ವೀರಾಜಪೇಟೆ, ಜೂ. ೨೧: ಎಲ್ಲಾ ಭಾಷೆಗಳನ್ನು ಪ್ರೀತಿಸಿ, ಆದರೆ ಕನ್ನಡವನ್ನು ಆರಾಧಿಸಿ, ಪೂಜಿಸಿ ಎಂದು ಖ್ಯಾತ ಗಾಯಕ, ಚಲನಚಿತ್ರ ನಟ ಶಶಿಧರ್ ಕೋಟೆ ಹೇಳಿದರು. ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮರಸ್ಯವೇ ಜೀವನ, ಹಾಗೆಯೇ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಪ್ರೀತಿ, ಭಕ್ತಿ, ನೀತಿ ಇರಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ ಎಂದರು.
ಪ್ರತಿಯೊAದು ಕಲೆಗೆ ಅದರದ್ದೇ ಆದ ಸ್ಥಾನ ಮಾನವಿದೆ. ಎಲ್ಲ ಕಲೆಯೂ ಜೀವನದ ಉಲ್ಲಾಸವನ್ನು ಪಡೆಯಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ, ಪ್ರೇಮಾಂಜಲಿ ಆಚಾರ್ಯ ಹಾಗೂ ಅವರ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲನ್ನು ಹತ್ತಿದ್ದಾರೆ. ಇದು ನಿರಂತರವಾಗಿ ಮುಂದುವರೆಯಲಿ. ಸಾಧನೆ ಶಿಖರಕ್ಕೇರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಧರ್ಮದರ್ಶಿ ಡಾ. ಅಶೋಕ್ ಶೆಟ್ಟಿ ಮಾತನಾಡಿ ಅರಿಷಡ್ವರ್ಗಗಳನ್ನು ಸ್ಥಬ್ಧ ಮಾಡಿ ಏಕಾಗ್ರತೆಯಿಂದ ಕಲೆಯನ್ನು ಅಭ್ಯಸಿಸಬೇಕು, ನಾವು ಮಾಡುವ ಕೆಲಸದಲ್ಲಿ, ಸಾಧನೆಯಲ್ಲಿ ಶ್ರದ್ಧೆ ಇದ್ದರೆ ಮಾತ್ರ ನಾವು ನಿರೀಕ್ಷಿಸಿದ ಗುರಿ ತಲುಪಲು ಸಾಧ್ಯವಾಗುತ್ತದೆ. ಅದಕ್ಕೆ ಇಲ್ಲಿ ನಡೆದಿರುವ ಕಾರ್ಯಕ್ರಮವೇ ಸಾಕ್ಷಿ ಎಂದರು. ಅಂರ್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ ಸಾಧನೆ ಮಾಡುವ ಗುರಿ ನಿರ್ದಿಷ್ಟವಾಗಿರ ಬೇಕು. ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಪ್ರಶಂಸನೀಯ. ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯು ವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ರಂಗಭೂಮಿ ಕಲಾವಿದರಾದ ಬಾಸುಮ ಕೊಡಗು ಹಾಗೂ ಸತೀಶ್ ಆಚಾರ್ಯ ಅವರು ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು.
ರಂಗಭೂಮಿ ಕಲಾವಿದ, ಪತ್ರಕರ್ತ, ನಟ ಕೆಂಚನೂರು ಶಂಕರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಟ್ಯ ಮಯೂರಿ ನೃತ್ಯ ಶಾಲೆಯ ೧೯ ನೇ ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿ ರುವುದು ನಿಜಕ್ಕೂ ಶ್ಲಾಘನೀಯ.
ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಲೆಯ ವತಿಯಿಂದ ಹಲವಾರು ವಿದ್ಯಾರ್ಥಿಗಳನ್ನು ತಯಾರು ಮಾಡಲಾಗಿದೆ. ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರಲ್ಲದೆ ಎಲ್ಲಾ ತಾಲೂಕುಗಳಲ್ಲಿ ಕಲಾಮಂದಿರ ನಿರ್ಮಾಣ ವಾಗಬೇಕು, ಆಸಕ್ತ, ಅಸಹಾಯಕ ಕಲಾವಿದರಿಗೆ ಸಹಾಯ ಹಸ್ತ ನೀಡಬೇಕು, ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ಈ ಸಂದರ್ಭ ಗಾಯಕ ಶಶಿಧರ್ ಕೋಟೆ, ಕಾಂತಾರ ಸಿನಿಮಾ ಖ್ಯಾತಿಯ ಬಾಸುಮ ಕೊಡಗು ಹಾಗೂ ಸತೀಶ್ ಆಚಾರಿ, ಕುಂದಾಪುರದಲ್ಲಿ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ಅಶೋಕ್ ಶೆಟ್ಟಿ, ಮಹೋನಿ ಶೋಭಾ, ಡಾ. ಜ್ಯೋತಿ ಶ್ರೀನಿವಾಸ್, ದಿನಕರ್ ಶೆಟ್ಟಿ, ಸುನೀಲ್ ಮಂಜುನಾಥ್ ರೇವಂಕರ್, ಮಾದಂಡ ತಿಮ್ಮಯ್ಯ, ಪೂಜಾ ರವೀಂದ್ರ, ಶೋಭಾ, ಗಣಪತಿ ಹೋಬಳಿದಾರ್, ಲಕ್ಷö್ಮಣ್ ಸಿ, ಜ್ಞಾನ ರೈ, ಪೋಯಂಗಡ ಅಯ್ಯಪ್ಪ, ರವಿಚಂದ್ರನ್, ಮಹಿಮಾ ಕುಂದಾಪುರ, ಸತೀಶ್ ಕಲ್ಯಾಣಪುರ ಅವರಿಗೆ ಕರುನಾಡ ನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೀರಾಜಪೇಟೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ್ ಕುಮಾರ್, ಸಾಹಿತಿಗಳಾದ ರಜಿತ ಕಾರ್ಯಪ್ಪ ಹಾಗೂ ಪುಷ್ಪಲತಾ ಶಿವಪ್ಪ, ಶಿಕ್ಷಕ ಲವಿನ್ ಲೋಪೇಸ್, ಶಿಕ್ಷಕ ದೀಪಕ್ ವಿ.ಸಿ, ಧರ್ಮದರ್ಶಿ ಬಾಬಾ ಶಂಕರ್, ನೃತ್ಯ ಕಲಾವಿದೆ ಯರಾದ ಎನ್ ನೌಶಿದ, ಕೆ.ಪಿ. ಶ್ರಾವ್ಯ, ಬಿ.ಬಿ. ಸಾನಿದ್ಯ, ಸುರಕ್ಷ ವೈಲಾಯ, ನವ್ಯ ಕೆ.ಪಿ., ಟಿ.ವಿ. ವೈಷ್ಣವಿ, ಸಂಗೀತಗಾರರಾದ ಶ್ರೀನಿವಾಸ್ ಅವರನ್ನು ಸನ್ಮಾನಿಸ ಲಾಯಿತು. ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ನೃತ್ಯ ಶಾಲೆಯ ಟ್ರಸ್ಟಿಗಳು, ಪೋಷಕರು ಉಪಸ್ಥಿತರಿದ್ದರು. ಶ್ರಾವ್ಯ ಹಾಗೂ ನವ್ಯ ಪ್ರಾರ್ಥಿಸಿದರೆ, ಲವಿನ್ ಲೋಪೇಸ್ ಸ್ವಾಗತಿಸಿ, ರಾಜ್ ಸಂಪಾಜೆ ನಿರೂಪಿಸಿದರು.