ನಾಪೋಕ್ಲು, ಜೂ. ೨೧: ಇಲ್ಲಿಗೆ ಸಮೀಪದ ಹಳೆ ತಾಲೂಕು ಬದ್ರಿಯಾ ಜುಮಾ ಮಸೀದಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಟಿ.ಎ. ಮೊಹಮ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಸೀದಿಯ ಮದರಸಾ ಸಭಾಂಗಣದಲ್ಲಿ ಜರುಗಿದ ಜಮಾಯತ್ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಬಿ. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎ. ಅಬ್ದುಲ್ ಖಾದರ್, ಸಹ ಕಾರ್ಯದರ್ಶಿಯಾಗಿ ಬಿ.ಎ. ಕಬೀರ್, ಸಮಿತಿ ಸದಸ್ಯರಾಗಿ ಪಿ.ಎಂ. ಇಸ್ಮಾಯಿಲ್, ಬಿ.ಎ. ಹ್ಯಾರಿಸ್, ಎಂ.ಎಚ್. ನೌಶಾದ್, ಎಂ.ಎಸ್. ಷಂಶುದ್ದೀನ್, ಬಿ.ಕೆ. ಗಫೂರ್, ಪಿ.ಎಂ. ನಾಸಿರ್, ಎ.ಎಂ. ಸಲೀಂ, ಎ.ಕೆ. ಯೂಸುಫ್, ಟಿ.ಎ ರಿಯಾಜ್ ಆಯ್ಕೆಯಾಗಿದ್ದಾರೆ.