ಕನಸು - ಪ್ರೀತಿ ಹೊಂದಿರುವ ಜೀವ

ಮುಂದೆ ಎಷ್ಟೇ ಕೋಪ ತೋರಿಸಿದರೂ ಮನಸ್ಸಿನಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವ ತಂದೆ. ನೀನು ನಮಗಾಗಿ ಹರಿಸುವ ಒಂದೊAದು ಬೆವರಿನ ಹನಿಯ ಋಣ ಹೇಗಪ್ಪ ತೀರಿಸಲಿ? ಯಾರು ಬೇಕಾದರೂ ಅಪ್ಪನಾಗಬಹುದು. ಆದರೆ ಒಳ್ಳೆಯ ಅಪ್ಪನಾಗುವುದು ಕೆಲವರಷ್ಟೇ. ಅದರಲ್ಲೊಬ್ಬರು ನೀವು. ಅಪ್ಪ ಲವ್ ಯು ಅಪ್ಪ ಹ್ಯಾಪಿ ಫಾದರ್ಸ್ ಡೇ ಅಪ್ಪ.

- ಕೇಸರಿ ಭೋಜಮ್ಮ ಈ.ವಿ. ೧೦ ನೇ ತರಗತಿ, ಮೂರ್ನಾಡು ನನ್ನಪ್ಪ ಶ್ರಮಜೀವಿ

ನನ್ನ ತಂದೆ ಶಿಕ್ಷಕರು. ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುವ ಶ್ರಮ ಜೀವಿ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ ನಾನು ಕೂಡ ಅವರನ್ನು ಅಷ್ಟೇ ಪ್ರೀತಿಸುತ್ತೇನೆ. ಒಂದು ದಿನವೂ ನನ್ನ ಅಪ್ಪ ನನಗೆ ಬೈದಿಲ್ಲ ಹೊಡೆದಿಲ್ಲ. ನನ್ನ ತಪ್ಪುಗಳನ್ನು ಸೂಕ್ಷö್ಮವಾಗಿ ನನಗೆ ಅರ್ಥ ಮಾಡಿಸುತ್ತಾರೆ. ನನ್ನ ಪ್ರತಿ ಕೆಲಸಕ್ಕೂ ಅಪ್ಪನ ಬೆಂಬಲವಿದೆ. ಸಮಯ ಪಾಲನೆಗೆ ಹೆಚ್ಚು ಮಹತ್ವ ಕೊಡಬೇಕು, ಹೆಚ್ಚು ಪುಸ್ತಕಗಳನ್ನು ಓದಬೇಕು, ಜ್ಞಾನ ಸಂಪಾದನೆ ಮಾಡಬೇಕು. ಪ್ರಪಂಚದಲ್ಲಿ ಯಾರೂ ಕದಿಯಲಾರದ ವಸ್ತುವೆಂದರೆ ಅದು ನಾವು ಗಳಿಸುವ ಜ್ಞಾನ ಮಾತ್ರ ಎಂದು ನನಗೆ ಆಗಾಗ ಹೇಳುತ್ತಿರುತ್ತಾರೆ. ಇಂದು ಕಷ್ಟಪಟ್ಟರೆ ಮಾತ್ರ ನಾವು ಮುಂದೆ ಚೆನ್ನಾಗಿರಬಹುದು ಎಂದು ನನಗೆ ಬುದ್ಧಿ ಮಾತು ಹೇಳುತ್ತಾರೆ. ಅಪ್ಪ ನನಗೆ ಚೆಸ್ ಆಟ ಕಲಿಸಿದ್ದಾರೆ ಹಾಗೂ ನನ್ನೊಂದಿಗೆ ಚೆಸ್ ಆಟ ಆಡುತ್ತಾರೆ. ಸದಾ ನನಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂದೆಗೆ ಧನ್ಯವಾದಗಳು.

- ಅಕ್ಷರ ತಂಗಮ್ಮ, ೫ನೇ ತರಗತಿ, ಸಂತ ಅಂತೋಣಿ ಶಾಲೆ, ಪೊನ್ನಂಪೇಟೆ.ನನ್ನ ಜಗತ್ತು ನನ್ನ ಅಪ್ಪ

ಜಗತ್ತಿನಲ್ಲಿ ಒಂದು ಅಸಾಧ್ಯವಾದ ಕೆಲಸವೆಂದರೆ ಒಬ್ಬ ತಂದೆಯನ್ನು ತನ್ನ ಪ್ರೀತಿಯ ಮಗಳಿಂದ ದೂರ ಮಾಡುವುದು. ಇದು ಸ್ವರ್ಗದಲ್ಲಿ ಮಾಡಿದ ನಿಶಕಲ್ಮಶ ಬಂಧ. ಅಮ್ಮ ಪ್ರೀತಿಯ ಕಡಲಾದರೆ ಅಪ್ಪ ಆಕಾಶ. ಅಪ್ಪಾ ಎಂದು ಹೇಳಿದಾಗ ಒಂದು ತರಹ ಮಿಂಚು. ಪ್ರತಿಯೊಬ್ಬರ ಜೀವನದಲ್ಲಿ ತಂದೆಯ ಪಾತ್ರ ಬಹಳ ಮುಖ್ಯ. ತಾಯಿ ಪ್ರೀತಿ ತೋರಿಸಿ ಕನಸು ಕಾಣುವಂತೆ ಮಾಡುತ್ತಾರೆ. ಆದರೆ ಅಪ್ಪ ಮಾತ್ರ ಅದನ್ನು ಪೂರ್ಣಗೊಳಿಸಲು ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಜೀವನದಲ್ಲಿ ಹೊಸದನ್ನು ಮಾಡಲು ಯಾವಾಗಲೂ ಪ್ರೋತ್ಸಾಹಿಸುತ್ತಾರೆ.

