ಮಡಿಕೇರಿ, ಜೂ. ೨೧: ವಸುಧೈವ ಕುಟುಂಬಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ೯ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಯೋಗ ಸಂಸ್ಥೆಗಳು, ಶಾಲಾ - ಕಾಲೇಜುಗಳು, ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಉತ್ಸಾಹಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರರಾಷ್ಟಿçÃಯ ೯ ನೇ ಮಡಿಕೇರಿ, ಜೂ. ೨೧: ವಸುಧೈವ ಕುಟುಂಬಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ೯ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಯೋಗ ಸಂಸ್ಥೆಗಳು, ಶಾಲಾ - ಕಾಲೇಜುಗಳು, ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಉತ್ಸಾಹಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಅಂತರರಾಷ್ಟಿçÃಯ ೯ ನೇ ಒಕ್ಕೂಟ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಸೇರಿದಂತೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಅಂತರ ರಾಷ್ಟಿçÃಯ ಯೋಗ ದಿನಾಚರಣೆ ನಡೆಯಿತು.

ಯೋಗ ದಿನಾಚರಣೆಯಲ್ಲಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ. ಸಿಇಓ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ನಂಜುAಡಯ್ಯ, ಯೋಗ ಶಿಕ್ಷಕರಾದ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ಪೌರಾಯುಕ್ತರಾದ ವಿಜಯ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಆರ್‌ಸಿಎಚ್ ಅಧಿಕಾರಿ ಡಾ.ಗೋಫಿನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ವೈದ್ಯ ಡಾ. ರಾಜಾರಾಂ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.

ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದರು.

ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಮಾತನಾಡಿ, ಅಂರ‍್ರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಕಳೆದ ೧೫ ದಿನಗಳಿಂದ ಯೋಗ ಪೂರ್ವಾಭ್ಯಾಸ ನಡೆಸಿ ಅಂತರ ರಾಷ್ಟಿçÃಯ ಯೋಗ ದಿನಾಚರಣೆಯನ್ನು ಯಶಸ್ವಿ ಗೊಳಿಸಲಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಮಾತನಾಡಿ, ಅಂತರರಾಷ್ಟಿçÃಯ ೯ ನೇ ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ

ಸಂಸ್ಥೆಯ ಪ್ರತಿನಿಧಿಗಳು ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಯಶಸ್ಸುಗೊಳಿಸಿದ್ದಾರೆ ಎಂದು ತಿಳಿಸಿದರು.ಗೋಣಿಕೊಪ್ಪ: ಸಮಾಜದ ಅಭಿವೃದ್ಧಿಗೂ ಯೋಗ ಅವಶ್ಯ ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಉಮಾಮಹೇಶ್ವರಿ ಪೆಟ್ರೋಲ್ ಬಂಕ್ ಆವರಣದಲ್ಲಿ ಆರ್ಟ್ ಆಫ್ ಲಿವಿಂಗ್, ಉಮಾಮಹೇಶ್ವರಿ ಪೆಟ್ರೋಲ್ ಬಂಕ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಗ ಸಿದ್ದ ಅಂತರರಾಷ್ಟಿçÃಯ ಯೋಗಾ ದಿನಾಚರಣೆಯಲ್ಲಿ ದೀಪೋಜ್ವಲನ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಮಾಜ ಸೇವೆ ಮಾಡಬೇಕೆಂಬ ಹಂಬಲದಲ್ಲಿರು ವವರು ಆರೋಗ್ಯ ಕಾಪಾಡಿಕೊಳ್ಳು ವುದು ಕೂಡ ಮುಖ್ಯವಾಗಲಿದೆ. ಈ ನಿಟ್ಟಿನಲ್ಲಿ ಯೋಗಾಭ್ಯಾಸದಿಂದ

ಮತ್ತಷ್ಟು ಸೇವೆ ನೀಡಲು ಅವಕಾಶವಿದೆ. ನಮ್ಮ ದೇಶದ ಯೋಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದರ ಅಭ್ಯಾಸ ಕೂಡ ಮುಖ್ಯವಾಗಿದೆ. ನನ್ನ ತಂದೆ (ದಿ. ಶಾಸಕ ಎ.ಕೆ. ಸುಬ್ಬಯ್ಯ) ತಮ್ಮ ಜೀವನದ ಕೊನೆಯ ೮೫ ವಯಸ್ಸಿನವರೆಗೂ ಯೋಗ ಮಾಡುತ್ತಿದ್ದರು. ಅವರು ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದಾಗ ಕಲಿತ ಅಭ್ಯಾಸದಿಂದ ಅವರ ಕೊನೆಯವರೆಗೂ ಚೈತನ್ಯದಿಂದ ಇದ್ದರು ಎಂದು ಸ್ಮರಿಸಿದರು.

ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ರಾಜ್ಯ ಸಂಚಾಲಕ ಅಳಮೇಂಗಡ ಡಾನ್ ರಾಜಪ್ಪ ಮಾತನಾಡಿ, ಒತ್ತಡದಿಂದ ಶೇ. ೯೦ ರಷ್ಟು ಮಾನವ ಸಾವು ಸಂಭವಿಸುತ್ತಿರು ವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಒತ್ತಡ ನಿಭಾಯಿಸಿಕೊಂಡು ತೃಪ್ತಿ ಪಡೆದುಕೊಳ್ಳಲು ಯೋಗಾಭ್ಯಾಸ ಒಳ್ಳೆಯದು. ಜನರ ಹಿತ ಕಾಯುವ ಜನಪ್ರತಿನಿಧಿಗಳು ಯೋಗಾಭ್ಯಾಸದಲ್ಲಿ ತೊಡಗಿಕೊಂಡರೆ ಸಮಾಜಕ್ಕೆ ಹೆಚ್ಚು ಲಾಭವಾಗಲಿದೆ. ಮಧುಮೇಹ, ಜೀರ್ಣಕ್ರಿಯೆ, ಅಸಿಡಿಟಿ, ನಿದ್ರಾ ಸಮಸ್ಯೆ, ನೆನಪಿನ ಶಕ್ತಿ ವೃದ್ಧಿಸುವ ಆಸನಗಳು ಹೆಚ್ಚು ಅವಶ್ಯ ಎಂದರು.

ಉದ್ಯಮಿ ಕೊಲ್ಲೀರ ಉಮೇಶ್ ಮಾತನಾಡಿದರು. ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು. ಬಸ್ತಿçಕಾ, ವ್ಯಾಯಾಮ, ಮಲಾಸನ, ವೀರಭದ್ರಾಸನ ಮಾಡಿದರು. ೯೪ ರ ಹಿರಿಯರಾದ ನಾಮೇರ ಜಾನಕ್ಕಿ ಕುಟ್ಟಪ್ಪ ಸೇರಿದಂತೆ ೮೦ ಕ್ಕೂ ಹೆಚ್ಚು ಜನರು ಪಾಲ್ಗೊಂಡು ಅಭ್ಯಾಸ ಮಾಡಿದರು.ಸೋಮವಾರಪೇಟೆ : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿರಗೊಳಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ನಿಯಮಿತವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕ ದೀಪಕ್ ಉಪಾಧ್ಯ ಕರೆ ನೀಡಿದರು.

ಇಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೇತೃತ್ವದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಲಯನ್ಸ್ ಸಂಸ್ಥೆ, ಜೇಸೀ ಸಂಸ್ಥೆ, ಜಾನಪದ ಪರಿಷತ್ ಸಹಯೋಗದೊಂದಿಗೆ ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ ಕನ್ನಡ ಭವನದಲ್ಲಿ ಆಯೋಜಿಸಿದ್ದ ೯ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವ ಯೋಗವು ಇತ್ತೀಚಿನ ವರ್ಷಗಳಲ್ಲಿ ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಯೋಗದ ಮಹತ್ವವನ್ನು ಪ್ರಪಂಚದ ಬಹುತೇಕ ರಾಷ್ಟçಗಳು ಮನಗಂಡಿವೆ ಎಂದು ದೀಪಕ್ ಹೇಳಿದರು.

ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂದ ಅವರು, ಪ್ರತಿಯೋರ್ವರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗಕ್ಕೂ ಸಮಯ ಮೀಸಲಿಡಬೇಕು. ಹಾಗಾದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.

ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಯೋಗವು ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಪ್ರತಿಯೋರ್ವರೂ ಯೋಗದ ಮಹತ್ವವನ್ನು ಅರಿತುಕೊಳ್ಳಬೇಕೆಂದರು.

