ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ರಾಚೀನ ಗ್ರಂಥಗಳಲ್ಲಿ, ಪುರಾಣಗಳಲ್ಲಿ, ತತ್ವಶಾಸ್ತçಗಳಲ್ಲಿ ವೇದೋಪನಿಷತ್ತು. ಇತಿಹಾಸದಲ್ಲಿ ಉಲ್ಲೇಖವಿರುವ ಯೋಗವು ದೇಹ ಮತ್ತು ಮನಸ್ಸು, ಆತ್ಮವನ್ನು ಪರಸ್ಪರ ಸಂಯೋಜಿಸಿ ಅತ್ಯುತ್ತಮ ಆರೋಗ್ಯ ಆ ಮೂಲಕ ಆನಂದವನ್ನು ಉಂಟುಮಾಡುತ್ತದೆ ಎಂದು ಹೇಳಿದೆ. ಯೋಗವು ಇಡೀ ಜಗತ್ತಿನ ಜನಕ್ಕೆ ಸಂಬAಧಪಟ್ಟ ವಿಷಯವಾಗಿದ್ದು, ಭರತಖಂಡದ ಪ್ರಮುಖ ವಿಜ್ಞಾನಗಳಲ್ಲಿ ಒಂದಾಗಿದೆ.

೨೦೧೫ರ ಜೂನ್ ೨೧ ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ವರ್ಷಂಪ್ರತಿ ಆಚರಿಸುತ್ತಿದ್ದೇವೆ. ಜೂನ್ ೨೧ ಉತ್ತರಗೋಳಾರ್ಧದ ವರ್ಷದ ಅತೀ ದೀರ್ಘವಾದ ದಿನವಾಗಿದೆ. ಭಾರತೀಯರಿಗೆ ಪ್ರಕೃತಿಯೇ ಗೌರವ ಸಲ್ಲಿಸುವುದು ಅಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದ್ದು, ಪ್ರಕೃತಿಯ ಈ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಿ ಪ್ರಕೃತಿ ಬದಲಾಗುವ ಜೂನ್ ೨೧ ಅಂತರರಾಷ್ಟಿçÃಯ ಯೋಗ ದಿನವೆಂದು ಪರಿಗಣಿಸಲಾಗಿದೆ. ಉತ್ತರ ಗೋಳಾರ್ಧದ ಅತೀ ಉದ್ದ ಹಾಗೂ ದಕ್ಷಿಣ ಗೋಳಾರ್ಧದ ಅತೀ ಚಿಕ್ಕ ದಿನವನ್ನು ಅಂತರರಾಷ್ಟಿçÃಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ, ಆಯನ ಸಂಕ್ರಾತಿ ದಿನವೆಂದು ವರ್ಷದಲ್ಲಿನ ಅತ್ಯಂತ ಹೆಚ್ಚಿನ ಹಗಲುಳ್ಳ ದಿನವೆಂದು ಕರೆಯಲಾಗಿದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಾಯಾನಕ್ಕೆ ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆAದು ಕೂಡ ಪರಿಗಣಿಸಲಾಗುತ್ತದೆ. ಪ್ರಪಂಚದ ಎಲ್ಲಾ ಯೋಗಿಗಳಿಗೆ ಶಿಕ್ಷಕ ಆದಿಯೋಗಿ ಅಥವಾ ಯೋಗದ ಮೊದಲ ಗುರು ಭಗವಾನ್ ಶಿವ, ಶಿವನು ಆ ದಿನ ಪಾರ್ವತಿ ಮತ್ತು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದನೆAಬ ನಂಬಿಕೆ ಇದೆ.

ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸಗಳು ಅಥವಾ ಜೀವನ ಶಿಕ್ಷಣ, ಜೀವನದ ಶಿಸ್ತಿನ ಅಭ್ಯಾಸವನ್ನು ಯೋಗ ಎಂದು ಕರೆಯಲ್ಪಡುತ್ತದೆ. ಮಾನವ ಪ್ರಾಣಿಗಳ ಹಂತದಿAದ ಮುಂದುವರೆದು ಮಾನವತ್ವವನ್ನು ಬೆಳೆಸಿಕೊಂಡು ಉತ್ತಮ ಮಾನವನಾಗಿ, ನಂತರ ಅತ್ಯುತ್ತಮ ಮಾನವ. ದೇವ ಮಾನವನಾಗಿ ಅಂತಿಮವಾಗಿ, ನಂತರ ಅತ್ಯುತ್ತಮ ಮಾನವ. ದೇವ ಮಾನವನಾಗಿ ಅಂತಿಮವಾಗಿ, ದೈವತ್ವವನ್ನು ಹೊಂದುವ ಒಂದು ವಿಶಿಷ್ಟ ಪ್ರಕ್ರಿಯೆಯನ್ನು ಯೋಗ ಎನ್ನಬಹುದು.

ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿ ಸುವ ವಿಜ್ಞಾನವಾದ ಯೋಗದ ‘‘ಯುಜ್ ಸಮಾದೌ’’ ಎಂಬ ಧಾತುವಿನ ಅರ್ಥ. ಮನಸ್ಸಿನ ಏಕಾಗ್ರತೆ ಎಂದಾಗಿದೆ. ‘‘ಯುಜಿರ್ ಯೋಗೇ’’ ಎಂದರೆ ಸಾಧಕನು ತನ್ನ ಆತ್ಮವನ್ನು ಪರಮಾತ್ಮನ ಜೊತೆ ಒಂದಾಗಿಸುವ ಅಧ್ಯಾತ್ಮಿಕ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಅಗತ್ಯ ಮಾನಸಿಕ ಏಕಾಗ್ರತೆಯನ್ನು ಹೊಂದಲು ಸಹಾಯಕವಾಗುವ ಒಂದು ವೈಜ್ಞಾನಿಕ ಕಲೆ, ಆಸನೇ ದೇಹಾರೋಗ್ಯ ಕ್ರಮಬದ್ಧವಾದ ಯೋಗಾಸನಗಳ ಅಭ್ಯಾಸವನ್ನಿಟ್ಟುಕೊಂಡಿರುವ ವ್ಯಕ್ತಿ ಉತ್ತಮ ಆರೋಗ್ಯ ಹೊಂದಿರುತ್ತಾನೆ. ಪ್ರಾಣಾಯಾಮಾತ್ ಮಹಾಪಾತಕ ನಿವೃತ್ತಿ ಶಾಸ್ತೊçÃಕ್ತವಾಗಿ ಅಭ್ಯಾಸ ಮಾಡುವ ಪ್ರಾಣಾಯಾಮದಿಂದ ಮನುಷ್ಯ ಸ್ವಭಾವವು ಪರಿವರ್ತನೆಯಾಗಿ ಉತ್ತಮ ಗುಣ ನಡತೆಯಿಂದ ನಿರೋಗಿಯು ಶಾಂತಚಿತ್ತನು ಆಗುತ್ತಾನೆ.

ಧ್ಯಾನ ಯೋಗ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥö್ಯ, ದೈಹಿಕ ಆರೋಗ್ಯ ಕಾಪಾಡಿಕೊಂಡು ಬ್ರಹ್ಮ ಸಾಕ್ಷಾತ್ಕಾರ ಪಡೆಯಬಹುದು.

೧೯ನೇ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ತತ್ವಶಾಸ್ತçದ ಇತರ ವಿಷಯಗಳ ಜೊತೆಗೆ ವಿದ್ಯಾವಂತ ಪಾಶ್ಚಾತ್ಯ ಜನರು ಯೋಗದ ಕಡೆಗೆ ಸೆಳೆದಿದ್ದಾರೆ. ದೈನಂದಿನ ಜೀವನಕ್ಕೆ ಪ್ರಮುಖವಾದ ಗ್ಯಾಜೆಟ್‌ಗಳು ಆರಾಮ ಮತ್ತು ಅನುಕೂಲಕ್ಕಾಗಿ ಆಧುನಿಕ ಜೀವನ ಶೈಲಿಯಲ್ಲಿ, ನಮ್ಮನ್ನು ಸೆಳೆಯುತ್ತದೆ. ಸಮತ್ವಂ ಯೋಗ ಮುಚ್ಚö್ಯತೇ ಸುಖ-ದುಃಖದಲ್ಲಿ ಮೈಮರೆಯದೇ ಸಮಾನಾಗಿ ಸ್ವೀಕರಿಸುವ ಮನೋಧರ್ಮವನ್ನು ಯೋಗ ರೂಪಿಸಿಕೊಡುತ್ತದೆ. ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಯೋಗ ಒಂದು ಜೀವನ ತತ್ವ. ಅಷ್ಟಾಂಗ ಯೋಗದ ಎಂಟು ಹಂತದಲ್ಲಿ ಮೊದಲ ಎರಡು ಅಂಗಗಳಾದ ಯುಮದ ಕಟ್ಟಳೆಗಳಾದ ಅಹಿಂಸೆ, ಸತ್ಯ, ಅಸ್ತೇಯ ಬ್ರಹ್ಮಚರ್ಯ, ಅಪರಿಗ್ರಹ ಮತ್ತು ನಿಯಮ, ಪಂಚಕಗಲಾದ ಶೌಚ, ಸಂತೋಷ, ತಪಸ್ಸು, ಸ್ವದ್ಯಾಯ, ಈಶ್ವರ ಪ್ರಣಿಧಾನ ಇದು ನೈತಿಕ ಮೌಲ್ಯ ಒದಗಿಸಿದರೆ ಆಸನಗಳ ಅಭ್ಯಾಸಗಳು ಶರೀರದ ದೃಢತೆ, ಅಲ್ಲಾ ಅಂಗಾAಗಳ ಹೊಂದಾಣಿಕೆ, ಪಟುತ್ವ, ಸೂಕ್ಷö್ಮತೆ ಹೆಚ್ಚಿಸುತ್ತದೆ. ಶರೀರಕ್ಕೆ ಶಕ್ತಿ, ದೇಹದ ಎಲ್ಲಾ ಅಂಗಾAಗಗಳು, ವ್ಯವಸ್ಥೆಗಳು, ಸ್ನಾಯುಗಳು, ಕೀಲುಗಳು ಮತ್ತು ಕಾರ್ಯಗಳ ಮೇಲೆ ಹತೋಟಿ ಬರುತ್ತದೆ. ಶರೀರದ ಜಡತ್ವ ನಿವಾರಿಸಿ ನಮನೀಯತೆ, ಆರೋಗ್ಯ ಯೌವ್ವನ ಸೌಂದರ್ಯ ವೃದ್ಧಿಸಿ ಆಧುನಿಕ ಜೀವನ ಶೈಲಿಯಿಂದ ಬಂದ ಉಡುಗೊರೆಗಳಾದ ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಈ ರೀತಿಯ ನಾನಾ ಕಾಯಿಲೆಗಳನ್ನು ನಿವಾರಿಸಿ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.