ಪ್ರಾಜೆಕ್ಟ್ ವರ್ಕ್ ಹಾಗೂ ಗಣಿತದಲ್ಲಿ ನನ್ನ ಅಪ್ಪ ತುಂಬಾ ಸಹಾಯ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಕೆಲಸದಲ್ಲಿ ಚಿತ್ರ ಬಿಡಿಸುವ ಸಂದರ್ಭದಲ್ಲಿ ನನ್ನ ಅಪ್ಪ ಎಲ್ಲಾ ಕೆಲಸ ಬಿಟ್ಟು ಸಹಾಯ ಮಾಡುತ್ತಿದ್ದರು. ಅವರನ್ನು ನೋಡಿ ನಾನು ಸ್ವಲ್ಪಮಟ್ಟಿಗೆ ಕಲಿತು ಈಗ ನನ್ನ ಸ್ವಂತದಲ್ಲಿಯೇ ಮಾಡುವಾಗ ನಾನೇ ಮಾಡಿರುವೇ ಎಂಬ ಹೆಮ್ಮೆ ಮನಸ್ಸಿನಲ್ಲಿ.

ಬೇರೆ ಬೇರೆ ಶಾಲಾ ಚಟುವಟಿಕೆಗಳಲ್ಲಿ ಅಥವಾ ಹೊರಗಡೆ ಹೋಗುವ ಸಂದರ್ಭ ಬಂದರೆ ಬೇರೆ ಕೆಲಸ ಒತ್ತಡ ಇದ್ದರೂ ಸಹ ಅದನ್ನು ಬಿಟ್ಟು ನನ್ನ ಹಿಂದೆ ನಿಲ್ಲುತ್ತಾರೆ. ನಾನು ಊಟ ಮಾಡಿದ ಮೇಲೆ ಅಪ್ಪ ತಮ್ಮ ಊಟ ತಿನ್ನುವುದು. ನಿಜ ಹೇಳಬೇಕಾದರೆ ನಾನು ಅಪ್ಪನ ಛಡಿಯೇಟು ನೋಡಿಲ್ಲ. ಆದರೆ ಅವರ ಸಿಟ್ಟು ನೋಡಿದ್ದೇನೆ. ಅದರಲ್ಲಿ ಎಲ್ಲವೂ ಅರ್ಥವಾಗುದೆ. ಮನಸು ಮೃದು. ಆದರೆ ಎಲ್ಲಾ ತಪ್ಪು ಸಂದರ್ಭದಲ್ಲಿ ತಿದ್ದಿ ಬುದ್ಧಿ ಹೇಳಿದ್ದಾರೆ. ನಡುವಳಿಕೆ ಮತ್ತು ನೀತಿ ಪಾಠ ಕಲಿಸುತ್ತಾರೆ. ಸರಿಯಾದ ಮಾರ್ಗದರ್ಶನ ನೀಡಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೆ ಮಾಡುತ್ತಾರೆ.

ಅಪ್ಪ ನನ್ನ ನಿಜವಾದ ಹೀರೋ ಮತ್ತು ನನ್ನ ಜೀವನದಲ್ಲಿ ಅತ್ಯಂತ ವಿಶೇಷ ವ್ಯಕ್ತಿ. ಅವರು ಮಾಡುವಂತಹ ಕೆಲಸವೇ ನನಗೆ ಸ್ಫೂರ್ತಿ. ಮನೆಯಲ್ಲಿರುವ ಮನೆಯ ಕೆಲಸದವರಿಂದ ಹಿಡಿದು ಯಾರೇ ಕಷ್ಟ ಎಂದರೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಇದನ್ನು ನಾಣು ಸಹ ನೋಡುತ್ತಾ ಬೆಳೆಯುತ್ತಿದ್ದೇನೆ. ನಮ್ಮ ಸಹಪಾಠಿಗಳು ಯಾವುದೇ ಸಹಾಯ ಕೇಳಿದಲ್ಲಿ ಆ ಗುಣ ನನ್ನಲ್ಲಿ ಇದೇ. ನನ್ನ ತಂದೆ ಗುರಿ ಮುಟ್ಟಿಸುವ ಬೆಳಕಾಗಿದ್ದಾರೆ. ಅವರ ಪ್ರೀತಿ ಜೇನಿಗಿಂತಲೂ ಸಿಹಿ. ಲವ್ ಯು ಅಪ್ಪಾ.

- ಎ.ಕೆ. ಮೋಕ್ಷ, ೧೦ನೇ ತರಗತಿ, ಕಾವೇರಿ ಶಾಲೆ, ವೀರಾಜಪೇಟೆ.ಅಪ್ಪ ಎಂದರೆ ಪಂಚಪ್ರಾಣ

ಅಪ್ಪ ಎಂದರೆ ನನಗೆ ಪಂಚಪ್ರಾಣ. ಹೆಗಲಲ್ಲಿ ನನ್ನ ಹೊತ್ತು, ಬೆನ್ನಲ್ಲಿ ಕೂಸುಮರಿ ಮಾಡಿ, ಮಕ್ಕಳ ಏಳಿಗೆಗಾಗಿ ಹಗಲು-ರಾತ್ರಿ, ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ದುಡಿದು ಮಕ್ಕಳ ಭವಿಷ್ಯಕ್ಕಾಗಿ ತನ್ನ ಹೊಟ್ಟೆ-ಬಟ್ಟೆ ಕಟ್ಟಿ ತನ್ನ ಬದುಕನ್ನೇ ಮುಡಿಪಾಗಿಡುವ ಅಪ್ಪನ ಶ್ರಮವನ್ನು ನಾವು ಅರಿತುಕೊಳ್ಳದಿದ್ದರೆ ಹೊಟ್ಟೆಯಲ್ಲಿ ಹುಟ್ಟಿ ಏನು ಪ್ರಯೋಜನ. ಮಕ್ಕಳ ಏಳಿಗೆಯಲ್ಲೇ ಸಂತಸ ಕಾಣುವ ಅಪ್ಪನ ಪ್ರೀತಿಗೆ ಮಕ್ಕಳು ಬೆಲೆ ಕಟ್ಟಲಾದೀತೇ?

