ಮಡಿಕೇರಿ, ಜೂ. ೨೦ : ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಪಿಂಚಣಿಯನ್ನು ಜಿಲ್ಲೆಯಲ್ಲಿ ಒಟ್ಟು ೬೯,೪೭೩ ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗಿದ್ದು, ಈ ಪಿಂಚಣಿಯನ್ನು ಸಂಬAಧಿಸಿದ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ಆದರೆ ಜೂನ್, ೨೦೨೩ ರಿಂದ ಸಾಮಾಜಿಕ ಭದ್ರತಾ ಯೋಜನೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಫಲಾನುಭವಿಗಳಿಗೆ ಪಾವತಿಸುತ್ತಿರುವ ಪಿಂಚಣಿಯನ್ನು ಆಧಾರ್ ನಂಬರ್ ಆಧಾರಿತ ಪಾವತಿ ಯನ್ನಾಗಿಸಲು ತೀರ್ಮಾನಿಸಿದ್ದು, ಈ ತೀರ್ಮಾನ ದಂತೆ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವ ಎನ್ಪಿಸಿಐ ಮ್ಯಾಪಿಂಗ್ ಆಗದೇ ಇರುವ ಹಾಗೂ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಚಾಲನೆಯಲ್ಲಿಲ್ಲದಿರುವ ಖಾತೆಗಳಿಗೆ
(ಮೊದಲ ಪುಟದಿಂದ) ಪಿಂಚಣಿ ಪಾವತಿ ಯಾಗುವುದಿಲ್ಲ. ಈ ಕಾರ್ಯ ವನ್ನು ತಾ. ೨೫ರ ಒಳಗೆ ಫಲಾನುಭವಿಗಳು ಸರಿಪಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಅಂತಹ ಒಟ್ಟು ೫,೯೪೯ ಫಲಾನು ಭವಿಗಳಿದ್ದು, ಈ ಫಲಾನುಭವಿಗಳ ಪಟ್ಟಿಯನ್ನು ನಿರ್ದೇಶನಾಲಯದಿಂದ ಕಳುಹಿಸಲಾಗಿದೆ.
ಮಡಿಕೇರಿ ೧,೪೭೦, ವೀರಾಜಪೇಟೆ ೯೭೬, ಪೊನ್ನಂಪೇಟೆ ೮೮೮, ಕುಶಾಲನಗರ ೧೦೯೧ ಮತ್ತು ಸೋಮವಾರಪೇಟೆ ೧೫೨೪ ಇದ್ದು, ಈ ಫಲಾನುಭವಿಗಳ ಹೆಸರು ಹಾಗೂ ಮಾಹಿತಿಯು ಸಂಬAಧಿಸಿದ ಕಂದಾಯ ನಿರೀಕ್ಷಕರ ಕಚೇರಿಗಳಲ್ಲಿ ಲಭ್ಯವಿದೆ.