ಮಡಿಕೇರಿ, ಜೂ. ೨೦: ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಮನೆಯ ಗೇಟ್‌ಗೆ ಅಪ್ಪಳಿಸಿದ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆಯಲ್ಲಿ ನಡೆದಿದೆ.

ಅಲ್ಲಿನ ಭಗವತಿ ನಗರದ ಚಂದ್ರೇಶ್ ಎಂಬವರಿಗೆ ಸೇರಿದ ಮನೆಯ ಗೇಟ್ ಪುಡಿ ಪುಡಿಯಾಗಿದ್ದು, ಅವಘಡ ಸಂದರ್ಭ ಮನೆಯ ಪಕ್ಕದಲ್ಲಿದ್ದ ನಿಲುಗಡೆಗೊಂಡಿದ್ದ ಬಾಲಕೃಷ್ಣ ರೈ ಅವರಿಗೆ ಸೇರಿದ ಆಟೋ ಕೂಡ ಹಾನಿಯಾಗಿದೆ. ಬೆಂಗಳೂರು ಮೂಲದ ಪ್ರವಾಸಿಗರು ಕಾರಿನಲ್ಲಿ ಹೋಂಸ್ಟೇಗೆ ತೆರಳುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಮನೆಯ ಗೇಟ್‌ಗೆ ಕಾರು ಅಪ್ಪಳಿಸಿ ಒಂದು ಬದಿಗೆ ಮಗುಚಿಕೊಂಡಿದೆ. ಗೇಟ್ ಪಕ್ಕದಲ್ಲಿ ಮನೆಯವರು ನಿಂತಿದ್ದರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯ ದಿಂದ ಅವರು ಪಾರಾಗಿದ್ದಾರೆ.

ಆಟೋ ಚಾಲಕ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಎರಡು ವಾಹನಗಳು ನಜ್ಜುಗುಜ್ಜಾಗಿವೆ.