ಹೆತ್ತವರ ಋಣ ಮಕ್ಕಳಾದ ನಾವು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದು. ಆದರೆ ಅವರ ಬದುಕಿನುದ್ದಕ್ಕೂ ಅವರಿಗೆ ನೋವಾಗದಂತೆ ಪ್ರೀತಿ, ಮಮತೆ, ವಿಶ್ವಾಸದಿಂದ ಆರೈಕೆ ಮಾಡಿ ಅವರಿಗೆ ಯಾವ ಸಮಸ್ಯೆಯೂ ಬಾರದಂತೆ ನೋಡಿಕೊಳ್ಳಬೇಕು. ಅದು ಮಕ್ಕಳಾದ ನಮ್ಮ ಕರ್ತವ್ಯ. ಅಪ್ಪಂದಿರ ದಿನದಂದು ಎಲ್ಲಾ ರೀತಿಯಲ್ಲೂ ನಮಗಾಗಿ ಪರಿಶ್ರಮಪಟ್ಟ ಅವರ ತ್ಯಾಗಕ್ಕೆ ಇದೇ ನಾವು ಕೊಡುವ ಉಡುಗೊರೆ. ಅವರ ಇಳಿ ವಯಸ್ಸಿನಲ್ಲಿ ಅವರು ಬೇರೇನೂ ಬಯಸರು. ಮಕ್ಕಳ ಪ್ರೀತಿಯೇ ಹೆತ್ತವರಿಗೆ ಆಧಾರ. ತಂದೆ-ತಾಯಿಯರನ್ನು ಅವರ ವೃದ್ಧಾಪ್ಯದಲ್ಲಿ ನಿಂದಿಸಿ ಯಾರೂ ದೂರ ಮಾಡದಿರಿ. ಐ ಲವ್ ಯೂ ಅಪ್ಪ.

- ಅಜ್ಜಾಮಾಡ ಆಯ್ಯುಷ್ ಅಪ್ಪಯ್ಯ, ೯ನೇ ತರಗತಿ, ಕಾನೂರು.ಅಪ್ಪನೆಂಬ ಅಗಾಧ ಪ್ರೀತಿಯ ಭಂಡಾರ

ಅಪ್ಪ ಎಂಬ ಪದವೇ ಅತ್ಯದ್ಭುತ. ಅಮ್ಮ ತುತ್ತು ಕೊಟ್ಟು ಮುದ್ದು ಮಾಡಿ ಲಾಲಿ ಹೇಳಿ ಮಲಗುವವರೆಗೂ ಪ್ರೀತಿಯ ಧಾರೆ ಹರಿಸುತ್ತಾಳೆ. ಆದರೆ ಅಪ್ಪನಿಗೆ ಅಮ್ಮನಷ್ಟು ಮುದ್ದು ಮಾಡಲು ಬರದಿದ್ದರೂ ಜೋಪಾನ ಮಾಡುವ ಮಕ್ಕಳ ಬೇಕು ಬೇಡಗಳನ್ನು ಗಮನಿಸಿ ಪೂರೈಸುವ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಾನೆ. ನನಗೆ ಅಪ್ಪನೇ ಬೆಸ್ಟ್ ಫ್ರೆಂಡ್. ಶಾಲೆಯಲ್ಲಿ ನಾನೇನು ಮಾಡಿದೆನೆಂದು, ಅಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಅಮ್ಮನ ಜೊತೆ ಹೇಳಲು ಮರೆತರೂ ಅಪ್ಪನಲ್ಲಿ ಹೇಳಲೇಬೇಕು. ಎಷ್ಟೇ ಕೆಲಸದ ಒತ್ತಡವಿದ್ದರೂ ತೋರ್ಪಡಿಸದೆ ಸಾವಧಾನವಾಗಿ ಕೇಳುವರು. ನನಗೇನಾದರೂ ಆರೋಗ್ಯ ಸರಿಯಿಲ್ಲ ದಾಗ ತುಂಬಾ ಚಡಪಡಿಸುತ್ತಾರೆ. ಪ್ರತೀ ಹುಟ್ಟುಹಬ್ಬದಲ್ಲೂ ಹೊಸ ಬಟ್ಟೆ, ಸರ್‌ಪ್ರೆöÊಸ್ ಗಿಫ್ಟ್ ಕೊಟ್ಟು ನನ್ನ ಖುಷಿಯಲ್ಲಿ ಅವರು ಭಾಗಿಯಾ ಗುತ್ತಾರೆ. ನಾನೇನಾದರೂ ತಪುö್ಪ ಮಾಡಿದಾಗ ಸಮಾಧಾನದಲ್ಲೇ ತಪ್ಪನ್ನು ತಿಳಿಸಿ ತಿದ್ದಿ ಬುದ್ದಿ ಹೇಳುತ್ತಾರೆ. ಅಪರೂಪಕ್ಕೊಮ್ಮೆ ತಾಳ್ಮೆ ತಪ್ಪಿ ನನಗೆ ಬಯ್ಯುವಾಗ ನಾನು ಬೇಜಾರು ಮಾಡಿಕೊಂಡರೆ ಸ್ವಲ್ಪ ಹೊತ್ತಲ್ಲೇ ಪಶ್ಚಾತ್ತಾಪ ಪಡುತ್ತಾ ಮಗುವನ್ನು ಸಂತೈಸುವAತೆ ಸಮಾಧಾನಿಸುತ್ತಾರೆ. ಎಲ್ಲಿಯಾದರೂ ಹೊರ ಹೋದಾಗ ಜೊತೆಯಲ್ಲಿ ಬರುತ್ತಿದ್ದರೆ ಸೆಕ್ಯೂರ್ ಫೀಲ್. ಓದು, ಪಠ್ಯೇತರ ಕಾರ್ಯ ಯೋಜನೆ ಎಲ್ಲದಕ್ಕೂ ಮಾರ್ಗ ದರ್ಶನ ಕೊಟ್ಟು ಪ್ರೋತ್ಸಾಹ ನೀಡುವ ಅಗಾಧ ಪ್ರೀತಿಯ ಭಂಡಾರ ನೀನೇ ಅಪ್ಪಾ... ನಿಮಗೆ ‘ಅಪ್ಪಂದಿರ ದಿನದ ಶುಭಾಶಯಗಳು’.

