*ಸಿದ್ದಾಪುರ, ಜೂ. ೧೮: ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭ ಗೊಂಡಿದ್ದರೂ ನಿರೀಕ್ಷಿತ ಮಳೆ ಯಾಗುತ್ತಿಲ್ಲ. ವಾರ್ಷಿಕ ೧೫೦ ರಿಂದ ೨೫೦ ಇಂಚಿಗೂ ಅಧಿಕ ಮಳೆಯಾ ಗುವ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಾವೇರಿ ಒಡಲು ಬರಿದಾಗಿದೆ.
ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಇದೆ. ಆದರೆ ಮಳೆ ಆರಂಭಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಮಳೆ ವಿಳಂಬದಿAದ ಕೃಷಿಕ ವರ್ಗ ಆತಂಕಗೊAಡಿದೆ. ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಜಲಮೂಲಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ.
ನಂಜರಾಯಪಟ್ಟಣ ಸೇರಿದಂತೆ ವಿವಿಧೆಡೆ ಕಾವೇರಿ ಒಡಲು ಬರಿದಾಗಿದ್ದು, ನೀರಿನ ಹರಿವೇ ಇಲ್ಲದೆ ನದಿಯ ಕಲ್ಲುಗಳು ಬಿಸಿಲಿನಲ್ಲಿ ಒಣಗುತ್ತಿವೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಾಂತರ ಮಂದಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ಮಳೆಯಿಲ್ಲದೆ ಬಡವಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಕೈಮೀರಿ ಕುಡಿಯುವ ನೀರಿಗೂ ಬರ ಬರುವ ಸಾಧ್ಯತೆಗಳಿದೆ.
ಪ್ರತಿವರ್ಷ ಜೂನ್ ಮೊದಲ ವಾರದಿಂದಲೇ ಸುರಿಯುತ್ತಿದ್ದ ಮಳೆ ಕಳೆದ ಕೆಲವು ವರ್ಷಗಳಿಂದ ವಾಡಿಕೆಯನ್ನೇ ಬದಲಾಯಿಸಿ ಕೊಂಡAತಿದೆ. ಈ ಬಾರಿಯಂತೂ ಬಿಸಿಲಿನ ಅತಿರೇಕಕ್ಕೆ ಜನ ಬೇಸತ್ತಿದ್ದು, ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಗಳಿ ರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
-ಅಂಚೆಮನೆ ಸುಧಿ