*ಗೋಣಿಕೊಪ್ಪ, ಜೂ. ೧೮: ಹಾವು ಕಚ್ಚಿದ ನಂತರ ೨೪ ಗಂಟೆಯೊಳಗೆ ಗಾಯಾಳು ಬಗ್ಗೆ ವಿಶೇಷವಾಗಿ ನಿಗಾ ವಹಿಸುವುದು ಮುಖ್ಯವಾಗಿದೆ ಎಂದು ನರ ವಿಜ್ಞಾನಿ ಡಾ. ಅಮೀರ್‌ಮೊಯಿನ್ ಹೇಳಿದರು.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಲೋಪಮುದ್ರ ಮೆಡಿಕಲ್ ಸೆಂಟರ್ ಸಹಯೋಗದಲ್ಲಿ ಆಸ್ಪತ್ರೆ ಆವರಣದಲ್ಲಿ ಹಾವು ಕಡಿತದ ಪರಿಣಾಮಗಳು ವಿಷಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಷಕಾರಿ ಹಾವು ಕಚ್ಚಿದ ೨೪ ಗಂಟೆಯ ಒಳಗೆ ಗಾಯಾಳು ಬಗ್ಗೆ ವಿಶೇಷವಾಗಿ ನಿಗಾ ವಹಿಸುವುದು ಮುಖ್ಯವಾಗಿದೆ. ಚಿಕಿತ್ಸೆ ತಡವಾದಷ್ಟು ಅಪಾಯವೆ ಹೆಚ್ಚು. ಒಂದೊAದು ಹಾವುಗಳ ಕಡಿತದಿಂದ ಒಂದೊAದು ರೀತಿಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ವಿಷ ಮೆದುಳು, ನರಗಳ ಮೂಲಕ ರಕ್ತ ಸಂಚಾರದೊAದಿಗೆ ಜೀವಕ್ಕೆ ಕಂಠಕವಾಗಲಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದ ಸಂದರ್ಭ ಮೂತ್ರಕೋಶ, ಹೃದಯ, ಮಾಂಸಖAಡಕ್ಕೂ ಕೂಡ ಹರಡಿ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಣ್ಣುರೆಪ್ಪೆ ಭಾಗದಲ್ಲಿ ಊದಿಕೊಳ್ಳುವುದು, ಕಣ್ಣು ಮಂಜಾಗುವುದು, ನಾಲಗೆ ಹೊರಗೆ ಹಾಕಲು, ಕುತ್ತಿಗೆ ಭಾಗ ಮೇಲೆತ್ತಲು ಆಗದಿರುವುದು, ಸ್ಟೊçÃಕ್, ಹೈಪರ್ ಬಿಪಿ ಕೂಡ ಇದರ ಒಂದಷ್ಟು ಲಕ್ಷಣಗಳಾಗಿವೆ. ಇದನ್ನು ಅರಿತುಕೊಂಡು ಭಯದಿಂದ ಹೊರ ಬಂದು ಆಸ್ಪತ್ರೆಗೆ ದಾಖಲಾಗಬೇಕಿದೆ ಎಂದರು.

ಉರಗ ಸಂರಕ್ಷಕ ಶರತ್‌ಕಾಂತ್ ಮಾತನಾಡಿ, ಜಿಲ್ಲೆಯಲ್ಲಿ ನಾಗರಹಾವು, ಕಾಳಿಂಗ ಸರ್ಪ, ಕೊಳಕು ಮಂಡಲ, ಉರಿ ಮಂಡಲ, ಕಟ್ಟುಹಾವು ವಿಷಕಾರಿ ಹಾವುಗಳಾಗಿವೆ. ಕಡಿಮೆ ಸಂಖ್ಯೆಯಲ್ಲಿ ಹಸಿರು ಬಣ್ಣದಿಂದ ಕೂಡಿರುವ ಮಲಬಾರ್ ವೈಪರ್‌ಪಿಟ್ ಕೂಡ ವಿಷಕಾರಿ ಹಾವಾಗಿದೆ. ಕೃಷಿಕರು, ಬಡ ವರ್ಗದವರು ಹಾವು ಕಡಿತಕ್ಕೆ ಜೀವ ಕಳೆದುಕೊಳ್ಳುತ್ತಿರುವುದು ಬೇಸರದ ವಿಚಾರವಾಗಿದ್ದು, ಹಾವು ಕಚ್ಚಿದಾಗ ಆದಷ್ಟು ಸಮಧಾನದಿಂದ ಇರುವಂತೆ ನೋಡಿಕೊಳ್ಳಬೇಕಿದೆ. ಭಯ ಹುಟ್ಟಿಸುವುದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಹಾವು ಯಾವುದೆಂದು ಗುರುತಿಸಿ ವೈದ್ಯರಲ್ಲಿ ಹೇಳಿಕೊಳ್ಳುವುದರಿಂದ ಅಪಾಯ ತಪ್ಪಿಸಲು ಸಾಧ್ಯವಿದೆ ಎಂದರು.

ಲೋಪಮುದ್ರ ಮೆಡಿಕಲ್ ಸೆಂಟರ್ ವ್ಯವಸ್ಥಾಪಕ ಪಾಲುದಾರ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಮಾತನಾಡಿ, ಹಾವು ಕಚ್ಚಿದಾಗ ಭಯ ಬಿಟ್ಟು ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ. ಹಾವುಗಳು ಕಚ್ಚಿದಾಗ ನ್ಯೂರೊ ಟಾಕ್ಸಿನ್ ಮತ್ತು ಹೆಮೋ ಟಾಕ್ಸಿಕ್‌ನಂತಹ ಎರಡು ವಿಧಗಳಲ್ಲಿ ವಿಷ ಕಾರ್ಯನಿರ್ವಹಿಸುತ್ತದೆ. ಇದನ್ನು ಪತ್ತೆ ಹಚ್ಚಲು ಯಾವ ಹಾವು ಕಚ್ಚಿದೆ ಎಂಬುವುದನ್ನು ಪತ್ತೆ ಮಾಡುವುದು ಕೂಡ ಮುಖ್ಯವಾಗಿದೆ. ಅದರಂತೆ ಚಿಕಿತ್ಸೆ ಕೂಡ ನೀಡಲಾಗುತ್ತದೆ ಎಂದರು. ವೈದ್ಯೆ ಡಾ. ರುತ್ ಅದ್ಲಾಕಾ ಮಾತನಾಡಿ, ಹಾವಿನ ಬಗ್ಗೆ ಮುಂಜಾಗ್ರತೆ ಅಗತ್ಯ. ಮನೆಯ ಸುತ್ತಲು ಸ್ವಚ್ಛತೆ, ಕಿಟಕಿ ಮೂಲಕ ಹಾವು ನುಗ್ಗದಂತೆ ತಡೆ ಮಾಡುವುದು, ಬೂಟ್ ಹಾಕಿಕೊಳ್ಳುವುದು, ರಾತ್ರಿ ಹೊತ್ತು ಟಾರ್ಚ್ ಬೆಳಕಿನಲ್ಲಿ ಸಂಚರಿಸುವುದು. ಆಸ್ಪತ್ರೆ ಪಾಲುದಾರ ಕ್ಯಾ. ಮುಕ್ಕಾಟೀರ ಎ. ಮಾದಪ್ಪ, ನೇತ್ರ ತಜ್ಞೆ ಡಾ. ಮುಕ್ಕಾಟೀರ ಸೌಮ್ಯ ನಾಣಯ್ಯ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.