- ಕುಕ್ಕುನೂರು ಸೋಹಿಲ ಮನೋಜ್, ೧೦ನೇ ತರಗತಿ, ಫಾತಿಮಾ ಕಾನ್ವೆಂಟ್ ಹೈಸ್ಕೂಲ್, ಕುಶಾಲನಗರ.ನನ್ನ ಅಪ್ಪ ಸೂಪರ್ ಮ್ಯಾನ್

ಅಪ್ಪ ಎಂದರೆ ನನಗೆ ಬಹಳ ಇಷ್ಟ. ಅಪ್ಪ ನನ್ನ ಪಾಲಿನ ದೇವರು. ಮನೆ, ತೋಟ, ಆಫೀಸು ಎಲ್ಲವನ್ನೂ ನಿರ್ವಹಿಸುವ ನನ್ನ ಅಪ್ಪನೇ ನಮಗೆಲ್ಲಾ ಸೂಪರ್ ಮ್ಯಾನ್.

ನಾನು, ನನ್ನ ತಮ್ಮ ಮತ್ತು ನನ್ನಮ್ಮ ಕೇಳಿದನ್ನೆಲ್ಲಾ ನಮಗೆ ಅಪ್ಪ ಕೊಡಿಸುತ್ತಾರೆ. ನನ್ನ ಅಪ್ಪ ನನ್ನನ್ನು ಮಾತ್ರವಲ್ಲದೆ ನನ್ನ ನೆಚ್ಚಿನ ನಾಯಿ ಪೂಕನನ್ನೂ ಸಹ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪ್ರತಿದಿನ ರಾತ್ರಿ ಮಲಗುವಾಗ ಅಪ್ಪ ನನ್ನನ್ನು ಅಪ್ಪಿಕೊಂಡು ಮಲಗದಿದ್ದರೆ ನನಗೆ ನಿದ್ರೆಯೇ ಬರುವುದಿಲ್ಲ. ಅಪ್ಪ ನಮಗಾಗಿ ಸರ್ವಸ್ವವನ್ನೂ ನೀಡಿದ್ದಾರೆ. ಅದಕ್ಕಾಗಿ ಅಪ್ಪನೆಂದರೆ ನನಗೆ ಪಂಚಪ್ರಾಣ. ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಅಂದಹಾಗೆ ಜೂನ್ ೧೦ ನನ್ನ ಅಪ್ಪನ ಬರ್ತ್ಡೇ. ಅಪ್ಪಾ... ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.

- ಧೃತಿ ಬಿ.ಡಿ., ೬ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಯೋಧರಾಗಿರುವುದು ಹೆಮ್ಮೆ

ಪ್ರಪಂಚದಲ್ಲಿ ಕುಟುಂಬಕ್ಕೆ ಅಪ್ಪ ಎಲ್ಲವೂ ಆಗಿರುತ್ತಾರೆ. ಅಪ್ಪ ತನ್ನ ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ಮುಡಿಪಾಗಿರಿಸುತ್ತಾರೆ. ಪಪ್ಪ ಎಂದರೆ ನನಗೆ ತುಂಬಾ ಪ್ರೀತಿ. ಅವರು ಭಾರತದ ಯೋಧರಾಗಿ ಸೇವೆಯಲ್ಲಿದ್ದಾರೆ. ಇಂತಹ ಯೋಧರಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ತುಂಬಾ ಹೆಮ್ಮೆಯ ವಿಷಯ. ಐ ಲವ್ ಯೂ ಪಪ್ಪ.

