ಸೊಮವಾರಪೇಟೆ, ಜೂ. ೨೦: ಸೋಮವಾರಪೇಟೆ ಪಟ್ಟಣ ಪಂಚಾ ಯಿತಿ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಅಂಗಡಿಗಳಿಗೆ ಭೇಟಿ ನೀಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಅಂಗಡಿಗಳನ್ನು ಪರಿಶೀಲಿಸಲಾಯಿತು. ಅಂದಾಜು ೧.೫೦ ಕೆ.ಜಿ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ೪೦೦ ರೂಪಾಯಿ ದಂಡ ವಸೂಲಿ ಸಲಾಗಿದೆ ಎಂದು ಪ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.