ದಿನಾಚರಣೆಯ ಅಂಗವಾಗಿ ದೀಪಕ್ ಉಪಾಧ್ಯ, ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ರಾಗಿಣಿ ಅವರುಗಳ ಮಾರ್ಗದರ್ಶನದಲ್ಲಿ ವಿವಿಧ ಯೋಗಾಸನಗಳು, ಪ್ರಾಣಾಯಾಮ, ಬಸ್ತಿçಕಾ ಪ್ರಾಣಾಯಾಮ, ನಾಡಿ ಶೋಧನ ಸೇರಿದಂತೆ ಇನ್ನಿತರ ಯೋಗವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ರೋಹಿತ್, ಜೇಸೀ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ, ಜಾನಪದ ಪರಿಷತ್‌ನ ಅಧ್ಯಕ್ಷ ಕೆ.ಎ. ಪ್ರಕಾಶ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮೃತ್ಯುಂಜಯ, ಪಿ.ಕೆ. ಚಂದ್ರು, ವಿಶ್ವಕರ್ಮ ಸಮಾಜದ ಎಸ್.ಬಿ. ಲೀಲಾರಾಂ, ಒಕ್ಕಲಿಗರ ಸಂಘದ ಜಗದೀಶ್, ಪೊಲೀಸ್ ಇಲಾಖೆಯ ವೀಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಡಿಕೇರಿ : ಅಂತರರಾಷ್ಟಿçÃಯ ಯೋಗ ದಿನಾಚರಣೆಯ ಪ್ರಯುಕ್ತ ನಗರ ಬಿಜೆಪಿ ವತಿಯಿಂದ ಮಡಿಕೇರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಮಹತ್ವದ ಬಗ್ಗೆ ಯೋಗ ಭಾರತಿ, ಭಾರತೀಯ ವಿದ್ಯಾಭವನದ ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಮಾಹಿತಿ ನೀಡಿದರು. ನಂತರ ಯೋಗಪಟುಗಳಿಂದ ಯೋಗ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ನಗರ ಬಿಜೆಪಿ ಉಪಾಧ್ಯಕ್ಷರಾದ ಬಿ. ಕೆ. ಜಗದೀಶ್, ಖಜಾಂಚಿ ಮುರುಗನ್, ನಗರ ಸಭಾ ಉಪಾಧ್ಯಕ್ಷರಾದ ಸವಿತ ರಾಕೇಶ್, ಸದಸ್ಯರಾದ ಎಸ್. ಸಿ. ಸತೀಶ್, ಚಿತ್ರಾವತಿ, ಸಬಿತ, ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.ಗೋಣಿಕೊಪ್ಪಲು : ಉತ್ತಮ ಸಮಾಜ ನಿರ್ಮಾಣಕ್ಕೆ ಯೋಗಾ ಭ್ಯಾಸ ಅವಶ್ಯಕತೆ ಎಂದು ಪೊನ್ನಂ ಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಹೇಳಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜನೆ ಗೊಂಡಿದ್ದ ೯ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು, ಯೋಗ ದಿನ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಬಾರದು, ಯೋಗಾಭ್ಯಾ ಸವು ಋಷಿಮುನಿಗಳ ಕಾಲದಿಂದಲೂ ಇದೆ. ಜೀವನದಲ್ಲಿ ಯೋಗಾಭ್ಯಾಸ ಎಲ್ಲಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಕಾಕಮಾಡ ಗಂಗಾ ಚಂಗಪ್ಪ, ಆಶ್ರಮದ ಅಧ್ಯಕ್ಷ ಪರಹಿತನಂದಜೀ ಮಹಾರಾಜ್, ಆಯುಶ್ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ.ರವಿ, ಮಧು ರಾಜೀವ್, ಅಂತರರಾಷ್ಟ್ರೀಯ ಯೋಗ ಪಟು ಅಮೃತ್ ರಾಕೇಶ್, ಡಾ. ಹಿತೇಶ್, ಸಿಂಚನ, ಸೇರಿ ದಂತೆ ಪ್ರಮುಖರು ಮಾತನಾ ಡಿದರು. ತಾಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿ ಸಿದ್ದರು.