- ಬಿ.ಎ. ಚೇತನ್ಯ, ೪ನೇ ತರಗತಿ, ಶಾಂತಿನೀಕೇತನ ಶಾಲೆ, ಕೊಡಗರಹಳ್ಳಿ.ಪ್ರೀತಿಯ ಮಾಣಿಕ್ಯ ಅಪ್ಪ

ಪಪ್ಪ ನಿನ್ನ ಬರುವಿಕೆಗಾಗಿ ಕಾದು ಕುಳಿತು ನಿನ್ನ ಕೆಲಸದ ದಿನಗಳ ನಡುವಿನ ರಜೆಗಾಗಿ ಕಾಯುತಿರುತ್ತೇವೆ ನಾನು ಹಾಗೂ ತಮ್ಮ. ಬರುವಾಗ ನೀ ತರುವ ಖಾರ ತಿಂಡಿ ನಮಗೆ ಬಹಳ ಇಷ್ಟವಾಗುತದೆ... ನಮ್ಮ ಹಲ್ಲು, ಹೊಟ್ಟೆಯ, ಕಾಳಜಿಗಾಗಿ ಸಿಹಿಯನ್ನು ತರದೆ ಚಿಪ್ಸ್ಗಳಂತಹ ತಿಂಡಿ ತರುವುದು ಒಂದು ರೀತಿಯಲ್ಲಿ ಒಳ್ಳೆಯದೆ. ಅಪ್ಪ ನಿಮ್ಮ ಜೊತೆ ಊರು ಊರು ಸುತ್ತಲು ಬಸ್‌ನಲ್ಲಿ ಬರಲು ಆಸೆ. ಆದರೆ ನಿನ್ನ ಕೆಲಸ ಸರ್ಕಾರದ್ದು. ಆದರಿಂದ ಸ್ವಲ್ಪ ಯೋಚಿಸುತೇನೆ. ನೀನು ಅಮ್ಮ, ಅವ್ವ, ತಾತ ಹಾಗೂ ನಮ್ಮ ಮೇಲಿಟ್ಟಿರುವ ಕಾಳಜಿ ನನಗೆ ಖುಷಿ ತರುತ್ತದೆ. ನಾವು ಕೇಳಿದೆಲ್ಲಾ ಕೊಡಿಸುತ್ತೀಯ. ಹಾಗೆ ನಮ್ಮೊಂದಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಪ್ರೀತಿ ಕೊಡುತ್ತೀಯ. ರಾತ್ರಿ ಮಲಗೋ ಮುನ್ನ ಅಮ್ಮನ ಫೋನ್ ರಿಂಗಾದಾಗ ನಿನ್ನದೇ ಕರೆ ಇರಬಹುದು ಎಂದು ನಾನು ತಮ್ಮ ಕಾಯುತಿರುತ್ತೇವೆ. ದಿನನಿತ್ಯ ರಾತ್ರಿ ವೇಳೆ ನಿನ್ನ ಬಳಿ ಮಾತನಾಡದೆ ಮಲಗುವುದು ನನಗೆ ಸರಿಯಾಗುವುದಿಲ್ಲ. ಫೋನ್ ಕರೆ ಯಾವತ್ತು ಮಾಡದೆ ಇರಬೇಡ ಪಪ್ಪ. ಓದಿನ ವಿಷಯ, ನಮ್ಮ ದಿನನಿತ್ಯದ ವಿಷಯ ನಿನಗೆ ತಿಳಿಸಲು ಕಾಯುತಿರುತ್ತೇನೆ. ನೆಂಟರ ಮನೆಗೆ ಹೋಗುವಾಗ, ಮದುವೆಗಳಿಗೆ ಹೋಗುವಾಗ ನಿನ್ನ ನೆನಪು ತುಂಬಾ ಆಗುತ್ತೆ. ಆದರೆ ನಿನಗೆ ರಜೆ ಅದೇ ಸಮಯಕ್ಕೆ ಸಿಗದಿರುವುದು. ಸ್ವಲ್ಪ ಬೇಸರ ತರುತ್ತದೆ. ಇರಲಿ ನಮಗಾಗಿ ನಿನ್ನ ದುಡಿಮೆ, ನಮ್ಮ ಮುಂದಿನ ಜೀವನ ಕುಶಿಯಿಂದ ಸಂಭ್ರಮದಿ ಅನುಭವಿಸಲು ಎಂದು ಅರ್ಥ ಮಾಡಿಕೊಳ್ಳ ಬಲ್ಲೆನು. ನಿನ್ನನ್ನು ಹಾಗೂ ತಮ್ಮ, ಅಮ್ಮನನ್ನು ನಾನು ನನ್ನ ದಿನಗಳಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುವೆ ಎಂದು ಪ್ರಮಾಣ ಮಾಡುತ್ತೇನೆ.

- ಐಮುಡಿಯಂಡ ಪ್ರನತ್ ಕುಟ್ಟಪ್ಪ, ೬ನೇ ತರಗತಿ, ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ.ಅಪ್ಪ ಎಂಬ ಅಕ್ಷರವ ಹೇಗೆ ವರ್ಣಿಸಲಿ...?

ಪ್ರೀತಿಯ ಮಾಣಿಕ್ಯ ಅಪ್ಪ. ನನ್ನ ಅಪ್ಪ ಎಂದರೆ ನನಗೆ ತುಂಬಾ ಇಷ್ಟ

ಅವರು ನನ್ನನ್ನು ಇಷ್ಟಪಡುತ್ತಾರೆ. ನಾನು ನನ್ನ ಅಪ್ಪನ ಮುದ್ದಿನ ಮಗಳು. ನನ್ನ ಅಪ್ಪ ನನ್ನ ಎಲ್ಲಾ ಕಷ್ಟಗಳನ್ನು ಈಡೇರಿಸುತ್ತಾರೆ. ನನಗೆ ಹುಷಾರಿಲ್ಲದೆ ಇದ್ದಾಗ ನನ್ನ ಅಪ್ಪ ನನ್ನನ್ನು ಮಗು ಹಾಗೆ ಕಾಳಜಿ ವಹಿಸುತ್ತಾರೆ.

ರಾತ್ರಿಯಲ್ಲಿ ಎಚ್ಚರ ಇದ್ದು ನನ್ನನ್ನು ನೋಡಿಕೊಳ್ಳುತ್ತಾರೆ. ಬೇಸಿಗೆ ರಜಾದಲ್ಲಿ ನನ್ನ ಮತ್ತು ನನ್ನ ಅಣ್ಣ ನನ್ನ ಹೊರಗೆ ಕರೆದುಕೊಂಡು ಹೋಗುತ್ತಾರೆ. ಅಪ್ಪ ನನಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ತಂದು ಕೊಡುತ್ತಾರೆ. ರಾತ್ರಿ ಎಷ್ಟೇ ಹೊತ್ತಿಗೂ ಮನೆಗೆ ಬಂದರೂ ಸಹ ನನಗೆ ಮುತ್ತು ಕೊಟ್ಟು ಮಲಗುತ್ತಾರೆ. ಅಪ್ಪ ನಮಗಾಗಿ ತುಂಬಾ ಶ್ರಮಿಸುತ್ತಾರೆ. ಓದಿನ ಜೊತೆಗೆ ದೊಡ್ಡವರೊಂದಿಗೆ ಹೇಗೆ ವರ್ತಿಸಬೇಕು ಮತ್ತು ಗೌರವಿಸಬೇಕು ಎಂದು ಹೇಳಿಕೊಡುತ್ತಾರೆ. ನನ್ನ ಜನ್ಮದಿನದಂದು ಮೊದಲು ನನ್ನ ಅಮ್ಮನಿಗೆ ಕಾಲಿಗೆ ನಮಸ್ಕರಿಸಬೇಕು ಎಂದು ಹೇಳಿಕೊಡುತ್ತಾರೆ. ಅಪ್ಪ ನನ್ನ ಪಕ್ಕದಲ್ಲಿ ಇದ್ದರೆ ನೂರು ಆನೆ ಬಲ ಇದ್ದಂತೆ. ಅಪ್ಪ ನೀವು ನಮಗಾಗಿ ಹರಿಸುವ ಒಂದೊAದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ. ನಿನ್ನಂತ ಅಪ್ಪ ಇಲ್ಲ ಒಂದೊAದು ಮಾತು ಬೆಲ್ಲ.

ನನ್ನ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು.