ಸೂರ್ಯ ನಮಸ್ಕಾರ, ಗುರು ನಮಸ್ಕಾರ ಮಾಡುವುದರಿಂದ ಹ ಮತ್ತು ರ ಬೀಜಾಕ್ಷರಗಳ ಉಚ್ಛಾರಣೆಯಿಂದ ಶ್ವಾಸೋಚ್ಛಾಸಕ್ರಿಯೆ, ರಕ್ತ ಪರಿಚಲನ ಕ್ರಿಯೆ ಮತ್ತು ಜೀರ್ಣಕ್ರಿಯೆಗಳಿಗೆ ಅನುಕೂಲ ಒದಗಿಸಿ ಮೈತ್ರಿ ಭಕ್ತಿ ಆರೋಗ್ಯ, ಬಲ, ತೇಜಸ್ಸು ಮತ್ತು ಸ್ಫೂರ್ತಿ ಮುಂತಾದ ಗುಣಗಳನ್ನು ಉಂಟು ಮಾಡುತ್ತದೆ. ಷಟ್‌ಕ್ರಿಯೆಗಳಾದ ಕಪಾಲಬಾತಿ ತ್ರಾಟಕ, ನೇತಿ, ಸೌಲಿ, ಬಸ್ತಿ ಮಾಡುವುದರಿಮದ ಶರೀರದ ಅಂಗಗಳು ಶುದ್ಧಿಗೊಂಡು ಶರೀರ ಹಗುರ, ಪ್ರಫುಲ್ಲ, ಸ್ವಚ್ಛ ಆರೋಗ್ಯ ಪೂರ್ಣವಾಗುತ್ತದೆ. ಮನಸ್ಸು ಪ್ರಸನ್ನತೆ ಹೊಂದಿ ಸಂಕಲ್ಪ ಶಕ್ತಿ, ಇಚ್ಛಾಶಕ್ತಿ ಸಮರ್ಥವಾಗಿ ಬೆಳೆಸುತ್ತದೆ. ಪ್ರತ್ಯಾಹಾರ, ಧಾರಣ ಧ್ಯಾನ, ಸಮಾಧಿಯಿಂದ ಯೊಗದ ಪರಮಗುರಿಯಾದ ಆತ್ಮಸಾಕ್ಷಾತ್ಕಾರ ಹೊಂದುತ್ತಾರೆ. ಬಂಧಗಳು ಮತ್ತು ಮುದ್ರೆಗಳು ಪ್ರಾಣಶಕ್ತಿಯ ಪ್ರವಾಹ, ಪ್ರಾಣದ ಮೇಲೆ ಹತೊಟಿ ಮತ್ತು ಕುಂಡಲಿನಿ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿಯ ವ್ಯಕ್ತಿತ್ವ ಸಂತುಲಿತ ಅರ್ಥಪೂರ್ಣವಾಗುತ್ತದೆ. ಆದ್ದರಿಂದ ಗಾಳಿ, ನೀರು, ಆಹಾರದಂತೆ ಆರೋಗ್ಯಪೂರ್ಣ ಜೀವನಕ್ಕೆ ಮತ್ತು ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಕ್ಷÄಬ್ಧ ವಾತಾವರಣ ದಿಂದ ಮನಃಶ್ಶಾಂತಿ ಅತ್ಮಕಲ್ಯಾಣಕ್ಕಾಗಿ ಸುಮಧುರ ಬದುಕಿಗಾಗಿ ಯೋಗ ಅತ್ಯವಶ್ಯಕ ವಾಗಿದೆ.

-ಅಲಿಮ ಪಿ. ಹೆಚ್., ಗೋಣಿಕೊಪ್ಪಲು

ಮೊ:೯೭೪೧೬೬೪೧೭೩