ವೀರಾಜಪೇಟೆ, ಜೂ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಹೊಸೂರು, ಪಾಲಿಬೆಟ್ಟ, ಚೆನ್ನಯ್ಯನ ಕೋಟೆ ಮಾಲ್ದಾರೆ ಮತ್ತು ಗುಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ನೂತನ ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಗೆ ಅಭಿನಂಧನಾ ಸಭೆಗಳನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಶಾಸಕರು ಸಾರ್ವಜನಿಕರಿಂದ ಸನ್ಮಾನ ಮತ್ತು ಅವಹಾಲುಗಳನ್ನು ಸ್ವೀಕರಿಸಿದರು, ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಶಾಸಕರು, ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಕುಂದು ಕೊರತೆ ಸಭೆ ನಡೆಸಲಾಗುವುದು. ಬೆಟ್ಟದಷ್ಟಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದು ಮುಖ್ಯವಾಗಿದೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡಲು ಸರ್ವರ ಸಹಕಾರ ಬೇಕು ಎಂದು ಕರೆ ನೀಡಿದರು.

ಮಳೆಗಾಲದ ತೀವ್ರತೆಯ ವೇಳೆಯಲ್ಲಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸ್ಥಳದಲ್ಲಿದ್ದು ಜನತೆಯ ಸಂಕಷ್ಟಕ್ಕೆ ಮುಂದಾಗುತ್ತೇನೆ ಎಂದ ಅವರು, ಪಕ್ಷದ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಇಂದು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದು ಎಲ್ಲಾ ಕಾರ್ಯಕರ್ತರ ಪಕ್ಷದ ಗೆಲುವಾಗಿದೆ. ಮುಂದೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲು ತನ್ನೊಂದಿಗೆ. ಕೈಜೋಡಿಸುವಂತೆ ಮನವಿ ಮಾಡಿದರು. ಶಾಸಕರಿಗೆ ಚೆನ್ನಯ್ಯನಕೋಟೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ನೀಡಿದರು. ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರನ್ನು ಉದ್ದೇಶಿಸಿ ಶಾಸಕರು ಮಾತನಾಡಿ ದರು. ಗುಡ್ಲೂರು ಅನಂತನಾಗ ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಮಾಲ್ದಾರೆ ಸಿದ್ಧೇಶ್ವರ ಸಹಕಾರಿ ಧವಸ ಭಂಡಾರದ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ವತಿಯಿಂದ ಮತ್ತು ಹುಂಡಿ ಒಳಮಾಳ ಗ್ರಾಮದ ಶಾದಿ ಮಹಲ್‌ನಲ್ಲಿ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಉಪಾಧ್ಯಕ್ಷ ಅಯೂಬ್, ಪ್ರಮುಖರಾದ ಮಹದೇವದ, ಚೇಕು, ಶಬೀರ್, ವಿವಿಧ ವಲಯಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.