- ಎಂ.ಎ. ಮಧುರ, ೫ನೇ ತರಗತಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ.ಅಪ್ಪ ನನ್ನ ಹೆಮ್ಮೆ

ನನ್ನ ಅಪ್ಪ ನನಗೆ ಜೋರೂ ಮಾಡುತ್ತಾರೆ ಮತ್ತೆ ಮುದ್ದು ಮಾಡುತ್ತಾರೆ. ನನ್ನ ಅಣ್ಣ ಮುಖುಲ್ ನಂಜಪ್ಪ ದೊಡ್ಡವನು. ಅವನದ್ದು ಡಿಗ್ರಿ ಆಗಿದೆ. ಅವನಿಗೆ ಕೋವಿಯಲ್ಲಿ ಗುಂಡು ಹೊಡೆಯಲು... ಸ್ಕೂಟರ್ ಓಡಿಸಲು, ಕಾರು ಓಡಿಸಲು ಕಲಿಸಿದ್ದು ಅಪ್ಪ. ನನಗೂ ಅಣ್ಣ ಸಣ್ಣ ಕೋವಿ ಕೊಟ್ಟು ಗುಂಡು ಹೊಡೆಯಲು ಕಲಿಸಿದ್ದಾರೆ. ಅಪ್ಪ ಸ್ಕೂಟಿ ಓಡಿಸಲು ಆಗಾಗ ಕಲಿಸಿಕೊಡುತ್ತಾರೆ.

ನನ್ನ ಹೆಸರು ಏನೂ ಎಂದು ತುಂಬಾ ಜನ ಕೇಳುತ್ತಾರೆ. ನಾನು ರಸಜ್ಞ ಅಂತ ಹೇಳಿದರೆ ಅವರಿಗೆ ನನ್ನ ಹೆಸರನ್ನು ಗೊತ್ತಾಗದೆ ರಸನ್ನ ಅಂತ ಹೇಳುತ್ತಾರೆ. ಇಲ್ಲಾಂದ್ರೆ ರಸೂ... ರಸಗುಲ್ಲಾ ಅಂತೆಲ್ಲಾ ಕರಿತಾರೆ.

ತುಂಬಾ ಜನ ನನಗೆ ಈ ಹೆಸರು ಯಾರು ಇಟ್ಟಿದ್ದು, ರಸಜ್ಞ ಎಂದರೆ ಏನೂ ಅಂತ ಕೇಳಲು ಸುರು ಮಾಡಿದರು.

ನಾನು ಆಗ ಒಂದನೇ ಕ್ಲಾಸು. ಇದೆಲ್ಲಾ ಕೇಳಿ ಕೇಳಿ ಸುಸ್ತಾಗಿತ್ತು. ಒಂದು ದಿನ ಅಮ್ಮನನ್ನು ಕೇಳಿದೆ. ಅಮ್ಮ ನನಗೆ ರಸಜ್ಞ ಹೆಸರು ಯಾರು ಹೇಳಿದ್ದು, ಅಮ್ಮ ಹೇಳಿದಳು ನನ್ನಪ್ಪ ಅಂತ. ರಸಜ್ಞ ಅಂದರೆ ಏನೂ ಅಂತ ಕೇಳಿದೆ. ಅಮ್ಮ ಹೇಳಿದಳು, ಕಾವ್ಯ ಸ್ವಾರಸ್ಸವನ್ನು ಬಲ್ಲವನು. ಆಮೇಲೆ ನನ್ನ ರಸಜ್ಞ ಅರ್ಥ ಕೇಳಿದ ನನ್ನ ಪ್ರಿನ್ಸಿಪಾಲ್, ನೆಂಟರು ಎಲ್ಲರಿಗೂ ನನ್ನ ಹೆಸರಿನ ಅರ್ಥವನ್ನು ಹೇಳುವಾಗ ತುಂಬಾ ಕುಶಿ ಆಗುತ್ತದೆ. ದೆಟ್ ಈಸ್ ಮೈ ಅಪ್ಪ. ಅಪ್ಪ ನನಗೆ ಹಣ್ಣು ಮರಗಳನ್ನು ಹತ್ತಿಸಿ ಹಣ್ಣು ತಿನ್ನುವುದನ್ನು ಕಲಿಸಿದ್ದಾರೆ. ಸೈಕಲ್ ತುಳಿಯಲೂ ಅಪ್ಪಾನೇ ಕಲಿಸಿದ್ದು. ಮದುವೆ ಮಕ್ಕಳಿಗೆ ಹೆಸರಿಡುವುದು. ಅಲ್ಲದೆ ಬೇರೆ ಬೇರೆ ಕಡೆ ಒಂದಷ್ಟು ಜನ ನನ್ನ ಅಪ್ಪನ್ನು ನಿನ್ನಪ್ಪ ಬ್ರಿಲ್ಲಿಯಂಟು ತುಂಬಾ ಟ್ಯಾಲೆಂಟು ಅಂತ ಹೇಳುವಾಗ ಕುಶಿ ಆಗಿದೆ.

ಆದರೆ ಅವರು ಕುಡಿತಾರೆ ಅಂತ ಕೊನೆಗೆ ಹೇಳುವಾಗ ಮನಸ್ಸಿಗೆ ಬೇಜಾರಗುತ್ತೆ. ನಾನೀಗ ೮ನೇ ಕ್ಲಾಸು. ಅಪ್ಪ ಮಡಿಕೇರಿ ಆಕಾಶ ವಾಣಿಯಲ್ಲಿ ನ್ಯೂಸ್ ರೀಡರ್, ಶಾರ್ಟ್ ಮೂವಿ ಮೇಕರ್, ಒನ್ ಮಿನಿಟ್ ಮೂಕಿ ಮೂವಿ ಮೇಕರ್, ಮರಳು ಕಲಾವಿದ ಹೀಗೆ ಬಹಳಷ್ಟು ವಿಷಯಗಳನ್ನು ಅಪ್ಪನ ಪರಿಚಯಸ್ತ ನನ್ನ ಬಳಿ ಹೇಳಿದ್ದಾರೆ. ನನ್ನ ಪ್ರೀತಿಯ ಅಪ್ಪ ನನ್ನ ಹೆಮ್ಮೆ.

