ಮೂವರು ಅಮಾನತು ಗೊಂಡಿದ್ದರು. ಆದರೆ ಬಳಿಕ ಇವರು ಕೆ.ಎ.ಟಿ. ಮೂಲಕ ತಡೆಯಾಜ್ಞೆ ತಂದು ಮತ್ತೆ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರೂ ಈ ಅಕ್ರಮದಲ್ಲಿ ಆಗಿನ ಡಿ.ಎಫ್.ಓ ಚಕ್ರಪಾಣಿ ಅವರು ಇತರರೊಂದಿಗೆ ಶಾಮೀಲಾಗಿ ಅನುಮತಿ ನೀಡಿದ್ದಾರೆ ಎಂಬ ಆರೋಪವೂ ಇತ್ತು. ಈ ಬಗ್ಗೆ ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ಮೂಲಕ ಸ್ಥಳ ಪರಿಶೀಲನೆಯೊಂದಿಗೆ ಮರಗಳನ್ನು ಸ್ವಾಧೀನಕ್ಕೆ ಪಡೆದು ತನಿಖೆ ಮುಂದುವರಿಸಲಾಗಿತ್ತು ಎಂಬುದು ಇದರ ಹಿನ್ನೆಲೆಯಾಗಿದೆ. ತನಿಖೆಯ ಸಂದರ್ಭ ಇದೀಗ ಚಕ್ರಪಾಣಿ ಅವರ ಮೇಲಿನ ಆಪಾದನೆ ಮೇಲ್ನೋಟಕ್ಕೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಡಿಪಿ ಮತ್ತು ಎಆರ್ (ಸರ್ವೀಸ್-೫)ರ ಸರಕಾರಿ ಅಧೀನ ಕಾರ್ಯದರ್ಶಿ ಹೆಚ್.ಆರ್. ಅನುರಾಧ ಅವರು (ಉಚಿತ ಆದೇಶ ಹೊರಡಿ ಸಿದ್ದಾರೆ) ಆದೇಶ ಹೊರಡಿಸಲಾಗಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ಜಾಗೃತ ದಳದ ಸಿಬ್ಬಂದಿಗಳು ವೀರಾಜಪೇಟೆ ಡಿ.ಎಫ್.ಓ ಕಚೇರಿಯಿಂದ ಹಲವು ಕಡತಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ತನಿಖೆಯ ಸಂದರ್ಭ ಸ್ಥಳ ಮಹಜರು ನಡೆಸಲಾಗಿದ್ದು, ಸಂಬAಧಿತ ಅಧಿಕಾರಿಗಳು ತಪ್ಪೆಸಗಿದ್ದರೂ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುವುದನ್ನು ತಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಡಿದುರುಳಿಸಿದ್ದ ಭಾರೀ ಮೌಲ್ಯದ ಎಲ್ಲ ಮರಗಳನ್ನು ಸರಕಾರಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷ ಣಾಧಿಕಾರಿ ವಿ.ಎನ್.ಎನ್. ಮೂರ್ತಿ ‘ಶಕ್ತಿ’ಗೆ ಮಾಹಿತಿ ಇತ್ತಿದ್ದಾರೆ.