- ಅಲ್ಲಾರಂಡ ರಸಜ್ಞ ಮಾದಪ್ಪ, ೮ನೇ ತರಗತಿ, ಜನರಲ್ ತಿಮ್ಮಯ್ಯ, ಶಾಲೆ, ಮಡಿಕೇರಿ.ನಮ್ಮಪ್ಪ ದೇಶದ ಆಸ್ತಿ

ನಮ್ಮ ಅಪ್ಪ ನಮ್ಮ ಹೀರೊ. ನಮ್ಮ ಅಪ್ಪ ಒಬ್ಬ ದೇಶದ ಸೈನಿಕ. ನಮಗೆ ಹೆಮ್ಮೆಯ ವಿಷಯ ನಾವು ಸೈನಿಕನ ಮಕ್ಕಳು. ಹೆಚ್ಚು ಹೇಳಬೇಕೆಂದರೆ ನಮ್ಮಪ್ಪ ದೇಶದ ಆಸ್ತಿ. ಲವ್ ಯು ಅಪ್ಪಾ.

- ಮಾಜಲ್ಗದ್ದೆ ಲಿಷ್ಮ ಮತ್ತು ಋಷಿಲ್, ಕಾಕೋಟುಪರಂಬು, ವೀರಾಜಪೇಟೆ.ನಾನು ನೋಡಿದ ಮೊದಲ ವೀರ

ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೊ ಜಾದೂಗಾರ ಅಪ್ಪ. ನನ್ನ ಅಪ್ಪ ಎಂದರೆ ನನಗೆ ತುಂಬಾ ಪ್ರೀತಿ. ನನ್ನ ಅಪ್ಪನೂ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾರೆ. ನನ್ನ ಅಪ್ಪ ಎಂದರೆ ಧೈರ್ಯ. ನನ್ನ ಅಪ್ಪ ಚಿಕ್ಕಂದಿನಿAದ ಇಲ್ಲಿಯತನಕ ನಾನು ಏನೇ ಕೇಳಿದರೂ ಇಲ್ಲಾ ಎನ್ನದೆ ರಾತ್ರಿಯಾದರೂ ಅದನ್ನು ತರುತ್ತಾರೆ. ನನ್ನ ಅಮ್ಮ ಮತ್ತು ಸ್ನೇಹಿತರು ಹೇಳುತ್ತಾರೆ ನಾನು ನನ್ನ ಅಪ್ಪನ ಹಾಗೆ. ಇದನ್ನು ಕೇಳಿದಾಗ ನನಗೆ ಸಂತೋಷವಾಗುತ್ತದೆ. ಒಂದು ದಿನ ನಾನು ನನ್ನ ಅಪ್ಪನನ್ನು ಕೇಳಿದೆ ನಾವು ಆನೆ ನೋಡಲು ಹೋಗೋಣ. ಆಗ ಅಮ್ಮ ಬೇಡ ಹೇಳಿದರು. ಆದರೂ ನನ್ನನ್ನು ಕುಶಾಲನಗರ ದಲ್ಲಿರುವ ದುಬಾರೆಗೆ ಕರೆದುಕೊಂಡು ಹೋದರು. ಹೀಗೆ ಅನೇಕ ಬಾರಿಯಾಗಿದೆ. ನನ್ನ ಅಪ್ಪ ಶ್ರಮಜೀವಿ.

- ಕಾವೇರಿ ಎನ್.ಎಸ್., ೫ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ತಂದೆ ನನಗೆ ಸ್ಫೂರ್ತಿ

ಮೊದಲ ದಿನದಿಂದಲೂ ನನ್ನ ತಂದೆಯೇ ನನಗೆ ಸ್ಫೂರ್ತಿ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅವರ ವರ್ತನೆ ಮತ್ತು ವ್ಯಕ್ತಿತ್ವ ನನ್ನನ್ನು ಒಬ್ಬ ವ್ಯಕ್ತಿಯಾಗಿ ರೂಪಿಸಿದೆ. ಅಂತೆಯೇ ಅವರು ತನ್ನದೇ ಆದ ಸಣ್ಣ ರೀತಿಯಲ್ಲಿ ಪ್ರಪಂಚದ ಮೇಲೆ ಭಾರಿ ಪ್ರಭಾವವನ್ನು ಬೀರುತ್ತಾರೆ.

ನನ್ನ ತಂದೆ ನನಗೆ ಪ್ರೀತಿಯ ಅರ್ಥವನ್ನು ಗುಲಾಬಿಗಳ ರೂಪದಲ್ಲಿ ಕಲಿಸಿದರು. ಅದನ್ನು ಅವರು ನನ್ನ ತಾಯಿಗೆ ಪ್ರತಿದಿನ ತಪ್ಪದೆ ಉಡುಗೊರೆಯಾಗಿ ನೀಡುತ್ತಾರೆ. ಈ ಸ್ಥಿರತೆ ಮತ್ತು ವಾತ್ಸಲ್ಯವು ನಮ್ಮೆಲ್ಲರನ್ನು ಒಂದೇ ರೀತಿಯಲ್ಲಿ ಪರಿಗಣಿಸಲು ಪ್ರೋತ್ಸಾಹಿಸುತ್ತದೆ. ಜೀವನದ ಬಗ್ಗೆ ನನ್ನ ಎಲ್ಲಾ ಜ್ಞಾನವನ್ನು ನಾನು ನನ್ನ ತಂದೆಯಿAದ ಪಡೆದುಕೊಂಡಿದ್ದೇನೆ.

- ನನ್ನ ತಂದೆಯ ಬಗ್ಗೆ ಬರೆಯಲು ಅವಕಾಶಕೊಟ್ಟ ನಿಮಗೆ ನನ್ನ ವಂದನೆಗಳು.

- ಬಿ.ಎಂ. ಶಮಿಕ, ೭ನೇ ತರಗತಿ.ಮಿಸ್ ಯೂ ಪಪ್ಪಾ...

ಪ್ರತಿಯೊಬ್ಬ ಮಕ್ಕಳಿಗೆ ಅಪ್ಪ-ಅಮ್ಮ ಎಂದರೆ ತುಂಬಾ ಪ್ರೀತಿ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ತುಸು ಹೆಚ್ಚು ಪ್ರೀತಿ. ಅದಕ್ಕೆ ನಾನೂ ಹೊರತಾಗಿಲ್ಲ. ಅಮ್ಮನಿಗಿಂತ ಹೆಚ್ಚಾಗಿ ತಂದೆ ಪ್ರೀತಿಯಲ್ಲಿ ಬೆಳೆದ ನನಗೆ ನನ್ನ ಅಪ್ಪ ಎಂದರೆ ಜೀವ. ಸ್ಕೂಲ್‌ಗೆ ನನ್ನ ರೆಡಿ ಮಾಡಿ ನಾನು ಬರುವ ತನಕ ಕಾಯುವ ನನ್ನ ಅಪ್ಪನ ನಾನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗಿಂತ ಹೆಚ್ಚಾಗಿ ನನ್ನ ಮುದ್ದು ಮಾಡುವ ನನ್ನ ಅಪ್ಪ ಅಷ್ಟು ಬೇಗ ದೇವರ ಪಾದ ಸೇರುತ್ತಾರೆ ಅನ್ನೋದು ನನಗೆ ಇನ್ನೂ ಅರಗಿಸುವುದಕ್ಕೆ ಆಗುವುದಿಲ್ಲ. ಪಪ್ಪಾ ನೀವು ನನ್ನ ಮೇಲೆ ಇಟ್ಟಿರುವ ಕಾಳಜಿ ಇನ್ನೂ ಮರೆತಿಲ್ಲ. ನೀವೂ ಹೇಳಿಕೊಟ್ಟಿರುವ ಬದುಕಿನ ಪಾಠ ಇನ್ನೂ ನೆನಪಿದೆ. ಸದಾ ನೀವು ನನ್ನ ಮನಸಲ್ಲಿ ಇರ್ತಿರ. ಮಿಸ್ ಯು ಸೋ ಮಚ್ ಪಪ್ಪಾ.

- ವಿಶ್ಮಾ ದಯಾನಂದ ರೈ, ೬ ತರಗತಿ, ನ್ಯಾಷನಲ್ ಅಕಾಡೆಮಿ ಸ್ಕೂಲ್, ಅತ್ತೂರು, ಪಾಲಿಬೆಟ್ಟ.ಅಪ್ಪಾ ಎಂದರೆ ತುಂಬಾ ಪ್ರೀತಿ

ನನಗೆ ನನ್ನ ಅಪ್ಪ ಎಂದರೆ ತುಂಬಾ ಪ್ರೀತಿ. ಹಾಗೆಯೇ ಅವರಿಗೂ ಕೂಡ ಮಕ್ಕಳೆಂದರೆ ತುಂಬಾ ಪ್ರೀತಿ. ನನಗೆ ಎಲ್ಲ ವಿಷಯದಲ್ಲಿಯೂ ಕೂಡ ಅವರು ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಪಾಠದಲ್ಲಾಗಲಿ, ಆಟದಲ್ಲಾಗಲಿ, ಹಾಗೆಯೇ ಹಲವು ಸ್ಪರ್ಧೆಗಳಲ್ಲಿ ನನ್ನನ್ನು ಚೆನ್ನಾಗಿ ತಯಾರು ಮಾಡುತ್ತಾರೆ. ನಾನು ತಪ್ಪು ಮಾಡಿದರೆ ಮೊದಲು ಗದರುತ್ತಾರೆ. ಆಮೇಲೆ ನಿಧಾನವಾಗಿ ನನಗೆ ತಿಳಿಹೇಳುತ್ತಾರೆ. ಅಪ್ಪ ಸಂಜೆ ಮನೆಗೆ ಬಂದಮೇಲೆ ನನ್ನ ಜೊತೆ ಹಾಗೂ ನನ್ನ ತಂಗಿ, ತಮ್ಮನ ಜೊತೆ ಆಟವಾಡಿ ಸಮಯ ಕಳೆಯುತ್ತಾರೆ. ನನ್ನ ಅಪ್ಪಾ ನನಗೆ ಹೀರೋ ಇದ್ದ ಹಾಗೆ. ಏಕೆಂದರೆ ಅವರನ್ನು ನೋಡಿ ತುಂಬಾ ವಿಷಯಗಳನ್ನು ಒಳ್ಳೆಯ ಗುಣ, ನೀತಿ, ನಡತೆ, ಶಿಸ್ತು, ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಡುತ್ತಾರೆ. ನನ್ನ ಅಪ್ಪ ಹಾಸ್ಯ ಮಾಡಿ ನಮ್ಮನ್ನೆಲ್ಲಾ ನಗಿಸುತ್ತಾರೆ.

ಪೊಪ್ಪ... ನಮ್ಮನ್ನು ತುಂಬಾ ಜೋಪಾನವಾಗಿ ನೋಡಿ ಕೊಳ್ಳುತ್ತಿರುವ ನಿನ್ನನ್ನು ಅಪ್ಪನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನೀನು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತಾ ಆರೋಗ್ಯವಾಗಿ, ನಗು ನಗುತ್ತಾ ಇರಬೇಕು ಪೊಪ್ಪ.

- ಬಿ.ಡಿ. ಹೇಮಾನ್ಯ, ೫ನೇ ತರಗತಿ, ಜ್ಞಾನಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು.ಪ್ರೀತಿ ಹೊಂದಿರುವ ಜೀವ...

ಮುಂದೆ ಎಷ್ಟೇ ಕೋಪ ತೋರಿಸಿದರೂ..., ಮನದಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ ಜೀವವೇ ತಂದೆ... ತಂದೆಯರ ದಿನದ ಶುಭಾಶಯಗಳು ಅಪ್ಪಾ.